ತುಮಕೂರು: ಅಡಿಕೆ ಎಲೆ ಮಾರಿದ್ದ ಒಂದೂವರೆ ಸಾವಿರ ಹಣದ (Money) ವಿಚಾರವಾಗಿ ತಂದೆ-ಮಗನ ಮಧ್ಯೆ ಮಾತಿಗೆ ಮಾತು ಬೆಳೆದ ಪರಿಣಾಮ ಮಗ (Son) ತಂದೆಯನ್ನೇ (Father) ಹತ್ಯೆಗೈದ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ.
ಜಿಲ್ಲೆಯ ಗುಬ್ಬಿ (Gubbi) ತಾಲೂಕಿನ ಕಡಬ ಗ್ರಾಮದಲ್ಲಿ ಘಟನೆ ನಡೆದಿದ್ದು, ತಂದೆ ರೇಣುಕಯ್ಯ (65) ಮಗನಿಂದ ಕೊಲೆಯಾಗಿದ್ದಾರೆ. ರಮೇಶ್ (31) ತಂದೆಯನ್ನೇ ಹತ್ಯೆ ಮಾಡಿದ ಮಗ. ಅಡಿಕೆ ಎಲೆ ಮಾರಿದ್ದ ಒಂದೂವರೆ ಸಾವಿರ ಹಣದ ವಿಚಾರವಾಗಿ ರಮೇಶ್ ತಂದೆಯನ್ನು ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಸಮುದ್ರದಲ್ಲಿ ಈಜಲು ಹೋದ ಪ್ರವಾಸಿಗ ಸಾವು – ಮೂವರ ರಕ್ಷಣೆ
- Advertisement -
ಭಾನುವಾರ ಬೆಳಗ್ಗೆ ಅಡಿಕೆ ಎಲೆ ಮಾರಿ ರಮೇಶ್ ತನ್ನ ಬಳಿ ಒಂದೂವರೆ ಸಾವಿರ ಹಣವನ್ನು ತನ್ನ ಬಳಿ ಇಟ್ಟುಕೊಂಡಿದ್ದ. ಅದೇ ರಾತ್ರಿ ತಂದೆ ರೇಣುಕಯ್ಯ ಮಗನ ಬಳಿ ಎಲೆ ಮಾರಿದ ಹಣವನ್ನು ಕೇಳಿದ್ದಾರೆ. ಇದೇ ವಿಚಾರವಾಗಿ ತಂದೆ-ಮಗನ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಕುಡಿದ ಮತ್ತಿನಲ್ಲಿದ್ದ ರಮೇಶ್ ಮಚ್ಚಿನಿಂದ ತಂದೆ ರೇಣುಕಯ್ಯ ಮೇಲೆ ದಾಳಿ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ರೇಣುಕಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರೋಪಿ ರಮೇಶ್‌ನನ್ನು ಗುಬ್ಬಿ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಉತ್ತರಕನ್ನಡದಲ್ಲಿ ಡೆಂಗ್ಯೂಗೆ ಇನ್ನೊಬ್ಬ ವ್ಯಕ್ತಿ ಬಲಿ- ಸಾವಿನ ಸಂಖ್ಯೆ 2ಕ್ಕೆ ಏರಿಕೆ
Web Stories