ಪ್ರಭಾಸ್ ಮತ್ತು ಪ್ರಶಾಂತ್ ನೀಲ್ (Prashant Neel)ಕಾಂಬಿನೇಷನ್ ನ ‘ಸಲಾರ್’ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡುವ ಕೆಲಸ ನಡೆಯುತ್ತಿದೆ. ಕೆಜಿಎಫ್ ಚಿತ್ರಕ್ಕೆ ಹಿನ್ನೆಲೆ ಸಂಗೀತ (Background Music) ನೀಡಿದ ರವಿ ಬಸ್ರೂರ್ (Ravi Basrur) ಅವರೇ ಈ ಚಿತ್ರಕ್ಕೂ ಸಂಗೀತ ನೀಡಿದ್ದಾರೆ. ಕಳೆದ ಎರಡು ವಾರದಿಂದಲೂ ಸಲಾರ್ ಚಿತ್ರಕ್ಕೆ ಹಿನ್ನೆಲೆ ಸಂಗೀತದ ಕೆಲಸ ನಡೆಯುತ್ತಿದ್ದ ತಮ್ಮ ತಂಡದೊಂದಿಗೆ ನಿರ್ದೇಶಕ ಪ್ರಶಾಂತ್ ನೀಲ್ ಬಸ್ರೂರಿನ ಸ್ಟುಡಿಯೋದಲ್ಲೇ ಬೀಡುಬಿಟ್ಟಿದ್ದಾರೆ.
Advertisement
ಒಂದು ಕಡೆ ಸಿನಿಮಾ ತಯಾರಿ ಕೆಲಸ ನಡೆಯುತ್ತಿದ್ದರೆ ಮತ್ತೊಂದು ಕಡೆ ಬಿಡುಗಡೆಯ ಸಿದ್ದತೆಯನ್ನೂ ಚಿತ್ರತಂಡ ಶುರು ಮಾಡಿದೆ. ನಿರ್ಮಾಪಕರು ಇನ್ನೂ ಚಿತ್ರದ ಪ್ರಚಾರವನ್ನೇ ಶುರು ಮಾಡಿಲ್ಲ. ಆಗಲೇ ನಿರೀಕ್ಷೆಯನ್ನು ಮಿತಿಮೀರಿ ಹೆಚ್ಚಿಸಿಕೊಂಡಿದೆ. ಅದರಲ್ಲೂ ಈ ಬಾರಿ ಅಮೆರಿಕಾದಲ್ಲಿ (America) ಈ ಸಿನಿಮಾ ದಾಖಲೆಯ ರೀತಿಯಲ್ಲಿ ಬಿಡುಗಡೆಯಾಗಲಿದೆ. ಅಮೆರಿಕಾದ ಖ್ಯಾತ ವಿತರಣಾ ಸಂಸ್ಥೆಯೇ ಹಂಚಿಕೊಂಡಂತೆ, ಸಲಾರ್ ಸಿನಿಮಾ ಉತ್ತರ ಅಮೆರಿಕಾದಲ್ಲಿ 1979ಕ್ಕೂ ಹೆಚ್ಚು ಸ್ಥಳಗಳಲ್ಲಿ ರಿಲೀಸ್ (Release) ಆಗಲಿದೆಯಂತೆ.
Advertisement
Advertisement
ಸೆಪ್ಟೆಂಬರ್ 27ಕ್ಕೆ ಈ ಸಿನಿಮಾ ರಿಲೀಸ್ ಆಗಲಿದ್ದು, ಇದೇ ಮೊದಲ ಬಾರಿಗೆ ಭಾರತದ ಸಿನಿಮಾವೊಂದು ಉತ್ತರ ಅಮೆರಿಕಾದಲ್ಲಿ ಈ ಪ್ರಮಾಣದಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವುದು ದಾಖಲೆ ಎಂದು ಹೇಳಲಾಗುತ್ತಿದೆ. ಈವರೆಗೂ ಭಾರತೀಯ ಯಾವುದೇ ಭಾಷೆಯ ಸಿನಿಮಾ ಇಷ್ಟು ಪ್ರಮಾಣದ ಸ್ಥಳಗಳಲ್ಲಿ ಬಿಡುಗಡೆಯಾಗಿಲ್ಲ ಎನ್ನುತ್ತದೆ ಪ್ರತ್ಯಂಗಿರಾ ವಿತರಣಾ ಸಂಸ್ಥೆ.
