ಬೆಂಗಳೂರು: ಪತ್ನಿಯಿಂದ ಕಿರಕುಳ ತಾಳಲಾರದೇ ಬ್ಯಾಂಕ್ ಉದ್ಯೋಗಿಯೊಬ್ಬರು (Bank Employee) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಗಿರಿನಗರದಲ್ಲಿ (Bengaluru Girinagar) ನಡೆದಿದೆ.
ಗಗನ್ ರಾವ್ ನೇಣಿಗೆ ಶರಣಾದ ಪತಿ. 8 ತಿಂಗಳ ಹಿಂದಷ್ಟೇ ಮೇಘನಾ ಜಾವ್ ಅವರೊಂದಿಗೆ ಗಗನ್ ರಾವ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬ್ಯಾಂಕ್ ಉದ್ಯೋಗಿಯಾಗಿದ್ದ ಗಗನ್ ಪತ್ನಿ ವಿರುದ್ಧ ಕಿರುಕುಳ ಆರೋಪ ಮಾಡಿ ನೇಣಿಗೆ ಶರಣಾಗಿದ್ದಾರೆ. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ (Girinagar Police Station) ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಿಧಾನಸೌಧದಲ್ಲೇ ಟೆರೆರಿಸ್ಟ್‌ಗಳನ್ನ ಇಟ್ಕೊಂಡು ಪರಪ್ಪನ ಅಗ್ರಹಾರದ ಉಗ್ರರ ಬಗ್ಗೆ ಏನ್ ಚರ್ಚೆ ಮಾಡ್ತೀರಾ? – HDK ಕಿಡಿ
ಪತಿಯ ಮೇಲೆಯೇ ಅನುಮಾನಪಡ್ತಿದ್ದ ಪತ್ನಿ:
ಮೇಘನಾ, ಗಗನ್ ಮೇಲೆ ಅನುಮಾನ ಪಡುತ್ತಿದ್ದಳಂತೆ. ಇದೇ ವಿಚಾರಕ್ಕೆ ಮನೆಯಲ್ಲಿ ಹಲವು ಬಾರಿ ಗಲಾಟೆ ಆಗಿತ್ತು. ಬಳಿಕ ಕೋಪಿಸಿಕೊಂಡು ತವರಿಗೆ ಹೋಗಿದ್ದ ಮೇಘನಾ, ಇತ್ತೀಚೆಗಷ್ಟೇ ಗಂಡನ ಮನೆಗೆ ವಾಪಸ್ ಬಂದಿದ್ದಳು. ನಿನ್ನೆ ರಾತ್ರಿ ಮತ್ತೆ ಗಲಾಟೆ ನಡೆದಿದೆ. ಇದರಿಂದ ಬೇಸತ್ತ ಗಗನ್ ನೇಣಿಗೆ ಶರಣಾಗಿದ್ದಾರೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಕೇಸ್‌ಗೆ ಟ್ವಿಸ್ಟ್| ಫ್ಯಾಶನ್ ಡಿಸೈನರ್ ವಿರುದ್ಧ ಮೊದಲೇ ದೂರು ದಾಖಲಿಸಿದ್ದ ಇವಿಪಿ ಮಾಲೀಕ ಸಂತೋಷ್ ರೆಡ್ಡಿ
ಸದ್ಯ ಮೃತ ಗಗನ್ ಕುಟುಂಬಸ್ಥರು, ಮೇಘನಾ ವಿರುದ್ಧ ಮಾಟ ಮಂತ್ರ ಮಾಡಿ ಕಿರುಕುಳ ನೀಡಿರುವ ಆರೋಪ ಮಾಡುತ್ತಿದ್ದಾರೆ. ಇದನ್ನೂ ಓದಿ: ಡಿಪ್ಲೋಮಾ ಲ್ಯಾಟರಲ್ ಎಂಟ್ರಿ ವಿದ್ಯಾರ್ಥಿಗಳ ಶುಲ್ಕ ಪಾವತಿಗೆ VTU ಸೂಚನೆ



