ಮುಂಬೈ: ಭಾರತೀಯ ಸಿನಿಮಾ ಇತಿಹಾಸದಲ್ಲಿ ಬಾಹುಬಲಿ ಮತ್ತೊಂದು ದಾಖಲೆ ಬರೆದಿದ್ದು, ಬಿಡುಗಡೆಯಾದ 9 ದಿನದಲ್ಲಿ ಬಾಕ್ಸ್ ಆಫೀಸ್ ನಲ್ಲಿ 1 ಸಾವಿರ ಕೋಟಿ ರೂ. ಕಲೆಕ್ಷನ್ ಮಾಡಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕಗೆ ಪಾತ್ರವಾಗಿದೆ.
ಭಾರತದಲ್ಲಿ 800 ಕೋಟಿಗೂ ಅಧಿಕ ಕಲೆಕ್ಷನ್ ಆಗಿದ್ದರೆ, ವಿದೇಶದಲ್ಲಿ 200 ಕೋಟಿಗೂ ಅಧಿಕ ಕಲೆಕ್ಷನ್ ಆಗಿದೆ ಎಂದು ಸಿನಿ ಮಾರುಕಟ್ಟೆ ವಿಶ್ಲೇಷಕ ರಮೇಶ್ ಬಲ ಟ್ವೀಟ್ ಮಾಡಿದ್ದಾರೆ.
Advertisement
ಬಹುಬಲಿ ಯಾವ ದಿನ ಎಷ್ಟು ಕಲೆಕ್ಷನ್ ಆಗಿತ್ತು?
– ಮೊದಲ ದಿನ 217 ಕೋಟಿ ರೂ.
– ಎರಡನೇ ದಿನ 382.5 ಕೋಟಿ ರೂ.
– ಮೂರನೇ ದಿನ 540 ಕೋಟಿ ರೂ.
– ನಾಲ್ಕನೇಯ ದಿನ 625 ಕೋಟಿ ರೂ.
– ಐದನೇಯ ದಿನ 710 ಕೋಟಿ ರೂ.
– ಆರನೇ ದಿನ 778 ಕೋಟಿ ರೂ.
– ಏಳನೇ ದಿನ 860 ಕೋಟಿ ರೂ.
– ಎಂಟನೇ ದಿನ 915 ಕೋಟಿ ರೂ.
Advertisement
With ₹ 800+ Cr in India and ₹ 200+ Cr in Overseas, #Baahubali2 becomes the 1st Indian movie to do ₹ 1000 Cr @ WW BO.. ????????#1000croreBaahubali pic.twitter.com/Jt2YYMW9w5
— Ramesh Bala (@rameshlaus) May 7, 2017
Advertisement
ಭಾರತದಲ್ಲಿ ಇದೂವರೆಗೆ ಬಾಕ್ಸ್ ಆಫೀಸ್ ದಾಖಲೆ ಅಮೀರ್ ಖಾನ್ ಅಭಿನಯದ ಪಿಕೆ ಸಿನಿಮಾಗೆ ಇತ್ತು. 2014ರಲ್ಲಿ ಬಿಡುಗಡೆಯಾದ ಈ ಫಿಲ್ಮ್ ಬಾಕ್ಸ್ ಆಫೀಸ್ ನಲ್ಲಿ 792 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಈಗ ಈ ದಾಖಲೆಯನ್ನು ರಾಜಮೌಳಿ ನಿರ್ದೇಶನದ ಬಾಹುಬಲಿ ಬ್ರೇಕ್ ಮಾಡಿದೆ.
Advertisement
ನಿರ್ಮಾಪಕ ಶೋಭಾ ಯರ್ಲಾಗಡ್ಡ ಅವರು ಬಾಹುಬಲಿ ಭಾಗ 1 ಮತ್ತು ಭಾಗ 2 ನಿರ್ಮಾಣಕ್ಕೆ ಒಟ್ಟು 450 ಕೋಟಿ ರೂ. ಖರ್ಚು ಮಾಡಿದ್ದರು. ಬಾಹುಬಲಿ ಭಾಗ 2015ರ ಜುಲೈ 10 ರಂದು ಬಿಡುಗಡೆಯಾದ ಬಾಹುಬಲಿ ದಿ ಬಿಗ್‍ನಿಂಗ್ ಬಾಕ್ಸ್ ಆಫೀಸ್ ನಲ್ಲಿ 650 ಕೋಟಿ ರೂ. ಕಲೆಕ್ಷನ್ ಮಾಡಿತ್ತು.
ಇದನ್ನೂ ಓದಿ:ಪ್ರಭಾಸ್, ರಾಣಾ, ಅನುಷ್ಕಾ, ತಮನ್ನಾ, ರಮ್ಯಕೃಷ್ಣಗೆ ಎಷ್ಟು ಸಂಭಾವನೆ ಸಿಕ್ಕಿದೆ?
ಬಾಹುಬಲಿ ದಾಖಲೆಗಳು
– ತೆಲುಗು, ತಮಿಳು, ಹಿಂದಿಯಲ್ಲಿ ಅತಿ ಹೆಚ್ಚು ಕಲೆಕ್ಷನ್ ಆದ ಮೊದಲ ಸಿನಿಮಾ
– ಬಿಡುಗಡೆಯಾದ ಒಂದೇ ದಿನದಲ್ಲಿ 100 ಕೋಟಿ ಕಲೆಕ್ಷನ್ ಆದ ಮೊದಲ ಭಾರತೀಯ ಸಿನಿಮಾ
– ವಿಶ್ವದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಹಣ ಕಲೆಕ್ಷನ್ ಆದ ಮೊದಲ ಭಾರತೀಯ ಸಿನಿಮಾ
– ಒಟ್ಟು 9 ಸಾವಿರಕ್ಕೂ ಅಧಿಕ ಸ್ಕ್ರೀನ್‍ಗಳಲ್ಲಿ ಬಿಡುಗಡೆಯಾದ ಮೊದಲ ಭಾರತೀಯ ಸಿನಿಮಾ
ಇದನ್ನೂ ಓದಿ: ಈ ಥಿಯೇಟರ್ ನಲ್ಲಿ ಬಾಹುಬಲಿ ಟಿಕೆಟ್ ಬೆಲೆ 30 ರೂ. ಅಷ್ಟೇ!
This day will be remembered in the India Cinema History. Thank you all for your great support..???????????? #1000croreBaahubali pic.twitter.com/DAD6THYGdk
— Baahubali (@BaahubaliMovie) May 7, 2017
ಇದನ್ನೂ ಓದಿ: ಭಾರತೀಯ ಚಿತ್ರರಂಗದಲ್ಲಿ ಒಂದೇ ದಿನ 10 ದಾಖಲೆಗಳನ್ನು ಬರೆದ ಬಾಹುಬಲಿ-2: ಇಲ್ಲಿದೆ ಪೂರ್ಣ ಪಟ್ಟಿ