ನವದೆಹಲಿ: ಈಗಾಗಲೇ ಅತಿ ಹೆಚ್ಚು ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗುವ ಮೂಲಕ ಹೊಸ ದಾಖಲೆ ಬರೆಯಲಿರುವ ಬಾಹುಬಲಿ ಈಗ ಟಿಕೆಟ್ ಬುಕ್ಕಿಂಗ್ ನಲ್ಲೂ ದಾಖಲೆ ಬರೆದಿದೆ.
‘ಬುಕ್‍ಮೈಶೋ’ದಲ್ಲಿ ಅತಿ ಹೆಚ್ಚು ಟಿಕೆಟ್ ಬುಕ್ ಆದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಉತ್ತರ ಭಾರತದಲ್ಲಿ ಬುಕ್ಕಿಂಗ್ ಓಪನ್ ಆದ 24 ಗಂಟೆಯಲ್ಲೇ 10 ಲಕ್ಷ ಟಿಕೆಟ್ ಮಾರಾಟವಾಗಿದೆ.
Advertisement
ಬುಕ್‍ಮೈ ಶೋದಲ್ಲಿ ಇದೂವರೆಗೆ ರಿಲೀಸ್ ಗೆ ಮೊದಲೇ ಅತಿಹೆಚ್ಚು ಟೆಕೆಟ್ ಖರೀದಿಯಾಗಿದ್ದು ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರಕ್ಕೆ. ಈಗ ರಾಜಮೌಳಿ ನಿರ್ದೇಶನದ ಬಾಹುಬಲಿ ದಂಗಲ್ ದಾಖಲೆಯನ್ನು ಬ್ರೇಕ್ ಮಾಡಿದೆ.
Advertisement
ಸಿಂಗಲ್ ಸ್ಕ್ರೀನ್ ಸಿನಿಮಾದಲ್ಲಿ ಏಪ್ರಿಲ್ 22ರಿಂದ ಬುಕ್ಕಿಂಗ್ ಓಪನ್ ಆದರೆ, ಮಲ್ಟಿಪ್ಲೆಕ್ಸ್ ಗಳಲ್ಲಿ ಏ.24ರಿಂದ ಓಪನ್ ಆಗಿದೆ. ತೆಲುಗು, ತಮಿಳು, ಹಿಂದಿ, ಮಲೆಯಾಳಂ ನಾಲ್ಕು ಭಾಷೆಯಲ್ಲಿ ಈ ಸಿನಿಮಾದ 10 ಲಕ್ಷಕ್ಕೂ ಅಧಿಕ ಟಿಕೆಟ್‍ಗಳು ಬಿಡುಗಡೆಗೂ ಮೊದಲೇ ಮಾರಾಟವಾಗಿದೆ ಎಂದು ಸಿನಿ ಮಾರುಕಟ್ಟೆಯ ವಿಶ್ಲೇಷಕ ಶ್ರೀಧರ್ ಪಿಳ್ಳೈ ಎಂಬವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
Advertisement
ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ಬಾಹುಬಲಿ ಮೊದಲ ದಿನ 100 ಕೋಟಿ ರೂ. ಕಲೆಕ್ಷನ್ ಮಾಡಿದರೆ, ವಾರಾಂತ್ಯಕ್ಕೆ ಒಟ್ಟು 300-350 ರೂ. ಕಲೆಕ್ಷನ್ ಮಾಡಬಹುದು. ಮೊದಲ ವಾರದಲ್ಲಿ ಒಟ್ಟು 500 ಕೋಟಿ ರೂ. ಕಲೆಕ್ಷನ್ ಆಗಬಹುದು ಎಂದು ಅಂದಾಜಿಸಿದ್ದಾರೆ.
Advertisement
ಆಂಧ್ರಪ್ರದೇಶ ಮತ್ತು ತೆಲಂಗಣಾ ಸರ್ಕಾರ ಸಿಂಗಲ್ ಸ್ಕ್ರೀನ್ ಟಿಕೆಟ್‍ಗೆ 160 ರೂ. ಮಲ್ಟಿಪ್ಲೆಕ್ಸ್ ಗೆ 200 ರೂ. ದರವನ್ನು ಏರಿಸಲು ಅನುಮತಿ ನೀಡಿದೆ. ಕರ್ನಾಟಕದಲ್ಲೂ ಈಗಾಗಲೇ ಟಿಕೆಟ್‍ಗಳು ಸೋಲ್ಡ್ ಔಟ್ ಆಗಿರುವ ಕಾರಣ ದಕ್ಷಿಣ ಭಾರತದಲ್ಲಿ ಉತ್ತಮ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ.
ಶುಕ್ರವಾರ ಬಿಡುಗಡೆಯಾಗಬೇಕಾದ ಬಾಹುಬಲಿ ದೇಶದ ಹಲವೆಡೆ ಗುರುವಾರ ರಾತ್ರಿಯೇ ಬಿಡುಗಡೆಯಾಗುತ್ತಿದೆ. ಬೆಗಳೂರಿನಲ್ಲಿ ರಾತ್ರಿ ತೆಲುಗು ಭಾಷೆಯಲ್ಲಿರುವ ಚಿತ್ರ 52 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾದರೆ 9 ಪರದೆಯಲ್ಲಿ ತಮಿಳು ಬಾಹುಬಲಿ ತೆರೆ ಕಾಣಲಿದೆ. ಹಿಂದಿಯಲ್ಲಿ 20 ಪರದೆಯಲ್ಲಿ ಬಿಡುಗಡೆಯಾಗುತ್ತಿದೆ.
ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಬಾಹುಬಲಿ ಚಿತ್ರದ 1 ಟಿಕೆಟ್ ಬೆಲೆ ಕೇಳಿದ್ರೆ ನಿಮ್ಗೆ ಆಶ್ಚರ್ಯ ಆಗುತ್ತೆ!
ಇದನ್ನೂ ಓದಿ: ಮತ್ತೊಂದು ದಾಖಲೆ: ಎಷ್ಟು ಸ್ಕ್ರೀನ್ ಗಳಲ್ಲಿ ಬಾಹುಬಲಿ ಬಿಡುಗಡೆಯಾಗಲಿದೆ ಗೊತ್ತಾ?