ವಿಜಯಪುರ: ಮದರಸಾ, ಉರ್ದು ಶಾಲೆಗಳಿಗೆ ಸಿದ್ದರಾಮಯ್ಯ ಸರ್ಕಾರ ಹಣ ಕೊಡುತ್ತಿದೆ. ಆದರೆ ಮದರಸಾಗಳಲ್ಲಿ ಏನು ಕಲಿಸುತ್ತಾರೆ? ದೇಶ ವಿರೋಧಿ ವಿಚಾರಗಳೇ ಇರ್ತಾವೆ, ಲವ್ ಜಿಹಾದ್ ಮಾಡಬೇಕು ಅಂತ ಕಲಿಸ್ತಾರೆ. ಅಂತಹ ಮದರಸಾಗಳಿಗೆ ಸರ್ಕಾರ ಹಣ ಕೊಡ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basanagouda Patil Yatnal) ಕಿಡಿಕಾರಿದರು.
ಬಿಡದಿಯಲ್ಲಿ ಪಾಕಿಸ್ತಾನ ಪರ ಬರಹ ವಿಚಾರವಾಗಿ ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಕರ್ನಾಟಕದಲ್ಲಿ ಈ ಸಿದ್ದರಾಮಯ್ಯ ಸರ್ಕಾರ ನೋಡಿದ್ರೆ ಸಾಕಾಗಿದೆ. ಹಿಂದೂ ಹೆಣ್ಣುಮಕ್ಕಳ ಕೊಲೆಗಳು ನಡೆಯುತ್ತಿವೆ. ರಾಜ್ಯ ಸರ್ಕಾರದ ಬಗ್ಗೆ ಭಯ ಉಳಿದಿಲ್ಲ. ಪಾಕಿಸ್ತಾನದ ಬಗ್ಗೆ ಬರಹ ಬರೀತಾರೆ ಅಂದರೆ, ಅವರು ಎಷ್ಟು ಸ್ವೇಚ್ಛಾಚಾರದಿಂದ ರಾಜ್ಯದಲ್ಲಿ ಜೀವನ ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತದೆ ಎಂದರು. ಇದನ್ನೂ ಓದಿ: ಹನಿಮೂನ್ ಮೂಡ್‌ನಲ್ಲಿ ಲವ್ ಬರ್ಡ್ಸ್- ನಾಗಚೈತನ್ಯ ಜೊತೆ ಶೋಭಿತಾ ಜಾಲಿ ರೈಡ್
ನಮ್ಮ ಗೃಹಮಂತ್ರಿಗಳಂತೂ ಏನು ಮಾಡುತ್ತಿಲ್ಲ. ಅವರು ಬಿಗ್ ಝೀರೋ, ರಾಜೀನಾಮೆ ಕೊಟ್ಟು ಬೇರೆ ಖಾತೆಯೂ ತಗೆದುಕೊಳ್ಳುತ್ತಿಲ್ಲ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸರ್ಕಾರವು ಮದರಸಾಗೆ, ಉರ್ದು ಶಾಲೆಗೆ ಹಣ ಕೊಡುತ್ತಿದೆ. ಮದರಸಾದಲ್ಲಿ ಏನು ಕಲಿಸುತ್ತಾರೆ? ಅಲ್ಲಿ ದೇಶ ವಿರೋಧಿ ವಿಚಾರಗಳ ಇರುತ್ತವೆ. ಪಾಕಿಸ್ತಾನಕ್ಕೆ ಜೈ ಅನ್ನೋದನ್ನೇ ಕಲಿಸುತ್ತಾರೆ ಅಲ್ಲಿ. ಇಸ್ಲಾಂ ಅಂದರೆ ಇಡೀ ಅನ್ಯ ಧರ್ಮದವರನ್ನ ನಾಶ ಮಾಡಬೇಕು. ಅಲ್ಲಿ ಲವ್ ಜಿಹಾದ್ ಮಾಡಬೇಕು ಎಂದು ಕಲಿಸುತ್ತಾರೆ. ಸಿದ್ದರಾಮಯ್ಯ ಸರ್ಕಾರ ಅವರಿಗೆ ಹಣ ಕೊಡುತ್ತಿರುವುದರಿಂದ ಅವರಿಗೆ ದೊಡ್ಡ ಶಕ್ತಿ ಬಂದಿದೆ ಎಂದು ದೂರಿದರು. ಇದನ್ನೂ ಓದಿ: ಚಾಮರಾಜನಗರ | ತಲೆಯಲ್ಲಿ ಕೂದಲು ಇಲ್ಲ ಎಂದು ಪತ್ನಿಯ ಟಾರ್ಚರ್ – ಮನನೊಂದು ಪತಿ ಆತ್ಮಹತ್ಯೆ
ಮುಸ್ಲಿಂ ಯುವತಿಯರಿಗೆ ಆತ್ಮರಕ್ಷಣೆ ತರಬೇತಿ ವಿಚಾರವಾಗಿ ಪ್ರತಿಕ್ರಿಯಿಸಿ, ಮುಸ್ಲಿಂ ಯುವತಿಯರಿಗೆ ಆತ್ಮರಕ್ಷಣೆ ಕಲಿಸಿದರೆ, ನಿತ್ಯ ನಮ್ಮ ಹೆಣ್ಣು ಮಕ್ಕಳ ಜೊತೆಗೆ ಹೊಡೆದಾಡಬೇಕಾ? ಮುಸ್ಲಿಂ ಹೆಣ್ಣುಮಕ್ಕಳಿಗೆ ಅನ್ಯಾಯವಾಗಿದೆಯಾ? ಅಂತ ಪ್ರಶ್ನೆ ಮಾಡಿದ್ರು. ಇದನ್ನೂ ಓದಿ: ಪುಲ್ವಾಮಾ ಸ್ಟೈಲ್ ದಾಳಿ – ಪಾಕ್ 90 ಸೈನಿಕರ ಹತ್ಯೆ: ಬಲೂಚ್ ಲಿಬರೇಶನ್ ಆರ್ಮಿ ಘೋಷಣೆ
ಶುಕ್ರವಾರ ಹಾವೇರಿಯಲ್ಲಿ ಹಿಂದೂ ಯುವತಿಯನ್ನ ಮುಸ್ಲಿಂ ಯುವಕ ಕೊಲೆ ಮಾಡಿದ್ದಾನೆ. ನಿರಂತರವಾಗಿ ಹಿಂದೂ ಹಾಗೂ ದಲಿತ ಹೆಣ್ಣು ಮಕ್ಕಳ ಮೇಲೆ ಈ ಸರ್ಕಾರದಿಂದ ದೌರ್ಜನ್ಯ ನಡೆಯುತ್ತಿದೆ. ಇನ್ನೊಂದಿಷ್ಟು ದಿನಗಳಲ್ಲಿ ಜನರೇ ದಂಗೆ ಏಳುತ್ತಾರೆ ಎಂದು ಹೇಳಿದರು.