Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ವಿಧಾನಸೌಧದಲ್ಲೇ ಟೆರೆರಿಸ್ಟ್‌ಗಳನ್ನ ಇಟ್ಕೊಂಡು ಪರಪ್ಪನ ಅಗ್ರಹಾರದ ಉಗ್ರರ ಬಗ್ಗೆ ಏನ್ ಚರ್ಚೆ ಮಾಡ್ತೀರಾ? – HDK ಕಿಡಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ವಿಧಾನಸೌಧದಲ್ಲೇ ಟೆರೆರಿಸ್ಟ್‌ಗಳನ್ನ ಇಟ್ಕೊಂಡು ಪರಪ್ಪನ ಅಗ್ರಹಾರದ ಉಗ್ರರ ಬಗ್ಗೆ ಏನ್ ಚರ್ಚೆ ಮಾಡ್ತೀರಾ? – HDK ಕಿಡಿ

Bengaluru City

ವಿಧಾನಸೌಧದಲ್ಲೇ ಟೆರೆರಿಸ್ಟ್‌ಗಳನ್ನ ಇಟ್ಕೊಂಡು ಪರಪ್ಪನ ಅಗ್ರಹಾರದ ಉಗ್ರರ ಬಗ್ಗೆ ಏನ್ ಚರ್ಚೆ ಮಾಡ್ತೀರಾ? – HDK ಕಿಡಿ

Public TV
Last updated: November 10, 2025 1:09 pm
Public TV
Share
2 Min Read
HDK 1
SHARE

ಬೆಂಗಳೂರು: ವಿಧಾನಸೌಧದಲ್ಲೇ ಟೆರೆರಿಸ್ಟ್‌ಗಳನ್ನ ಇಟ್ಕೊಂಡು ಪರಪ್ಪನ ಅಗ್ರಹಾರದ (Parappana Agrahara) ಟೆರೆರಿಸ್ಟ್‌ಗಳ ಬಗ್ಗೆ ಏನ್ ಚರ್ಚೆ ಮಾಡ್ತೀರಾ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಕಿಡಿಕಾರಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಬಗ್ಗೆ ಮಾತನಾಡಿದ ಅವರು, ಪರಪ್ಪನ ಅಗ್ರಹಾರದಲ್ಲಿ ಅಪರಾಧ ಮಾಡಿರುವವರ ರಕ್ಷಣೆಗೆ ಎಲ್ಲಾ ರೀತಿ ಸೌಲಭ್ಯಗಳನ್ನ ಕೊಡ್ತಿದ್ದಾರೆ. 3-4 ದಿನಗಳಿಂದ ವಿಡಿಯೋ ಹರಿದಾಡುತ್ತಿದೆ. ಸೆಂಟ್ರಲ್ ಜೈಲ್‌ನಲ್ಲಿ ಇದೇನು ಹೊಸದಲ್ಲ. ಹಿಂದೆ ಹಿರಿಯ ಅಧಿಕಾರಿಗಳ ನಡುವೆ ಘರ್ಷಣೆ ಆದಾಗ ದೊಡ್ಡ ರಾಜಕೀಯ ಆಗಿತ್ತು. ವಿಧಾನಸೌಧದಲ್ಲೇ ಟೆರೆರಿಸ್ಟ್‌ಗಳನ್ನ ಇಟ್ಕೊಂಡು ಪರಪ್ಪನ ಅಗ್ರಹಾರದ ಟೆರೆರಿಸ್ಟ್‌ಗಳ ಬಗ್ಗೆ ಏನು ಚರ್ಚೆ ಮಾಡ್ತೀರಾ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.ಇದನ್ನೂ ಓದಿ: ಸರ್ಕಾರಿ ಕೆಲಸದ ಆಮಿಷ – ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಗೆಳೆಯನಿಂದ ಯುವತಿಗೆ 26 ಲಕ್ಷ ವಂಚನೆ

ಈ ಕುರಿತು ಗೃಹ ಸಚಿವರು ತನಿಖೆ ಮಾಡಿ, ಸತ್ಯಾಸತ್ಯತೆ ತಿಳಿದುಕೊಳ್ತೀನಿ ಅಂದಿದ್ದಾರೆ. ಜೈಲಿನಲ್ಲಿ ಏನ್ ನಡೆಯುತ್ತೆ ಅನ್ನೋದು ಪರಮೇಶ್ವರ್ ಅವರಿಗೆ ಗೊತ್ತಿಲ್ಲವಾ? ಮಾಧ್ಯಮಗಳಲ್ಲಿ ಯಾವ ರೀತಿ ಖೈದಿಗಳಿಗೆ ಸೌಲಭ್ಯ ಕೊಟ್ಟಿದ್ದಾರೆ ಅಂತ ವಿಡಿಯೋ ಬರ್ತಿದೆ. ರಾಜ್ಯದ ಜನತೆ ಮುಂದೆ ಎಲ್ಲವನ್ನು ತೋರಿಸಿದ್ದಾರೆ. ಹೀಗೆ ಇರೋವಾಗ ಯಾರ ಬಗ್ಗೆ ಯಾವ ವಿಷಯಕ್ಕೆ ತನಿಖೆ ಮಾಡ್ತೀರಾ ನೀವು? ನಿಮ್ಮ ಕಣ್ಣ ಮುಂದೆಯೇ ನಡೆಯುತ್ತಿದೆ. ತನಿಖೆ ಮತ್ತೆ ಮಾಡಿ ಏನ್ ಮಾಡ್ತೀರಾ? ಎಂದು ವಾಗ್ದಾಳಿ ನಡೆಸಿದ್ದಾರೆ.

