ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಿದ್ದರಾಮಯ್ಯ ಅವರು, ವಿರೋಧ ಪಕ್ಷದ ನಾಯಕರಾಗಿದ್ದಾರೆ. ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ತನ್ನದೇ ಆದ ಗೌರವ ಇರುತ್ತದೆ. ಯಾವುದೇ ವಿಷಯದ ಬಗ್ಗೆ ಬಿನ್ನಾಭಿಪ್ರಾಯವಿದ್ದರೆ ಅದನ್ನು ಬಲವಾದ ಅಭಿಪ್ರಾಯಗಳೊಂದಿಗೆ ವಿರೋಧಿಸಬೇಕು. ಯಾವುದೇ ದೈಹಿಕ ಕಾರ್ಯದಿಂದಲ್ಲ. ಇದನ್ನು ಎಲ್ಲರೂ ಪಾಲಿಸಬೇಕು ಎಂದು ತಿಳಿಸಿದ್ದಾರೆ.
Advertisement
ಮಾನ್ಯ @siddaramaiah ಅವರು, ವಿರೋಧ ಪಕ್ಷದ ನಾಯಕರಾಗಿದ್ದು, ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ತನ್ನದೇ ಆದ ಗೌರವ ಇರುತ್ತದೆ. ಯಾವುದೇ ವಿಷಯದ ಬಗ್ಗೆ ಬಿನ್ನಾಭಿಪ್ರಾಯವಿದ್ದರೆ ಅದನ್ನು ಬಲವಾದ ಅಭಿಪ್ರಾಯಗಳೊಂದಿಗೆ ವಿರೋಧಿಸಬೇಕು. ಯಾವುದೇ ದೈಹಿಕ ಕಾರ್ಯದಿಂದಲ್ಲ. ಇದನ್ನು ಎಲ್ಲರೂ ಪಾಲಿಸಬೇಕು.
— Basavaraj S Bommai (@BSBommai) August 18, 2022
Advertisement
ಸಿಎಂ ಬೊಮ್ಮಾಯಿ ಅವರೊಂದೇ ಅಲ್ಲದೇ ಬಿಜೆಪಿಯ ಹಲವು ನಾಯಕರು ಘಟನೆಯನ್ನು ಖಂಡಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಖಂಡಿಸಿದ್ರೆ, ಗೃಹ ಸಚಿವರು, ವಿಪಕ್ಷ ನಾಯಕರಿಗೆ ಭದ್ರತೆ ಒದಗಿಸ್ತೀವಿ ಎಂದಿದ್ದಾರೆ. ಅತ್ತ ಸಚಿವ ಎಸ್.ಟಿ. ಸೋಮಶೇಖರ್ ಮಾತನಾಡಿ, ಅವರೇನು ಮಾತಾಡ್ತಾ ಇದ್ದಾರೆ ಎಂಬುದು ಅವರಿಗೆ ಅರ್ಥ ಆಗ್ತಿಲ್ಲ. ಬರೀ ವಿವಾದಾತ್ಮಕ ಹೇಳಿಕೆಗಳನ್ನೇ ನೀಡ್ತಾರೆ. ಇನ್ಮುಂದಾದ್ರೂ ಅವರು ತೂಕದ ಮಾತಾಡ್ಲಿ ಎಂದು ಚಾಮುಂಡಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದರು. ಇದನ್ನೂ ಓದಿ: ನಮ್ಗೆ ಮೊಟ್ಟೆ ಎಸೆಯೋಕೆ ಬರಲ್ವಾ, ನಾವು ಶುರು ಮಾಡಿದ್ರೆ ಸಿಎಂ ಎಲ್ಲೂ ಓಡಾಡೋಕೆ ಆಗಲ್ಲ: ಸಿದ್ದರಾಮಯ್ಯ
Advertisement
ಕೊಡಗಿನ ಮಳೆ ಹಾನಿ ಪ್ರದೇಶದಲ್ಲಿ ಪ್ರವಾಸ ಕೈಗೊಂಡಿರುವ ಸಿದ್ದರಾಮಯ್ಯಗೆ ಹೋದಲ್ಲೆಲ್ಲಾ ಬಿಜೆಪಿ ಯುವ ಕಾರ್ಯಕರ್ತರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಮಡಿಕೇರಿಯ ತಿಮ್ಮಯ್ಯ ವೃತ್ತದಲ್ಲಿ ಸಿದ್ದರಾಮಯ್ಯ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದು ಆಕ್ರೋಶ ಹೊರಹಾಕಿದ್ದರು. ಶಾಂತಿಪ್ರಿಯ ಕೊಡಗಿಗೆ ಟಿಪ್ಪು ಪ್ರೇಮಿ ಸಿದ್ದರಾಮಯ್ಯ ಬರೋದು ಬೇಡ ಎಂದು ಘೋಷಣೆ ಕೂಗಿದ್ದರು. ಇದರಿಂದ ಕೆಲ ಹೊತ್ತು ಉದ್ವಿಗ್ನ ಸ್ಥಿತಿ ನಿರ್ಮಾಣ ಆಗಿತ್ತು.
Advertisement
ಇದಕ್ಕೂ ಮುನ್ನ, ಪೊನ್ನಂಪೇಟೆಯ ತಿತಿಮತಿಯಲ್ಲಿ ಸಿದ್ದರಾಮಯ್ಯ ಕಾರ್‌ಗೆ ಘೇರಾವ್ ಹಾಕಿ, ಕಪ್ಪು ಬಾವುಟ ಪ್ರದರ್ಶಿಸಿದ್ದರು. ಸಾವರ್ಕರ್ ಫೋಟೋವನ್ನು ಸಿದ್ದರಾಮಯ್ಯ ಮಡಿಲಲ್ಲಿಟ್ಟ ಪ್ರತಿಭಟನಾಕಾರರು, ಗೋ ಬ್ಯಾಕ್ ಸಿದ್ದು ಖಾನ್ ಎಂಬ ಘೋಷಣೆ ಕೂಗಿದ್ದರು. ಟಿಪ್ಪು ಭಕ್ತ ಸಿದ್ಧರಾಮಯ್ಯರಿಂದ ಕೊಡಗಿನ ಶಾಂತಿಗೆ ಭಂಗವಾಗಲಿದೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದರು. ಇದನ್ನೂ ಓದಿ: ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