– ಬಾಳೆಕಾಯಿ ಚಿಪ್ಸ್ ತಯಾರಿಸಿ ಜೀವನ ಸಾಗಿಸ್ತಿದ್ದಾರೆ
ಮುಂಬೈ: ಕಠಿಣ ಪರಿಶ್ರಮ ಮತ್ತು ಶ್ರದ್ಧೆ ಎಂದಿಗೂ ವ್ಯರ್ಥವಾಗುವುದಿಲ್ಲ ಎಂಬುವುದಕ್ಕೆ ಈ ಕಥೆಯ ಸಾಕ್ಷಿ. ಎರಡು ಕಣ್ಣು ಕಾಣಿಸದಿದ್ದರೂ ವ್ಯಕ್ತಿಯೋರ್ವ ರಸ್ತೆ ಬದಿಯಲ್ಲಿ ಕುಳಿತು ಬಾಳೆಕಾಯಿ ಚಿಪ್ಸ್ ತಯಾರಿಸುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವ್ಯಕ್ತಿ ತನ್ನ ಎರಡು ಕಣ್ಣುಗಳನ್ನು ಕಳೆದುಕೊಂಡಿದ್ದು, ನಾಸಿನ್‍ನ ಮಖ್ಮಲಾಬಾದ್ ರಸ್ತೆ ಬದಿಯಲ್ಲಿ ಅಂಗಡಿ ಇಟ್ಟುಕೊಂಡಿರುವುದಾಗಿ ತಿಳಿಸಿದ್ದಾನೆ. ಇದನ್ನೂ ಓದಿ: ಕೊರೊನಾ ನಡುವೆ ಸಾವಿರಾರು ಬೆಂಬಲಿಗರೊಂದಿಗೆ ಎಂಎಲ್‍ಸಿ ಅದ್ದೂರಿ ಹುಟ್ಟುಹಬ್ಬ
ವೀಡಿಯೋದಲ್ಲಿ, ಬಾಳೆಕಾಯಿಯನ್ನು ಸಕ್ರಿಯವಾಗಿ ತುರಿದು ಬಾಣಲಿಗೆ ಬಿಡುತ್ತಾನೆ. ನಂತರ ಬಿಸಿ ಎಣ್ಣೆಯಲ್ಲಿ ಅದನ್ನು ಬೇಯಿಸಿ ದೊಡ್ಡ ಪಾತ್ರೆಗೆ ಹಾಕುತ್ತಾನೆ. ಬಳಿಕ ಸಹಾಯಕನೋರ್ವ ಅದನ್ನು ಮಸಾಲೆಯೊಂದಿಗೆ ಮಿಶ್ರಣ ಮಾಡಿ, ಪ್ಲಾಸ್ಟಿಕ್ ಕವರ್‌ನಲ್ಲಿ ಪ್ಯಾಕ್ ಮಾಡುವುದನ್ನು ಕಾಣಬಹುದಾಗಿದೆ.
View this post on Instagram
ಈ ವೀಡಿಯೋವನ್ನು ಸಂಸ್ಕರ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ವ್ಯಕ್ತಿಯನ್ನು ಗೌರವಿಸಿ. ನಾಸಿಕ್‍ನಲ್ಲಿ ನಿಮಗೆ ಯಾರಾದರೂ ತಿಳಿದಿದ್ದರೆ, ಈ ವ್ಯಕ್ತಿಯ ಬಳಿ ಬಾಳೆಕಾಯಿ ಚಿಪ್ಸ್ ಖರೀದಿಸಲು ಹೇಳಿ. ಅವರ ದೃಷ್ಟಿಯಲ್ಲಿ ಮರಳಿ ಪಡೆಯಲು ನಾವೆಲ್ಲರೂ ಒಟ್ಟಾಗಿ ಅವರಿಗೆ ಸಹಾಯ ಮಾಡೋಣ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಶಾರೂಖ್ ಮಗನ ಅರೆಸ್ಟ್ ಹಿಂದೆ ಬಿಜೆಪಿ ಉಪಾಧ್ಯಕ್ಷ – NCB ಅಧಿಕಾರಿಗಳಿಂದ್ಲೇ ಪಿತೂರಿ ಆರೋಪ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೋವನ್ನು ಇಲ್ಲಿಯವರೆಗೂ ಸುಮಾರು 12 ಮಿಲಿಯನ್‍ಗಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದು, ಈತನ ಸ್ಥಿತಿಗೆ ನೆಟ್ಟಿಗರು ಕಂಬನಿ ಮಿಡಿದಿದ್ದಾರೆ ಮತ್ತು ಆತನ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಏಷ್ಯಾದ ಹಳೆಯ ರಾಷ್ಟ್ರೀಯ ಉದ್ಯಾನವನಕ್ಕೆ ರಾಮಗಂಗಾ ಹೆಸರಿಡುವಂತೆ ಒತ್ತಾಯ