ವ್ಯವಸ್ಥೆ ಯಾಕೆ ಹದಗೆಟ್ಟಿದೆ ಅಂತ ಸಿಎಂ ಮತ್ತು ಗೃಹ ಸಚಿವರನ್ನ ಕೇಳಬೇಕು. ಈ ಸರ್ಕಾರದ ವೈಫಲ್ಯ ಪ್ರತಿನಿತ್ಯ ಕಾಣ್ತಿದೆ. ಈ ಸರ್ಕಾರ ಸರಿಯಾದ ರೀತಿಯಲ್ಲಿ ನಡೆದಿದ್ದರೆ, ಸರ್ಕಾರವನ್ನು ಸರಿಯಾಗಿ ನಡೆಸಿದ್ದರೆ ಏನು ಆಗ್ತಿರಲಿಲ್ಲ. ಸಿಎಂ ಅವರು ಬಿಜೆಪಿ ಅವರಿಗೆ ಮಾನ ಇಲ್ಲ ಅಂತ ಹೇಳಿದ್ದಾರೆ. ಹಾಗಾದರೆ ಇವರಿಗೆ ಏನಿದೆ? ಸಿಎಂ ಅವರಿಗೆ ಏನಿದೆ? ರಾಜ್ಯದ ಸಿಎಂ ಆಗಿ ಅನುಭವ ಎಷ್ಟಿದೆ ನಿಮಗೆ. ಇಂತಹ ಅನುಭವ ಇಟ್ಟುಕೊಂಡು ಈ ರೀತಿ ನಡೆಯುವುದನ್ನು ಇಷ್ಟೊಂದು ಲೈಟ್ ಆಗಿ ತಗೊಂಡಿದ್ದೀರಾ. ಏನು ನಡೆದೇ ಇಲ್ಲದಂತೆ ಸಿಎಂ ಮಾತಾಡ್ತಾರೆ. ತಿಳಿದುಕೊಳ್ತೀನಿ ಅಂತ ಹೇಳ್ತಾರೆ. ನನಗೇನು ವಿಷಯ ಗೊತ್ತಿಲ್ಲ. ಸಿಎಂಗೆ ಇಂಟಲಿಜೆನ್ಸ್ ಇಲ್ಲವಾ. ಪ್ರತಿದಿನ ಬೆಳಗ್ಗೆ ಸಿಎಂ ಹತ್ತಿರ ಬರೋರು ಏನ್ ಮಾಹಿತಿ ಕೊಡ್ತಾರೆ? ಈ ರೀತಿ ಲಘುವಾಗಿ ಮಾತಾಡಿಕೊಂಡು ಕಾಲ ಹರಣ ಮಾಡ್ತಿದ್ದಾರೆ. ಇದೆಲ್ಲವನ್ನು ನೋಡಿದ್ರೆ ಇದೆಲ್ಲದ್ದಕ್ಕೂ ಇವರೇ ಪ್ರೋತ್ಸಾಹ ಕೊಡ್ತಾರೇನೋ ಅಂತ ಜನರ ಅಭಿಪ್ರಾಯ ಇದೆ ಎಂದಿದ್ದಾರೆ.

ಪರಮೇಶ್ವರ್ ರಾಜೀನಾಮೆಗೆ ಬಿಜೆಪಿ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜೀನಾಮೆ ಕೊಡಿ ಅಂತ ಒತ್ತಡ ಹಾಕಿದ ಕೂಡಲೇ ರಾಜೀನಾಮೆ ಕೊಡೋ ಕಾಲನಾ ಇದು? ಯಾವುದೇ ಕಾರಣಕ್ಕೂ ಈ ಸರ್ಕಾರದಲ್ಲಿ ರಾಜೀನಾಮೆ ಕೊಡುವ ಪಾವಿತ್ರ್ಯತೆ, ನೈತಿಕತೆ ಉಳಿಸಿಕೊಂಡವರು ಯಾರು ಇಲ್ಲ ಎಂದು ಹೇಳಿದ್ದಾರೆ.

