ಬೆಂಗಳೂರು: ನಗರದಾದ್ಯಂತ ಮಳೆಯ ಅವಾಂತರದ ನಡುವೆ ನಾಗರಹಾವುಗಳ ಉಪಟಳವು ಹೆಚ್ಚಾಗಿದ್ದು ಈ ಕುರಿತು ನಾಗರೀಕರು ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ.
ಏಪ್ರಿಲ್, ಮೇ, ಜೂನ್ ತಿಂಗಳಲ್ಲಿ ಹಾವುಗಳ ಸಂತಾನೋತ್ಪತ್ತಿ ಹೆಚ್ಚಾಗಿರುತ್ತದೆ. ಈ ತಿಂಗಳಲ್ಲಿ ಹೆಚ್ಚು ಮರಿಗಳು ಮೊಟ್ಟೆಯೊಡೆದು ಹೊರ ಬರುತ್ತವೆ. ಹೀಗಾಗಿ ಎಲ್ಲಾ ಕಡೆ ಹಾವಿನ ಮರಿಗಳು ಪತ್ತೆಯಾಗುತ್ತಿವೆ. ಹೀಗಾಗಿ ನಾಗರೀಕರು ನಾಗರಹಾವುಗಳ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಾಗಿದೆ.
Advertisement
Advertisement
ಈಗಾಗಲೇ ನಗರದ ಹಲವು ಕಡೇ ಹಾವುಗಳು ಪತ್ತೆಯಾಗುತ್ತಿದ್ದು, ಬಿಬಿಎಂಪಿ ವನ್ಯಜೀವಿ ಘಟಕದ ಸ್ವಯಂ ಸೇವಕರಿಗೆ ದಿನಪೂರ್ತಿ ಕೆಲಸ ಹಾವು ಹಿಡಿಯುವುದೇ ಆಗಿದೆ. ಈ ಕುರಿತು ಸಹಾಯವಾಣಿ ಕೇಂದ್ರಕ್ಕೆ ಸಾಕಷ್ಟು ಕರೆಗಳು ಬರುತ್ತಿದ್ದು, ಹೆಚ್ಚಿನ ಕರೆಗಳು ಹಾವುಗಳಿಂದ ರಕ್ಷಿಸಿ ಎನ್ನುವುದೇ ಎಂಬುವುದು ವರದಿಯಾಗಿದೆ. ಸ್ವಯಂ ಸೇವಕರು ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಡುವ ಕಾರ್ಯ ಜೋರಾಗಿ ನಡೆದಿದೆ.
Advertisement
ಕೆಲವು ದಿನಗಳಲ್ಲಿ ಹೊರಮಾವು, ಹುಳಿಮಾವಿನಲ್ಲಿ ಅಡುಗೆ ಕೋಣೆಯಲ್ಲಿ ಅವಿತು ಕೊಂಡಿದ್ದ ನಾಗರಹಾವನ್ನು ಹಿಡಿದು ಕಾಡಿಗೆ ಬಿಡಲಾಗಿತ್ತು. ಅಲ್ಲದೇ ಓಎಂಬಿಆರ್ ಲೇಔಟ್‍ನಲ್ಲಿ ಮನೆ ಬಾಗಿಲ ಬಳಿ ಹಾವು ಕಾಣಿಸಿಕೊಂಡಿದೆ. ನಾಗರಬಾವಿಯ ಬಿಡಿಎ ಕಾಂಪ್ಲೆಕ್ಸ್‍ನಲ್ಲಿ ಗ್ಯಾಸ್ ಸಿಲಿಂಡರ್‍ನ ತಳಭಾಗದಲ್ಲಿ ಅಡಗಿದ್ದ ನಾಗರಹಾವಿನ ಮರಿ ಹಾಗೂ ಜಾಲಹಳ್ಳಿಯಲ್ಲಿ ದ್ವಿಚಕ್ರ ವಾಹನದಲ್ಲಿ ಅವಿತು ಕುಳಿತಿದ್ದ ಹಾವುಗಳನ್ನು ಸ್ವಯಂ ಸೇವಕರು ಹಿಡಿದು ರಕ್ಷಿಸಿದ್ದಾರೆ.
Advertisement
https://www.youtube.com/watch?v=6xB2Za5edAs