ಹೈದರಾಬಾದ್: ಬಾಹುಬಲಿ 2 ಬಾಕ್ಸ್ ಆಫೀಸ್‍ನ ಎಲ್ಲ ದಾಖಲೆಗಳನ್ನು ಮುರಿಯುತ್ತಿದ್ದು, ಈಗ ಈ ಚಿತ್ರದಲ್ಲಿ ಅಭಿನಯಿಸಿದ ಕಲಾವಿದರಿಗೆ ಎಷ್ಟು ಸಂಭಾವನೆ ನೀಡಲಾಗಿದೆ ಎನ್ನುವ ವಿಚಾರ ಪ್ರಕಟವಾಗಿದೆ.
ಟೈಮ್ಸ್ ನೌ ವರದಿಯ ಪ್ರಕಾರ, ಕಟ್ಟಪ್ಪ ಪಾತ್ರ ನಿರ್ವಹಿಸಿದ ಸತ್ಯರಾಜ್ ಮತ್ತು ಶಿವಗಾಮಿ ಪಾತ್ರವನ್ನು ನಿರ್ವಹಿಸಿದ ರಮ್ಯಕೃಷ್ಣ ಅವರು 2.25 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.
Advertisement
ಅವಂತಿಕಾ ಪಾತ್ರ ಮಾಡಿದ ತಮನ್ನಾ ಮತ್ತು ದೇವಸೇನಾ ಪಾತ್ರ ನಿರ್ವಹಿಸಿದ ಅನುಷ್ಕಾ ಶೆಟ್ಟಿ ಅವರು 5 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.
Advertisement
ಬಲ್ಲಾಳದೇವನ ಪಾತ್ರದಲ್ಲಿ ಮಿಂಚಿದ ರಾಣಾ ದಗ್ಗುಬಾಟಿ 15 ಕೋಟಿ ರೂ. ಸಂಭಾವನೆ ಸಿಕ್ಕಿದರೆ, 5 ವರ್ಷಗಳ ಕಾಲ ಬಾಹುಬಲಿಗಾಗಿ ಸಮಯವನ್ನು ಮೀಸಲಿಟ್ಟ ಪ್ರಭಾಸ್ ಗೆ 25 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.
Advertisement
ನಿರ್ದೇಶಕ ರಾಜಮೌಳಿ ಅವರಿಗೆ 28 ಕೋಟಿ ರೂ. ಸಂಬಳ ಸಿಕ್ಕಿದೆ. ಅಷ್ಟೇ ಅಲ್ಲದೇ ಬಾಹುಬಲಿ 1 ಮತ್ತು 2ರ ಬಂದಿರುವ ಲಾಭದಲ್ಲಿ ಮೂರನೇ ಒಂದು ಭಾಗದಷ್ಟು ಹಣ ರಾಜಮೌಳಿಗೆ ಸಿಗಲಿದೆ ಎನ್ನಲಾಗಿದೆ.
Advertisement
ಏಪ್ರಿಲ್ 28ಕ್ಕೆ ಬಿಡುಗಡೆಯಾದ ಬಾಹುಬಲಿ ಒಂದೇ ವಾರದಲ್ಲಿ 925 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ 900 ಕೋಟಿ ರೂ. ಕಲೆಕ್ಷನ್ ಮಾಡಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆ ಅಮೀರ್ ಖಾನ್ ಅಭಿನಯದ ಪಿಕೆ 792 ಕೋಟಿ ರೂ. ಕಲೆಕ್ಷನ್ ಮಾಡಿತ್ತು.
ಬಾಹುಬಲಿ ಬಿಗ್‍ನಿಂಗ್ 180 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು ಬಾಕ್ಸ್ ಆಫೀಸ್ ನಲ್ಲಿ 650 ಕೋಟಿ ರೂ. ಕಲೆಕ್ಷನ್ ಮಾಡಿತ್ತು.
#Baahubali2 8 Days WW BO (Estimates):#India :
Nett – ₹ 587 Crs
Gross – ₹ 745 Crs
Overseas :
Gross – ₹ 180 Crs
Total – ₹ 925 Crs
— Ramesh Bala (@rameshlaus) May 6, 2017
#Baahubali2 Hindi 8 Days All-India BO:
Nett: ₹ 266.75 cr
Gross: ₹ 357 cr
— Ramesh Bala (@rameshlaus) May 6, 2017
#Baahubali2 in Tamil in #Australia becomes All-time No.1 Tamil movie there.. 8 days A$ 692,818 [₹ 3.31 cr] beats #Kabali 's A$ 525,000
— Ramesh Bala (@rameshlaus) May 6, 2017