ಮುಂಬೈ: ಪುಣೆಯಲ್ಲಿ (Pune Porsche Accident) ಕಾರು ಡಿಕ್ಕಿ ಹೊಡೆದು ಇಬ್ಬರು ಟೆಕ್ಕಿಗಳ ಸಾವು ಪ್ರಕರಣದಲ್ಲಿ ಅಪ್ರಾಪ್ತನ ಜಾಮೀನನ್ನು ಬಾಲನ್ಯಾಯ ಮಂಡಳಿ ರದ್ದುಗೊಳಿಸಿದೆ.
ಟೆಕ್ಕಿಗಳ ಸಾವಿಗೆ ಕಾರಣನಾದ ಬಾಲಕನಿಗೆ ಜಾಮೀನು ನೀಡಲಾಗಿತ್ತು. ಅಲ್ಲದೇ ರಸ್ತೆ ಅಪಘಾತದ ಬಗ್ಗೆ ಪ್ರಬಂಧವನ್ನು ಬರೆಯುವಂತೆ ಹೇಳಿತ್ತು. ಇದಕ್ಕೆ ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾಗಿತ್ತು. ಅದಾದ ಮೂರು ದಿನದಲ್ಲಿ ಮಂಡಳಿ ಜಾಮೀನು ರದ್ದುಗೊಳಿಸಿದೆ. ಇದನ್ನೂ ಓದಿ: ಪೋರ್ಶೆ ಕಾರಿಗೆ ಟೆಕ್ಕಿಗಳು ಬಲಿ ಪ್ರಕರಣ – ಅಪ್ರಾಪ್ತನ ತಂದೆಗೆ 2 ದಿನ ಪೊಲೀಸ್ ಕಸ್ಟಡಿ
ಮಂಡಳಿಯು ಬಾಲಾಪರಾಧಿಯನ್ನು ಜೂನ್ 5 ರವರೆಗೆ ರಿಮ್ಯಾಂಡ್ ಹೋಮ್‌ಗೆ ಕಳುಹಿಸಿದೆ. ಆದರೆ, ಆತನನ್ನು ವಯಸ್ಕನಾಗಿ ವಿಚಾರಣೆಗೆ ಒಳಪಡಿಸಬೇಕೆ ಎಂಬ ಬಗ್ಗೆ ಅದು ನಿರ್ಧಾರವನ್ನು ನೀಡಲಿಲ್ಲ.
ಭಾನುವಾರ ಮುಂಜಾನೆ ಅಪಘಾತದ ನಂತರ, ಪುಣೆಯ ಪ್ರಮುಖ ಬಿಲ್ಡರ್‌ನ ಅಪ್ರಾಪ್ತ ಪುತ್ರನಿಗೆ 15 ಗಂಟೆಗಳ ಒಳಗೆ ಜಾಮೀನು ನೀಡಲಾಗಿತ್ತು. ವೈಯಕ್ತಿಕ ಬಾಂಡ್, ಶ್ಯೂರಿಟಿ ನೀಡುವುದು ಸೇರಿದಂತೆ ರಸ್ತೆ ಸುರಕ್ಷತೆಯ ಕುರಿತು 300 ಪದಗಳ ಪ್ರಬಂಧ ಬರೆಯುವಂತೆ ಹೇಳಲಾಗಿತ್ತು. ಇದನ್ನೂ ಓದಿ: ಪುತ್ರನಿಗೆ 2.5 ಕೋಟಿ ಮೌಲ್ಯದ ಕಾರು ಗಿಫ್ಟ್; 1,758 ರೂ. ಕೊಟ್ಟು ನೋಂದಣಿಯನ್ನೇ ಮಾಡಿಸಿಲ್ಲ ಪುಣೆಯ ಬಿಲ್ಡರ್