– ಆಸ್ಪತ್ರೆಯ ದಿಂಬು, ಹಾಸಿಗೆ, ಫ್ಯಾನ್ ಎತ್ತಿಕೊಂಡು ಹೋದ ವಿದ್ಯಾರ್ಥಿಗಳು
– ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳು ವೈರಲ್
ಢಾಕಾ: ಬಾಂಗ್ಲಾದೇಶದಲ್ಲಿ (Bangladesh) ಮತ್ತೆ ವಿದ್ಯಾರ್ಥಿಗಳು ಬೀದಿಗೆ ಇಳಿದಿದ್ದಾರೆ. ಈ ಬಾರಿ ಆಸ್ಪತ್ರೆಯ (Hospital) ವಿರುದ್ಧ ನಡೆಸಿದ ಪ್ರತಿಭಟನೆ (Protest) ಕೊನೆಗೆ ಹಲವು ಕಾಲೇಜುಗಳ ವಿದ್ಯಾರ್ಥಿಗಳ ಮಧ್ಯೆ ತಿರುಗಿ ಘರ್ಷಣೆ ಉಂಟಾಗಿ ಮೂವರು ಸಾವನ್ನಪ್ಪಿದ್ದಾರೆ.
Advertisement
ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿ ಸಾವಪ್ಪಿದ್ದಕ್ಕೆ ವಿದ್ಯಾರ್ಥಿಗಳು ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ವಾಹನಗಳು, ಲ್ಯಾಬ್‌ಗಳನ್ನು ಧ್ವಂಸ ಮಾಡಿ ಸುಮಾರು 35 ಕೋಟಿ ರೂ. ಹಾನಿ ಮಾಡಿದ್ದಾರೆ.
Advertisement
মাহবুবুর রহমান মোল্লা কলেজ বনাম কবি নজরুল কলেজ সংঘ’র্ষের একাংশের স্থিরচিত্র!
একজন গণপিটুনিতে জায়গায় শেষ!
এই নৃশং/সতার শেষ কোথায়?
#BangladeshCrisis pic.twitter.com/OqBqAUt9zM
— BDforNouka (@VNouka) November 25, 2024
Advertisement
ಡೆಂಗ್ಯೂನಿಂದ ಬಳಲುತ್ತಿದ್ದ 12ನೇ ತರಗತಿಯ ವಿದ್ಯಾರ್ಥಿ ಅಭಿಜಿತ್ ನ.16 ರಂದು ಆಸ್ಪತ್ರೆಗೆ ದಾಖಲಾಗಿದ್ದ. ನ.18 ರಂದು ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದ. ಇದನ್ನೂ ಓದಿ: ಮತ್ತೆ ಕೆಣಕಿದ ಹಿಜ್ಬುಲ್ಲಾ – 250 ರಾಕೆಟ್, ಡೆಡ್ಲಿ ಡ್ರೋನ್‌ಗಳಿಂದ ಇಸ್ರೇಲ್ ಮೇಲೆ ಭೀಕರ ದಾಳಿ
Advertisement
ನ. 19 ರಂದು ಅವನ ಸ್ನೇಹಿತರಾದ ಸಿಯಾಮ್ ಮತ್ತು ಅಫ್ತಾಬ್ ಅವರು ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡದ್ದಕ್ಕೆ ಅಭಿಜಿತ್ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಪ್ರಕಟಿಸಿದ್ದರು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಹಲವು ವಿದ್ಯಾರ್ಥಿಗಳು ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದರು.
Pls Don’t Mob Lynch The Kid!!!
They R Beating Anyone They R Getting Infront Of DMRC
Pls Show Some Humanity
They R Kids #BangladeshCrisis pic.twitter.com/ba63fdttdA
— বাংলার ছেলে 🇧🇩 (@iSoumikSaheb) November 25, 2024
ಭಾನುವಾರ ಈ ಪ್ರತಿಭಟನೆ ವಿಕೋಪಕ್ಕೆ ಹೋಗಿದೆ. ಸುಹ್ರಾವರ್ದಿ ಕಾಲೇಜಿನ ಮೇಲೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು ದಾಳಿ ಮಾಡಿ ದಾಂಧಲೆ ಮಾಡಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಢಾಕಾದ ಕಾಲೇಜುಗಳು, ಹಾಸ್ಟೆಲ್‌ಗಳು ಮತ್ತು ಪೂಜಾ ಸ್ಥಳಗಳ ಸುತ್ತಲೂ ಈಗ ಸೇನೆಯನ್ನು ನಿಯೋಜಿಸಲಾಗಿದೆ.
ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಸುಹ್ರವರ್ದಿ ಕಾಲೇಜು ಪ್ರಾಂಶುಪಾಲ ಕಾಕೋಲಿ ಮುಖರ್ಜಿ, ಸುಮಾರು 35 ಕೋಟಿ ರೂ.ನಷ್ಟವಾಗಿದೆ. ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯವನ್ನು ಕಲಿಸದ್ದಕ್ಕೆ ಪ್ರಾಂಶುಪಾಲನಾಗಿ ನನ್ನನ್ನು ಮತ್ತು ಶಿಕ್ಷಕರನ್ನು ದೂಷಿಸುತ್ತೇನೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳೇ ಪುಸ್ತಕ, ಹಣ, ಪ್ರಮಾಣಪತ್ರ, ದಾಖಲೆ, ದಿಂಬು, ಹಾಸಿಗೆಗಳನ್ನು ದೋಚಿ ಸಂಭ್ರಮಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.
মাহবুবুর রহমান মোল্লা কলেজ বনাম কবি নজরুল কলেজ সংঘ’র্ষের একাংশের স্থিরচিত্র!
একজন গণপিটুনিতে জায়গায় শেষ!
এই নৃশং/সতার শেষ কোথায়?
#BangladeshCrisis pic.twitter.com/OqBqAUt9zM
— BDforNouka (@VNouka) November 25, 2024
ಅಭಿಜಿತ್ ಸಾವಿಗೆ ಸಂಬಂಧಿಸಿದಂತೆ ನವೆಂಬರ್ 21 ರಂದು ನಡೆದ ಪ್ರತಿಭಟನೆಯಲ್ಲಿ ಸುಹ್ರವರ್ದಿ ಕಾಲೇಜು ಮತ್ತು ಕಬಿ ನಜ್ರುಲ್ ಕಾಲೇಜು ವಿದ್ಯಾರ್ಥಿಗಳು ಮುಲ್ಲಾ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಮುಲ್ಲಾ ಕಾಲೇಜು, ಢಾಕಾ ಕಾಲೇಜು, ಸಿಟಿ ಕಾಲೇಜು, ನೊಟ್ರೆ ಡೇಮ್ ಕಾಲೇಜು ಸೇರಿದಂತೆ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಮತ್ತೆ ಆಸ್ಪತ್ರೆಯ ಮುಂದೆ ಜಮಾಯಿಸಿ ವೈದ್ಯಕೀಯ ವಿದ್ಯಾರ್ಥಿಯ ಸಾವಿನ ವಿರುದ್ಧ ಪ್ರತಿಭಟನೆ ನಡೆಸಿದರು. ಈ ವೇಳೆ ಘರ್ಷಣೆಯಲ್ಲಿ 30 ಮಂದಿ ಗಾಯಗೊಂಡಿದ್ದರು.