ತಿರುವನಂತಪುರಂ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು(PFI) ನಿಷೇಧ ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್(IUML)ಸ್ವಾಗತಿಸಿದೆ.
ಪಿಎಫ್‌ಐ ಚಟುವಟಿಕೆಗಳನ್ನು ಖಂಡಿಸಿದ ಮುಸ್ಲಿಂ ಲೀಗ್‌ನ ಹಿರಿಯ ನಾಯಕ ಎಂ.ಕೆ.ಮುನೀರ್(MK Muneer), ಈ ಸಂಘಟನೆಯೂ ಕುರಾನ್ ಅನ್ನು ತಪ್ಪಾಗಿ ಅರ್ಥೈಸಿದೆ ಮತ್ತು ಹಿಂಸಾಚಾರದ ಮಾರ್ಗವನ್ನು ಅಳವಡಿಸಿಕೊಳ್ಳಲು ಸಮುದಾಯದವರನ್ನು ಮನವೊಲಿಸಿತ್ತು ಎಂದು ಹೇಳಿದರು. ಇದನ್ನೂ ಓದಿ: ದೇಶಪ್ರೇಮಿ ಮುಸ್ಲಿಮರು ಯೋಚನೆ ಮಾಡಬೇಕಾದ ಅಗತ್ಯವಿದೆ: ಸಿ.ಟಿ ರವಿ
Advertisement
ಕೋಝಿಕ್ಕೋಡ್‌ನಲ್ಲಿ ಪ್ರತಿಕ್ರಿಯಿಸಿದ ಅವರು, ಪಿಎಫ್‌ಐ ಯುವ ಪೀಳಿಗೆಯನ್ನು ದಾರಿತಪ್ಪಿಸಲು ಪ್ರಯತ್ನಿಸಿದ್ದು ಮಾತ್ರವಲ್ಲದೆ ಸಮಾಜದಲ್ಲಿ ಒಡಕು ಮತ್ತು ದ್ವೇಷವನ್ನು ಸೃಷ್ಟಿಸಲು ಪ್ರಯತ್ನಿಸಿತ್ತು ಎಂದು ಕಿಡಿಕಾರಿದರು.
Advertisement
ರಾಜ್ಯದಲ್ಲಿರುವ ಎಲ್ಲಾ ಇಸ್ಲಾಮಿಕ್ ವಿದ್ವಾಂಸರು ಉಗ್ರಗಾಮಿ ಸಿದ್ಧಾಂತಗಳನ್ನು ಬಲವಾಗಿ ಖಂಡಿಸಿದ್ದಾರೆ. ಆದರೆ ಪಿಎಫ್‌ಐ ಸಣ್ಣ ಮಕ್ಕಳ ಬಾಯಲ್ಲೂ ಅವಹೇಳನಕಾರಿ ಘೋಷಣೆಗಳನ್ನು ಕೂಗುವಂತೆ ಮಾಡಿತ್ತು. ಯಾವ ಇಸ್ಲಾಂ ಅವರನ್ನು ಹಾಗೆ ಮಾಡಲು ಹೇಳಿದೆ ಎಂದು ಪ್ರಶ್ನಿಸಿದರು.
Advertisement
ಆರ್‌ಎಸ್‌ಎಸ್ ಮತ್ತು ಪಿಎಫ್‌ಐ-ಎಸ್‌ಡಿಪಿಐ ಎರಡರ ಕಾರ್ಯಗಳನ್ನು ಮುಸ್ಲಿಮ್ ಲೀಗ್ ಯಾವಾಗಲೂ ವಿರೋಧಿಸುತ್ತದೆ ಎಂದು ಹೇಳಿದ ಮುನೀರ್, ಆಯಾ ಸಮುದಾಯಗಳು ಅಂತಹ ಸಂಘಟನೆಗಳ ಕೋಮು ಸಿದ್ಧಾಂತಗಳನ್ನು ತಿರಸ್ಕರಿಸಬೇಕು ಎಂದು ಹೇಳಿದರು.