ಕನ್ನಡತಿ ಶ್ರೀಲೀಲಾಗೆ(Sreeleela) ಟಾಲಿವುಡ್ನಲ್ಲಿ ಭರ್ಜರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ರಶ್ಮಿಕಾ(Rashmika Mandanna) ಮತ್ತು ಪೂಜಾ ಹೆಗ್ಡೆಗೆ (Pooja Hegde) ಸೆಡ್ಡು ಹೊಡೆದು ತೆಲುಗಿನ ಸಾಲು ಸಾಲು ಸಿನಿಮಾಗಳಿಗೆ ಭರಾಟೆ ಬೆಡಗಿ ಶ್ರೀಲೀಲಾ ನಾಯಕಿಯಾಗಿದ್ದಾರೆ.
ಸ್ಯಾಂಡಲ್ವುಡ್ನ ಕಿಸ್, ಭರಾಟೆ, ಬೈಟು ಲವ್ ಮೂರು ಚಿತ್ರಗಳಲ್ಲಿ ನಟಿಸಿ ಇದೀಗ ತೆಲುಗಿನಲ್ಲಿ ಸೆಟಲ್ ಆಗುವ ಸೂಚನೆ ಸಿಕ್ಕಿದೆ. `ಪೆಳ್ಳಿ ಸಂದಡಿ’ ಚಿತ್ರದ ಮೂಲಕ ತೆಲುಗಿಗೆ ಪರಿಚಿತರಾದ ನಟಿ ಶ್ರೀಲೀಲಾ ಇದೀಗ ಬ್ಯಾಕ್ ಟು ಬ್ಯಾಕ್ 7 ಸಿನಿಮಾಗಳಿಗೆ ನಾಯಕಿಯಾಗಿದ್ದಾರೆ. ಸ್ಟಾರ್ ಹೀರೋಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಇದನ್ನೂ ಓದಿ: ಆಪ್ತರ ಸಮ್ಮುಖದಲ್ಲಿ ನಡೆಯಿತು ಹರಿಪ್ರಿಯಾ- ವಸಿಷ್ಠಸಿಂಹ ಎಂಗೇಜ್ಮೆಂಟ್
ಶ್ರೀಲೀಲಾ ಸದ್ಯ ಏಳು ತೆಲುಗು ಚಿತ್ರಗಳಿಗೆ ಸಹಿ ಹಾಕಿದ್ದು ಟಾಲಿವುಡ್ನಲ್ಲಿಯೇ ಸುಮಾರು ಎರಡರಿಂದ ಮೂರು ವರ್ಷಗಳು ಬ್ಯುಸಿಯಾಗುವುದು ಖಚಿತ ಎನ್ನಬಹುದು. ಶ್ರೀಲೀಲಾ ಸಹಿ ಹಾಕಿರುವ ತೆಲುಗು ಚಿತ್ರಗಳೆಂದರೆ, ಧಮಾಕಾ, ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಶನ್ನ ಚಿತ್ರ, ಬೋಯಾಪತಿ ಶ್ರೀನಿವಾಸ್ ಹಾಗೂ ರಾಮ್ ಪೋತಿನೇನಿ ಕಾಂಬಿನೇಶನ್ನ ಚಿತ್ರ, ನಿತಿನ್ ಅಭಿನಯದ 32ನೇ ಚಿತ್ರ, ವೈಷ್ಣವ್ ತೇಜಾ ಅಭಿನಯದ 4ನೇ ಚಿತ್ರ, ಅನಗನಗಾ ಒಕ ರೋಜು, ನಂದಮೂರಿ ಬಾಲಕೃಷ್ಣ ನಟನೆಯ 108ನೇ ಚಿತ್ರ. ಮಹೇಶ್ ಬಾಬು ಚಿತ್ರಕ್ಕೆ ಶ್ರೀಲೀಲಾ 2ನೇ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ: ಆಪ್ತರ ಸಮ್ಮುಖದಲ್ಲಿ ನಡೆಯಿತು ಹರಿಪ್ರಿಯಾ- ವಸಿಷ್ಠಸಿಂಹ ಎಂಗೇಜ್ಮೆಂಟ್
`ಭರಾಟೆ’ ನಟಿಯ ಇಷ್ಟೇಲ್ಲಾ ಸಿನಿಮಾಗಳು ಅನೌನ್ಸ್ ಆಗುತ್ತಿರಬೇಕಾದರೆ ಇತ್ತೀಚೆಗೆ ರಶ್ಮಿಕಾ, ಪೂಜಾ ಹೆಗ್ಡೆ ಹೆಚ್ಚು ಚಿತ್ರಗಳನ್ನು ಘೋಷಿಸದೇ ಇರುವುದು ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ.