– ಬೆಂಗಳೂರಿನ ಪ್ರಮುಖ ಫ್ಲೈಓವರ್‌ಗಳಲ್ಲಿ ಕೆಲ ವಾಹನಗಳ ಸಂಚಾರಕ್ಕೆ ನಿರ್ಬಂಧ
ಬೆಂಗಳೂರು: ನಗರದ ಪ್ರಮುಖ ಫ್ಲೈಓವರ್‌ಗಳ (Bengaluru Flyovers) ಮೇಲೆ ನಿರ್ದಿಷ್ಟ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿ ಸಂಚಾರ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
ಸೆ.4 ರಿಂದ ಈ ನಿಯಮ ಜಾರಿಗೆ ಬರಲಿದೆ. ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್‌ನಲ್ಲಿ ನಿರ್ಬಂಧ ಕ್ರಮವು ಸೆ.11 ರಿಂದ ಜಾರಿಗೆ ಬರಲಿದೆ. ರಸ್ತೆಗಳಲ್ಲಿ ಸುರಕ್ಷತೆ ಹೆಚ್ಚಿಸಲು, ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಅಪಘಾತಗಳಿಗೆ ಕಡಿವಾಣ ಹಾಕಲು ಈ ಕ್ರಮಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ. ಇದನ್ನೂ ಓದಿ: ನೇಪಾಳದ ಹವಾಮಾನ ವೈಪರೀತ್ಯಕ್ಕೆ ಪ್ರವಾಸ ಮೊಟಕು; ನಿಪ್ಪಾಣಿಯ 21 ಪ್ರವಾಸಿಗರು ತಾಯ್ನಾಡಿಗೆ ವಾಪಸ್
ಯಾವ್ಯಾವ ಫ್ಲೈಓವರ್‌ಗಳಲ್ಲಿ ನಿಷೇಧ?
ಬಿಜಿಎಸ್ ಫ್ಲೈಓವರ್ ಮೈಸೂರು ರಸ್ತೆ: ದಿನದ 24 ಗಂಟೆಗಳ ಕಾಲ ಈ ರಸ್ತೆಯಲ್ಲಿ ಭಾರಿ ಸರಕು ಸಾಗಣಿಕೆ ವಾಹನಗಳಿಗೆ ಸಂಚಾರ ನಿರ್ಬಂಧಿಸಲಾಗಿದೆ. ಬೆಳಗ್ಗೆ 7 ರಿಂದ 11 ಹಾಗೂ ಸಾಯಂಕಾಲ 4 ರಿಂದ ರಾತ್ರಿ 10 ಗಂಟೆ ವರೆಗೆ ಇತರೆ ಎಲ್ಲಾ ಮಾದರಿಯ ಸರಕು ಸಾಗಾಣಿಕೆ ವಾಹನಗಳು ಮೂರು ಚಕ್ರದ ಗೂಡ್ಸ್ ಆಟೋ ಸೇರಿದಂತೆ ನಿರ್ಬಂಧ ಹೇರಲಾಗಿದೆ.
ಪೀಣ್ಯ ಎಲಿವೇಟೆಡ್ ಕಾರಿಡಾರ್: ಇಲ್ಲಿ ದಿನದ 24 ಗಂಟೆ ಪ್ರಯಾಣಿಕರ ಆಟೋರಿಕ್ಷಾ ಹಾಗೂ ತ್ರಿಚಕ್ರ ಗೂಡ್ಸ್ ಆಟೋಗಳಿಗೆ ನಿಷೇಧ ಇದೆ. ಬೆಳಗ್ಗೆ 7 ರಿಂದ 11 ಹಾಗೂ ಸಾಯಂಕಾಲ 4 ರಿಂದ ರಾತ್ರಿ 10 ಗಂಟೆ ವರೆಗೆ ಭಾರಿ ಹಾಗೂ ಮಧ್ಯಮ ಸರಕು ವಾಹನಗಳಿಗೆ ನಿರ್ಬಂಧ ಹಾಕಲಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್: ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆವರೆಗೆ ಎಲ್ಲಾ ಮಾದರಿಯ ಸರಕು ಸಾಗಾಣಿಕೆ ವಾಹನಗಳು (ಭಾರಿ, ಮಧ್ಯಮ ಹಾಗೂ ಲಘು ಸರಕು ಸಾಗಾಣಿಕೆ ವಾಹನಗಳು) ಓಡಾಡುವಂತಿಲ್ಲ. ದಿನದ 24 ಗಂಟೆ ದ್ವಿಚಕ್ರವಾಹನಗಳು, ಪ್ರಯಾಣಿಕರ ಆಟೋರಿಕ್ಷಾ ಹಾಗೂ ತ್ರಿಚಕ್ರ ಗೂಡ್ಸ್ ಆಟೋಗಳಿಗೆ ನಿರ್ಬಂಧವಿದೆ. ಇದನ್ನೂ ಓದಿ: ಧಾರವಾಡದಲ್ಲಿ ಪ್ರಕಾಶ್ ರಾಜ್ ಕಾರ್ಯಕ್ರಮದಲ್ಲಿ ಹೈಡ್ರಾಮಾ – ಫೋಟೋಗೆ ಮಸಿ, ಪರ-ವಿರೋಧ ಘೋಷಣೆ
ಡಬಲ್ ಡೆಕ್ಕರ್ ಫ್ಲೈಓವರ್ (ಡಬಲ್ ಡೆಕ್ಕರ್ ಫ್ಲೈಓವರ್ (ಸಿಲ್ಕ್ ಬೋರ್ಡ್‌ನಿಂದ ರಾಗಿಗುಡ್ಡವರೆಗೆ): ದಿನದ 24 ಗಂಟೆವರೆಗೆ ಇಲ್ಲಿ ಭಾರಿ ಸರಕು ಸಾಗಾಣಿಕೆ ವಾಹನಗಳಿಗೆ ನಿಷೇಧ ಹೇರಲಾಗಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಎಲಿವೇಟೆಡ್ ಕಾರಿಡಾರ್ (ಸಂಜೀವ ನಗರ ಕ್ರಾಸ್‌ನಿಂದ ವಿದ್ಯಾಶಿಲ್ಪ ಜಂಕ್ಷನ್ ವರೆಗೆ): ದಿನದ 24 ಗಂಟೆ ದ್ವಿಚಕ್ರವಾಹನಗಳು, ಆಟೋರಿಕ್ಷಾಗಳಿಗೆ ನಿರ್ಬಂಧ ಇದೆ. ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆವರೆಗೆ ಎಲ್ಲಾ ವಿಧದ ಸರಕು ಸಾಗಾಣಿಕೆ ವಾಹನಗಳಿಗೆ ನಿಷೇಧವಿದೆ.
