ಮುಂಬೈ: ಪುಣೆಯಲ್ಲಿ (Pune Porsche Accident) ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಇಬ್ಬರು ಟೆಕ್ಕಿಗಳು ಸಾವನ್ನಪ್ಪಿದ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಐಷಾರಾಮಿ ಕಾರು ನಂಬರ್ ಪ್ಲೇಟ್ ಇಲ್ಲದೆಯೇ ತಿಂಗಳುಗಳಿಂದ ಪುಣೆ ರಸ್ತೆಗಳಲ್ಲಿ ಓಡಾಡಿಕೊಂಡಿದ್ದುದು ತಿಳಿದುಬಂದಿದೆ.
2.5 ಕೋಟಿ ರೂ. ಮೌಲ್ಯದ ಐಷಾರಾಮಿ ಸ್ಪೋರ್ಟ್ಸ್ ಪೋರ್ಶೆ ಟೇಕಾನ್ ಕಾರಿನ ನೋಂದಣಿಯೇ ಆಗಿಲ್ಲ. ಎರಡೂವರೆ ಕೋಟಿ ಮೌಲ್ಯದ ಕಾರಿಗೆ ಕೇವಲ 1,758 ಶುಲ್ಕ ಪಾವತಿಸಿ ಮಾಲೀಕರು ನೋಂದಣಿ ಮಾಡಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮದ್ಯ ಕುಡಿಯಲು 90 ನಿಮಿಷದಲ್ಲಿ 48,000 ರೂ. ಖರ್ಚು ಮಾಡಿದ್ದ ಕಿಲ್ಲರ್ ಬಾಯ್ – ಮುಂದಾಗಿದ್ದೇನು ಗೊತ್ತೇ?
Advertisement
Advertisement
ಬೆಂಗಳೂರಿನ ಡೀಲರ್‌ನಿಂದ ಮಾರ್ಚ್‌ನಲ್ಲಿ ಎಲೆಕ್ಟ್ರಿಕ್ ಪೋರ್ಶೆ ಕಾರನ್ನು ಆಮದು ಮಾಡಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ತಾತ್ಕಾಲಿಕ ನೋಂದಣಿ ನಂತರ ಅಲ್ಲಿಂದ ಮಹಾರಾಷ್ಟ್ರಕ್ಕೆ ಕಾರು ಬಂದಿದೆ ಎಂದು ಮಹಾರಾಷ್ಟ್ರ ಸಾರಿಗೆ ಆಯುಕ್ತ ವಿವೇಕ್ ಭೀಮನ್ವಾರ್ ತಿಳಿಸಿದ್ದಾರೆ.
Advertisement
ಕಾರನ್ನು ನೋಂದಣಿ ಮಾಡಿಸುವುದು ಮಾಲೀಕರ ಜವಾಬ್ದಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ರಸ್ತೆ ತೆರಿಗೆ ವಿನಾಯಿತಿ ಇದೆ. ಆದ್ದರಿಂದ ಈ ವಾಹನದ ನೋಂದಣಿ 1,758 – 1,500 ರೂ. ಹೈಪೋಥೆಕೇಶನ್ ಶುಲ್ಕ ಇರುತ್ತದೆ. 200 ರೂ. ಸ್ಮಾರ್ಟ್ ಕಾರ್ಡ್ ಆರ್‌ಸಿ ಶುಲ್ಕ ಮತ್ತು 58 ರೂ. ಅಂಚೆ ಶುಲ್ಕ ಇರುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕಿಲ್ಲರ್ ಬಾಯ್‌ಗೆ ಪುಣೆ ಠಾಣೆಯಲ್ಲಿ ರಾಜಾತಿಥ್ಯ – ಪಿಜ್ಜಾ, ಬಿರಿಯಾನಿ ತಿನ್ನಿಸಿದ್ದ ಪೊಲೀಸರ ವಿರುದ್ಧ ಆಕ್ರೋಶ
Advertisement
ಪುಣೆಯ ಕಲ್ಯಾಣಿನಗರ ಪ್ರದೇಶದಲ್ಲಿ ಭಾನುವಾರ ಮುಂಜಾನೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಟೆಕ್ಕಿಗಳು ಮೃತಪಟ್ಟಿದ್ದರು. ಕಾರು ಚಲಾಯಿಸುತ್ತಿದ್ದ ಹದಿಹರೆಯದ ಯುವಕ ಪುಣೆಯ ಪ್ರಮುಖ ಬಿಲ್ಡರ್ ಮಗ. ಆರೋಪಿ ಅಪ್ರಾಪ್ತನ ತಂದೆಯನ್ನು ಬಂಧಿಸಲಾಗಿದೆ. ಆರೋಪಿ ಬಾಲಕನಾದ್ದರಿಂದ ಬಂಧಿಸಿದ 15 ಗಂಟೆಗಳೊಳಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.