ವಿಧಾನಸೌಧದಲ್ಲಿ ಟೆರೆರಿಸ್ಟ್‌ಗಳು ಇದ್ದಾರೆ ಎಂಬ ತಮ್ಮ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಅವರು, ವಿಧಾನಸೌಧದ ಟೆರೆರಿಸ್ಟ್ ಗಳಿಗೂ, ವಿಧಾನಸೌಧದಲ್ಲಿ ಇರೋ ಟೆರೆರಿಸ್ಟ್‌ಗಳಿಗೆ ವ್ಯತ್ಯಾಸ ಇದೆ. ವಿಧಾನಸೌಧದಲ್ಲಿ ಇರೋ ಟೆರೆರಿಸ್ಟ್‌ಗಳು ಯಾರು ಅಂತ ಮಾಧ್ಯಮಗಳಿಗೆ ಗೊತ್ತಿದೆ. ಜನರೂ ಅ ಟೆರೆರಿಸ್ಟ್‌ಗಳ ಬಗ್ಗೆ ಮಾತಾಡ್ತಾರೆ. ಭಯವೂ ಬೀಳ್ತಾರೆ. ಪರಪ್ಪನ ಅಗ್ರಹಾರದ ಟೆರೆರಿಸ್ಟ್‌ಗಳಿಗಿಂತ ವಿಧಾನಸೌಧದಲ್ಲಿ ಇರೋ ಟೆರೆರಿಸ್ಟ್‌ಗಳು ಇನ್ನು ಡೇಂಜರ್ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಲೈಂಗಿಕ ಕಿರುಕುಳ ಕೇಸ್‌ಗೆ ಟ್ವಿಸ್ಟ್‌| ಫ್ಯಾಶನ್​ ಡಿಸೈನರ್​ ವಿರುದ್ಧ ಮೊದಲೇ ದೂರು ದಾಖಲಿಸಿದ್ದ ಇವಿಪಿ ಮಾಲೀಕ ಸಂತೋಷ್ ರೆಡ್ಡಿ

TAGGED:bengalurubjpcongresshd kumaraswamyjdsparappana agraharaಕಾಂಗ್ರೆಸ್ಜೆಡಿಎಸ್ಪರಪ್ಪನ ಅಗ್ರಹಾರಬಿಜೆಪಿಬೆಂಗಳೂರುಹೆಚ್‍ಡಿ ಕುಮಾರಸ್ವಾಮಿ
Share This Article
Facebook Whatsapp Whatsapp Telegram

Cinema news

Deepika Padukone Ranveer Singh
2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ದಂಪತಿ
Bollywood Cinema Latest Top Stories
darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood

You Might Also Like

Modi 1
Latest

ಕಾಂಗ್ರೆಸ್‌ ಜೊತೆ ಸೇರಿ ಟಿಎಂಸಿ ಪಿತೂರಿ, ಬಂಗಾಳದ ಮಹಿಳೆಯರಿಗೆ ಮತ್ತೆ ದ್ರೋಹ: ಮೋದಿ ವಾಗ್ದಾಳಿ

Public TV
By Public TV
13 minutes ago
italy police
Crime

ಇಟಲಿಯಲ್ಲಿ ಇಬ್ಬರು ಭಾರತೀಯರಿಗೆ ಗುಂಡಿಕ್ಕಿ ಹತ್ಯೆ

Public TV
By Public TV
18 minutes ago
vinay kulkarni daughters
Dharwad

ಜೈಲಲ್ಲಿರೋ ತಂದೆ ವಿನಯ್‌ ಕುಲಕರ್ಣಿ ನೆನೆದು ಫೋಟೊ ಜೊತೆ ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡ ಮಕ್ಕಳು

Public TV
By Public TV
46 minutes ago
Chamarajanagara
Chamarajanagar

ಚಾ.ನಗರ ಆಕ್ಸಿಜನ್ ದುರಂತ ಸಂತ್ರಸ್ತರ ಹೋರಾಟಕ್ಕೆ ಜಯ – 21 ಮಂದಿಗೆ ಸರ್ಕಾರಿ ಕೆಲಸ

Public TV
By Public TV
1 hour ago
stop rape
Crime

ಕಾಡಿನಲ್ಲಿ ಅಪ್ರಾಪ್ತೆ ಮೇಲೆ ರೇಪ್‌ ಆರೋಪ – ಧರ್ಮಸ್ಥಳ ಪೊಲೀಸರಿಂದ ಇಬ್ಬರ ಬಂಧನ

Public TV
By Public TV
2 hours ago
kalaburagi police
Kalaburagi

ಕಲಬುರಗಿ| ವಾಹನ ಡಿಕ್ಕಿ ಹೊಡೆದು ಪೊಲೀಸ್‌ ಕಾನ್‌ಸ್ಟೆಬಲ್‌ ಸಾವು

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?