* ಭಾರತ-ಪಾಕ್ ಯುದ್ಧದ ಮಧ್ಯೆ ಬಲೂಚ್ ಲಿಬರೇಷನ್ ಆರ್ಮಿ ಫುಲ್ ಆ್ಯಕ್ಟಿವ್
ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನ ಯುದ್ಧ ಸನ್ನಿವೇಶದ ಮಧ್ಯೆ ಬಲೂಚಿಸ್ತಾನ ಲಿಬರೇಷನ್ ಆರ್ಮಿ (Balochistan Liberation Army) ಫುಲ್ ಆ್ಯಕ್ಟಿವ್ ಆಗಿದೆ.
ಇದೇ ಸುಸಂದರ್ಭ ಎಂದು ತನ್ನ ಪ್ರತ್ಯೇಕ ದೇಶದ ಹೋರಾಟವನ್ನು ಬಲೂಚ್ ಲಿಬರೇಷನ್ ಆರ್ಮಿ ತೀವ್ರಗೊಳಿಸಿದೆ. ಮತ್ತೆ ಪಾಕಿಸ್ತಾನಕ್ಕೆ ಬಲೂಚಿಸ್ತಾನ ಸಂಕಷ್ಟ ತಂದೊಡ್ಡಿದೆ. ಇದನ್ನೂ ಓದಿ: ಬಲೂಚಿಸ್ತಾನ್ ಲಿಬರೇಶನ್ ಆರ್ಮಿಯಿಂದ ಐಇಡಿ ದಾಳಿ – 12 ಪಾಕ್ ಸೈನಿಕರು ಸಾವು
Baloch people have started hoisting their own flags and taking down Pakistani flags.
Time for the world to pull back their diplomatic missions from Pakistan and shift them into the newly emerging country of Balochistan.
Farewell to Pakistan, welcome to Balochistan.… pic.twitter.com/X5zD4syfta
— Mir Yar Baloch (@miryar_baloch) May 8, 2025
ಭಾರತದ ಆಪರೇಷನ್ ಸಿಂಧೂರ, ಡ್ರೋನ್ ದಾಳಿಗಳ ನಡುವೆ ಬಲೂಚಿಸ್ತಾನದಲ್ಲಿ ಹಲವೆಡೆ ಪಾಕ್ ಧ್ವಜಗಳಿಗೆ ಗುಡ್ ಬೈ ಹೇಳುತ್ತಿದೆ. ಪಾಕಿಸ್ತಾನದ ಧ್ವಜಗಳನ್ನು ಇಳಿಸಿ ಬಲೂಚಿಸ್ತಾನದ ಧ್ವಜ ಹಾರಾಟ ಮಾಡಲಾಗಿದೆ. ಬಲೂಚ್ ಪರ ಘೋಷಣೆ ಕೂಗಿದ್ದಾರೆ.
ಜಗತ್ತು ಪಾಕಿಸ್ತಾನದಿಂದ ತಮ್ಮ ರಾಜತಾಂತ್ರಿಕ ಕಾರ್ಯಾಚರಣೆಗಳನ್ನು ಹಿಂದಕ್ಕೆ ಪಡೆದು ಹೊಸದಾಗಿ ಉದಯೋನ್ಮುಖ ರಾಷ್ಟ್ರವಾದ ಬಲೂಚಿಸ್ತಾನಕ್ಕೆ ಸ್ಥಳಾಂತರಿಸುವ ಸಮಯ ಬಂದಿದೆ ಎಂದು ಹೇಳುತ್ತಿದ್ದಾರೆ. ಪಾಕಿಸ್ತಾನಕ್ಕೆ ವಿದಾಯ, ಬಲೂಚಿಸ್ತಾನಕ್ಕೆ ಸ್ವಾಗತ ಎಂದು ಬಿಎಲ್‌ಹೆಚ್ ಹೇಳಿದೆ.
ಈಗಾಗಲೇ ಬಲೂಚ್ ಲಿಬರೇಷನ್ ಆರ್ಮಿಯಿಂದಲೂ ಪಾಕಿಸ್ತಾನ ಸೈನಿಕರನ್ನು ಗುರಿಯಾಗಿಟ್ಟುಕೊಂಡು ದಾಳಿ ಮುಂದುವರಿದಿದೆ. ಈ ನಡುವೆ ಬಲೂಚಿಸ್ತಾನದ ನಾಗರಿಕರಿಂದ ಪಾಕ್ ಧ್ವಜ ತೆಗೆಯುವ ಕೆಲಸ ನಡೆದಿದೆ.
1971 ರಿಂದಲೂ ಪ್ರತ್ಯೇಕ ಬಲೂಚಿಸ್ತಾನ ದೇಶಕ್ಕಾಗಿ ಪಾಕಿಸ್ತಾನದ ಜತೆ ಸಂಘರ್ಷ ಜಾರಿಯಲ್ಲಿದೆ. ಪಾಕ್-ಭಾರತ ನಡುವಿನ ಉದ್ವಿಗ್ನತೆಯನ್ನು ಬಲೂಚ್ ಲಿಬರೇಷನ್ ಆರ್ಮಿ ಸದುಪಯೋಗಪಡಿಸಿಕೊಳ್ಳುತ್ತಿದೆ. ಇದನ್ನೂ ಓದಿ: ರಫೇಲ್ ಬಗ್ಗೆ ಸುಳ್ಳು ಹೇಳಿ ಜಗತ್ತಿನ ಮುಂದೆ ಮತ್ತೆ ಬೆತ್ತಲಾದ ಪಾಕಿಸ್ತಾನ!