ತಿರುವನಂತಪುರಂ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಬ್ಯಾನ್ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಕೇರಳದ (Kerala) ಕಾಂಗ್ರೆಸ್ (Congress) ಹಾಗೂ ಅದರ ಮಿತ್ರ ಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಸ್ವಾಗತಿಸಿದೆ. ಅಲ್ಲದೇ ಪಿಎಫ್‌ಐನಂತೆಯೇ ಆರ್‌ಎಸ್‌ಎಸ್ (RSS) ಕೂಡ ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿವೆ.
PFIನ ಚಟುವಟಿಕೆಗಳನ್ನು ತೀವ್ರವಾಗಿ ಖಂಡಿಸಿದ IUML (ಮುಸ್ಲಿಂ ಲೀಗ್) ನ ಹಿರಿಯ ನಾಯಕ ಎಂ.ಕೆ.ಮುನೀರ್, ಈ ಸಂಘಟನೆಯು ಕುರಾನ್ ಅನ್ನು ತಪ್ಪಾಗಿ ಅರ್ಥೈಸಿದೆ. ಹಿಂಸಾಚಾರದ ಮಾರ್ಗವನ್ನು ಅಳವಡಿಸಿಕೊಳ್ಳಲು ಸಮುದಾಯದವರನ್ನು ಪ್ರೇರಿಪಿಸಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಉಗ್ರ ಸಂಘಟನೆಗಳ ಜೊತೆ ಲಿಂಕ್ – ಈ ಕ್ಷಣದಿಂದಲೇ PFI, 8 ಅಂಗ ಸಂಸ್ಥೆಗಳು ಬ್ಯಾನ್
Advertisement
Advertisement
ಪಿಎಫ್‌ಐ ಯುವ ಪೀಳಿಗೆಯನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದೆ. ಅಲ್ಲದೇ ಸಮಾಜದಲ್ಲಿ ಒಡಕು ಮತ್ತು ದ್ವೇಷ ಸೃಷ್ಟಿಸಲು ಪ್ರಯತ್ನಿಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
Advertisement
ಪಿಎಫ್‌ಐನಂತೆಯೇ ಆರ್‌ಎಸ್‌ಎಸ್ ಅನ್ನು ಕೂಡ ನಿಷೇಧಿಸಬೇಕು. ಕೇರಳದಲ್ಲಿ ಬಹುಸಂಖ್ಯಾತ ಕೋಮುವಾದ ಮತ್ತು ಅಲ್ಪಸಂಖ್ಯಾತ ಕೋಮುವಾದ ಎರಡನ್ನೂ ಸಮಾನವಾಗಿ ವಿರೋಧಿಸಬೇಕು. ಎರಡೂ ಸಂಘಟನೆಗಳು ಕೋಮು ದ್ವೇಷವನ್ನು ಕೆರಳಿಸಿ ಸಮಾಜದಲ್ಲಿ ಒಡಕು ಮೂಡಿಸಲು ಯತ್ನಿಸಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಣ್ಣ ಮಕ್ಕಳ ಬಾಯಲ್ಲೂ ಅವಹೇಳನಕಾರಿ ಘೋಷಣೆ ಹಾಕಿಸಿತ್ತು – PFI ನಿಷೇಧವನ್ನು ಸ್ವಾಗತಿಸಿದ ಮುಸ್ಲಿಮ್ ಲೀಗ್
Advertisement
ಮಂಗಳವಾರ ತಡರಾತ್ರಿ ಹೊರಡಿಸಿದ ಅಧಿಸೂಚನೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಪಿಎಫ್‌ಐ ಅನ್ನು ನಿಷೇಧಿಸಿದೆ. ಕೇಂದ್ರ ಸರ್ಕಾರವು ಇಸ್ಲಾಮಿ ಸಂಘಟನೆ ಮತ್ತು ಅದರ ಅಂಗಸಂಸ್ಥೆಗಳು ವಿಧ್ವಂಸಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ ಎಂದು ಅಭಿಪ್ರಾಯಪಟ್ಟಿದೆ.