ಚೆನ್ನೈ: ಮಂಗಳವಾರ ಸಾರ್ವಜನಿಕ ರಂಗದ ರಾಷ್ಟ್ರೀಕೃತ ಬ್ಯಾಂಕ್‍ಗಳ ಬಂದ್ ಗೆ ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟದ (ಎಐಬಿಒಸಿ) ಕಾರ್ಯದರ್ಶಿ ಡಿ. ಥಾಮಸ್ ಫ್ರಾಂಕೋ ರಾಜೇಂದ್ರ ದೇವ್ ಕರೆ ನೀಡಿದ್ದಾರೆ.
ಶುಕ್ರವಾರ ನಡೆದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯುನಿಯನ್ (ಯುಎಫ್‍ಬಿಯು), ಭಾರತೀಯ ಬ್ಯಾಂಕ್‍ಗಳ ಒಕ್ಕೂಟ, ವಾಣಿಜ್ಯ ಸೇವಾ ಇಲಾಖೆ ಮತ್ತು ಮುಖ್ಯ ಕಾರ್ಮಿಕ ಆಯುಕ್ತರ ಸಭೆ ವಿಫಲವಾಗಿದ್ದರಿಂದ ಸಾರ್ವಜನಿಕ ವಲಯದ ಬ್ಯಾಂಕ್‍ಗಳ ಬಂದ್ ಗೆ ಕರೆ ನೀಡಲಾಗಿದೆ.
Advertisement
ಸರ್ಕಾರಿ ಸ್ವಾಮ್ಯದ ಬ್ಯಾಂಕ್‍ಗಳು ಮತ್ತು ಖಾಸಗಿ ಬ್ಯಾಂಕ್‍ಗಳನ್ನು ಸದ್ಯ ವಿಲೀನಗೊಳಿಸಲು ಸಾಧ್ಯವಿಲ್ಲ. ಬಂದ್ ಕರೆ ನೀಡಿರುವುದನ್ನು ವಾಪಸ್ ಪಡೆಯಬೇಕು ಎಂದು ಭಾರತೀಯ ಬ್ಯಾಂಕ್‍ಗಳ ಒಕ್ಕೂಟ ಹಾಗೂ ವಾಣಿಜ್ಯ ಸೇವಾ ಇಲಾಖೆ ತಿಳಿಸಿವೆ. ಇದರಿಂದ ಬೇಸರವಾಗಿದೆ. ಅವರ ಪರ ನಿರ್ಧಾರ ಕೈಗೊಳ್ಳಲು ಬೇರೆ ಅವಕಾಶಗಳು ನಮ್ಮ ಮುಂದಿಲ್ಲ, ಹಾಗಾಗಿ ಒಂದು ದಿನದ ಮುಷ್ಕರ ಕೈಗೊಳ್ಳಲಾಗುತ್ತಿದೆ ಎಂದು ಡಿ. ಥಾಮಸ್ ಫ್ರಾಂಕೋ ರಾಜೇಂದ್ರ ದೇವ್ ಅವರು ತಿಳಿಸಿದ್ದಾರೆ.
Advertisement
Advertisement
ಖಾಸಗಿ ಬ್ಯಾಂಕ್‍ಗಳಾದ ಐಸಿಐಸಿಐ, ಹೆಚ್‍ಡಿಎಫ್‍ಸಿ, ಆ್ಯಕ್ಸಿಸ್, ಕೊಟಕ್ ಮಹೀಂದ್ರಾ ಬ್ಯಾಂಕ್‍ಗಳ ಎಂದಿನಂತೆ ತಮ್ಮ ಕಾರ್ಯವನ್ನು ನಿರ್ವಹಿಸಲಿವೆ. ಆದರೆ ಖಾಸಗಿ ಬ್ಯಾಂಕ್‍ಗಳ ಚೆಕ್ ಕ್ಲೀಯರೆನ್ಸ್ ನಲ್ಲಿ ವಿಳಂಭವಾಗುವ ಸಾಧ್ಯತೆಗಳಿವೆ.
Advertisement
ಮಂಗಳವಾರದಂದು ನಡೆಯುವ ಬಂದ್‍ನಲ್ಲಿ ದೇಶಾದ್ಯಂತ 10 ಲಕ್ಷಕ್ಕೂ ಅಧಿಕ ಬ್ಯಾಂಕ್ ಉದ್ಯೋಗಿಗಳು ಪಾಲ್ಗೊಳಲಿದ್ದಾರೆ ಎಂದು ಎಐಬಿಒಸಿ ತಿಳಿಸಿದೆ.