ನವದೆಹಲಿ: ರಾಜ್ಯದಲ್ಲಿ ಹಲಾಲ್ ಪ್ರಮಾಣೀಕರಣದೊಂದಿಗೆ ಆಹಾರ ಉತ್ಪನ್ನಗಳ ಸಂಗ್ರಹಣೆ, ವಿತರಣೆ ಮತ್ತು ಮಾರಾಟವನ್ನು ನಿಷೇಧಿಸುವ ಉತ್ತರ ಪ್ರದೇಶ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ (Supreme Court) ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಹಲಾಲ್ ಇಂಡಿಯಾ ಪ್ರೈವೆಟ್ ಲಿಮಿಟೆಡ್, ಜಮಿಯತ್ ಉಲಮಾ-ಇ-ಮಹಾರಾಷ್ಟ್ರ, ಮತ್ತು ಜಮಿಯತ್ ಉಲಮಾ ಹಲಾಲ್ ಫೌಂಡೇಶನ್ ಸರ್ಟಿಫಿಕೇಶನ್ ಪ್ರೈವೆಟ್ ಲಿಮಿಟೆಡ್ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು (Halal Certified Product) ನಿಷೇಧಿಸುವ ಉತ್ತರ ಪ್ರದೇಶ (Uttar Pradesh) ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದವು. ಈ ಅರ್ಜಿಯನ್ನು ಇಂದು ನ್ಯಾ. ಬಿ.ಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ವಿಚಾರಣೆ ನಡೆಸಿದರು. ಇದನ್ನೂ ಓದಿ: ಬಾಬ್ರಿ ಮಸೀದಿ ಪರ ವಾದಿಸಿದ್ದ ಇಕ್ಬಾಲ್ ಅನ್ಸಾರಿಗೆ ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ
ವಿಚಾರಣೆ ವೇಳೆ ನೀವೂ ಹೈಕೋರ್ಟ್ ಅನ್ನು ಮೊದಲು ಸಂಪರ್ಕಿಸಬಹುದಲ್ವೇ? ನಾವೇಕೆ ಆರ್ಟಿಕಲ್ 32ರ ಅಡಿಯಲ್ಲಿ ಮನರಂಜನೆ ನೀಡಬೇಕು? ಪ್ಯಾನ್ ಇಂಡಿಯಾ ಶಾಖೆಗಳು ಇತ್ಯಾದಿಗಳು ಉತ್ತಮವಾಗಿದೆ. ಆದರೆ ಹೈಕೋರ್ಟ್ ಅದನ್ನು ಪರಿಶೀಲಿಸಬಹುದು ಎಂದು ನ್ಯಾಯಮೂರ್ತಿ ಗವಾಯಿ ಹೇಳಿದರು. ಇದನ್ನೂ ಓದಿ: ಸುಧಾಮೂರ್ತಿ ಇನ್ಫೋಸಿಸ್ಗೆ ಸೇರಲು ನಾನು ಒಪ್ಪಿರಲಿಲ್ಲ: ಕಾರಣ ಬಿಚ್ಚಿಟ್ಟ ನಾರಾಯಣ ಮೂರ್ತಿ
ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ವಕೀಲರು, ಹಲಾಲ್ ಉತ್ಪನ್ನಗಳನ್ನು ನಿಷೇಧಿಸುವ ನಿರ್ಧಾರವು ರಾಷ್ಟ್ರೀಯ ಪರಿಣಾಮಗಳನ್ನು ಹೊಂದಿದೆ ಮತ್ತು ಧಾರ್ಮಿಕ ಆಚರಣೆಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಕ್ರಿಮಿನಲ್ ಹೊಣೆಗಾರಿಕೆಗೆ ಒಡ್ಡುತ್ತದೆ, ಸರ್ಕಾರದ ಈ ನಿರ್ಧಾರದಿಂದ ಅಂತರರಾಜ್ಯ ವ್ಯಾಪಾರ ಮತ್ತು ವಾಣಿಜ್ಯದ ಮೇಲೂ ಪರಿಣಾಮ ಉಂಟಾಗಿದ್ದು, ಪ್ರಕರಣದಲ್ಲಿ ಕೇಂದ್ರ ಸರ್ಕಾರ ನಿಲುವು ತೆಗೆದುಕೊಳ್ಳಬೇಕು ಎಂದು ವಕೀಲರು ವಾದಿಸಿದರು. ಇದನ್ನೂ ಓದಿ: ಜೈಲು ಸೇರಿರುವ ಸಂಜಯ್ ಸಿಂಗ್ಗೆ ಎಂಪಿಯಾಗಿ ಮುಂದುವರಿಸಲು ಆಪ್ ನಿರ್ಧಾರ
ಸಾರ್ವಜನಿಕ ಆರೋಗ್ಯದ ಸಮಸ್ಯೆಯು ಇಲ್ಲಿ ಪ್ರಶ್ನಾರ್ಹವಾಗಿದೆ ತಕ್ಷಣದ ಪರಿಣಾಮವು ವ್ಯಾಪಾರ, ವಾಣಿಜ್ಯ, ಗ್ರಾಹಕರು ಮತ್ತು ಧಾರ್ಮಿಕ ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅದು ಪ್ಯಾನ್ ಇಂಡಿಯಾ ಸಮಸ್ಯೆಯಾಗಿದೆ ಮತ್ತು ಅದಕ್ಕಾಗಿಯೇ ನಾವು ಇಲ್ಲಿದ್ದೇವೆ ಎಂದು ಮತ್ತೋರ್ವ ವಕೀಲರು ವಾದಿಸಿದರು. ನ್ಯಾಯಾಲಯವು ಅಂತಿಮವಾಗಿ ಈ ವಿಷಯದಲ್ಲಿ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತು, ಎರಡು ವಾರಗಳಲ್ಲಿ ಉತ್ತರಿಸಲು ಸೂಚನೆ ನೀಡಿತು. ಇದನ್ನೂ ಓದಿ: ಆಪ್ ಸರ್ಕಾರದ ಬಹುನಿರೀಕ್ಷಿತ ಮೊಹಲ್ಲಾ ಕ್ಲಿನಿಕ್ಗಳಲ್ಲಿ ಅಕ್ರಮ – ಸಿಬಿಐ ತನಿಖೆಗೆ ಆದೇಶ