Advertisement
ಮೊನ್ನೆಯಷ್ಟೇ ಪ್ರಭಾಸ್ (Prabhas) ನಟನೆಯ ಸಲಾರ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಈ ಟೀಸರ್ ನಲ್ಲಿ ಹೆಚ್ಚು ಅಬ್ಬರಿಸಿದ್ದು ಪ್ರಭಾಸ್ ಅಲ್ಲ. ಪುಷ್ಪಕ ವಿಮಾನ (Pushpaka Vimana) ಸಿನಿಮಾದ ಮೂಲಕ ಸಾಕಷ್ಟು ಫೇಮಸ್ ಆಗಿರುವ ಟಿನ್ನು ಆನಂದ್ (Tinnu Anand). ಪುಷ್ಪಕ ವಿಮಾನ ಸಿನಿಮಾದಲ್ಲಿ ಟಿನ್ನುಗೆ ಮಾತೇ ಇರಲಿಲ್ಲ. ಯಾಕೆಂದರೆ ಅದು ಮೂಕಿ ಚಿತ್ರವಾಗಿತ್ತು. ಸಲಾರ್ ಸಿನಿಮಾದ ಟೀಸರ್ ನಲ್ಲಿ ಟಿನ್ನುಗೆ ಮಾತು ಬಿಟ್ಟರೆ ಬೇರೇನೂ ಇಲ್ಲ.
ತಮ್ಮ ಅದ್ಭುತ ಕಂಠ ಮತ್ತು ಧ್ವನಿ ಏರಿಳಿತದಿಂದಾಗಿ ಟಿನ್ನು ಸಲಾರ್ (Salaar) ನಲ್ಲಿ ಹೊಡೆದ ಅಷ್ಟೂ ಡೈಲಾಗ್ ಗಳು ಪ್ರಭಾಸ್ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿವೆ. ಸಲಾರ್ ಸಿನಿಮಾದ ಹೀರೋ ಅನ್ನು ಅವರು ಪರಿಚಯಿಸಿದ ರೀತಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸಲಾರ್ ಸಿನಿಮಾದ ಕಥೆಯನ್ನು ಅವರ ನಾಲಿಗೆಯಿಂದಲೇ ಕೇಳುವುದು ಚಂದ ಎಂದು ಕಾಮೆಂಟ್ ಮಾಡಿದ್ದಾರೆ. ಈ ಮೂಲಕ ಪ್ರಭಾಸ್ ಅಭಿಮಾನಿಗಳ ಮನ ಗೆದ್ದಿದ್ದಾರೆ ಟಿನ್ನು.
ಒಂದು ಕಡೆ ಟಿನ್ನು ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ ಮತ್ತೊಂದು ಕಡೆ ಸಲಾರ್ ಸಿನಿಮಾದ ಟೀಸರ್ ಬಗ್ಗೆ ಹಲವರು ಹಲವು ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ. ಟೀಸರ್ ನಲ್ಲಿ ಬಳಕೆಯಾದ ದೃಶ್ಯಗಳಲ್ಲಿ ಕೆಜಿಎಫ್ ಸಿನಿಮಾವನ್ನೂ ಹಲವರು ಹುಡುಕಿದ್ದಾರೆ. ಹಾಗಾಗಿ ಫ್ಯಾನ್ಸ್ ತಲೆಕೆಡಿಸಿಕೊಂಡು ತಮ್ಮದೇ ಆದ ರೀತಿಯಲ್ಲಿ ಕಥೆ ಕಟ್ಟುತ್ತಿದ್ದಾರೆ. ಆ ಕಥೆಗಳು ಕೂಡ ತುಂಬಾ ಸ್ವಾರಸ್ಯಕರವಾಗಿವೆ.
ಬಿಡುಗಡೆಯಾದ ಸಲಾರ್ ಟೀಸರ್ ನಲ್ಲಿ ಕೆಜಿಎಫ್ ಸಿನಿಮಾದ ಕೋಲಾರ್ ಗೋಲ್ಡ್ ಫಿಲ್ಡನ್ ಮೂನಿಂಗ್ ಒಳಗಿನ ಸಾಮ್ರಾಜ್ಯವನ್ನು ತರುವ ಪ್ರಯತ್ನ ನಡೆದಿದೆಯಾ ಎನ್ನುವ ಅನುಮಾನ ಮೂಡಿಸಿದೆ. ಕೆಜಿಎಫ್ ಕಥೆಯಲ್ಲಿ ಬರುವ ಬಂಗಾರದ ಕಣಜಗಳ ಗೇಟ್ ಗಳು ಸಲಾರ್ ನಲ್ಲಿ ಎಂಟ್ರಿ ಪಡೆದಿವೆ. ಕೆಲ ನಂಬರ್ ಗಳು ಕೂಡ ಯಥಾವತ್ತಾಗಿ ದಾಖಲಾಗಿವೆ. ಹಾಗಾಗಿ ಕೆಜಿಎಫ್ ಅಧ್ಯಾಯದ ಒಂದಷ್ಟು ಭಾಗವನ್ನು ಸಲಾರ್ ಸಿನಿಮಾದಲ್ಲಿ ಹೇಳಿದ್ದಾರಾ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.
Web Stories