ಅಹಮದಾಬಾದ್: ಭಾರತೀಯ ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ಬರೆದಿರುವ ಬಾಹುಬಲಿ ಈಗ ಶೈಕ್ಷಣಿಕ ವಲಯದಲ್ಲಿ ಅಧ್ಯಯನ ವಿಷಯವಾಗಿ ಆಯ್ಕೆಯಾಗಿದೆ.
ಬಾಹುಬಲಿ ಸಿನಿಮಾ ಭಾರತದ ಇತಿಹಾಸದಲ್ಲಿ ಸಂಚಲವನ್ನೇ ಮೂಡಿಸಿತ್ತು. ರಾಜಮೌಳಿ ನಿರ್ದೇಶನದ ಬಾಹಬಲಿ 2 2017ರ ಏಪ್ರಿಲ್ 28 ರಂದು ತೆಲುಗು, ತಮಿಳು, ಹಿಂದಿ, ಮಲೆಯಾಳಂ ಭಾಷೆಯಲ್ಲಿ ಬಿಡುಗಡೆಯಾಗಿತ್ತು. ಮೊದಲ ದಿನವೇ 100 ಕೋಟಿ ರೂ. ಗಳಿಕೆ ಪಡೆದಿತ್ತು. ಒಂದು ವಾರದಲ್ಲಿ 300 ಕೋಟಿ ರೂ. ದಾಟಿ ಮುನ್ನುಗ್ಗಿತ್ತು. ಅಷ್ಟೇ ಅಲ್ಲೇ 1825 ಕೋಟಿ ರೂ. ಕಲೆಕ್ಷನ್ ಗಳಿಸಿ ಮಾಡಿತ್ತು.
ಈಗ ಬಾಹುಬಲಿ ಸಿನಿಮಾವನ್ನು ಬ್ಯುಸಿನೆಸ್ ವಿದ್ಯಾರ್ಥಿಗಳು ಅಧ್ಯಯನ ಮಾಡಲಿದ್ದಾರೆ. ಮರುಕಟ್ಟೆಯಲ್ಲಿ ಬಾಹುಬಲಿ ಯಶಸ್ಸು ವಿಚಾರವನ್ನು ಇಟ್ಟುಕೊಂಡು ಅಹಮದಾಬಾದ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜ್‍ಮೆಂಟ್‍ನ ವಿದ್ಯಾರ್ಥಿಗಳು ಅಧ್ಯಯನ ನಡೆಸಲಿದ್ದಾರೆ.
ಸಮಕಾಲಿನ ಚಿತ್ರೋದ್ಯಮದ ವ್ಯಾಸಂಗಕ್ಕಾಗಿ ಮತ್ತು ಮಾರುಕಟ್ಟೆ ದೃಷ್ಟಿಕೋನದಿಂದ ಅಧ್ಯಯನ ಮಾಡಲು ಬಾಹುಬಲಿ 2 ಸಿನಿಮಾವನ್ನು ಆಯ್ಕೆ ಮಾಡಲಾಗಿದೆ. ಅಷ್ಟೆ ಅಲ್ಲದೇ ಸಿನಿಮಾ ರಂಗದ ಸವಾಲಿನ ಬಗ್ಗೆಯೂ ವಿದ್ಯಾರ್ಥಿಗಳು ಅಧ್ಯಯನ ನಡೆಸಲಿದ್ದಾರೆ ಎಂದು ಐಐಎಂ ಹೇಳಿದೆ.
ಭಾರತದಲ್ಲಿ ಬಾಹುಬಲಿ 2 2017ರ ಗೂಗಲ್ ಸರ್ಚ್ ನಲ್ಲಿ ಅಗ್ರಸ್ಥಾನ ಸಿಕ್ಕಿದ್ದು, 2017 ರಲ್ಲಿ ಟ್ವಿಟರ್ ಟಾಪ್ ಟ್ರೆಂಡಿಗ್ ಟಾಪಿಕ್ ಆಗಿತ್ತು. ಅಷ್ಟೇ ಅಲ್ಲದೇ ಅತಿ ಖಾಸಗಿ ವಾಹಿನಿಯಲ್ಲಿ ಅತಿ ಹೆಚ್ಚು ಟಿಆರ್‍ಪಿ ರೇಟಿಂಗ್ ಪಡೆದುಕೊಂಡ ಹಿಂದಿ ಚಿತ್ರ ಎನ್ನುವ ಹೆಗ್ಗಳಿಕೆಗೆ ಬಾಹುಬಲಿ ಪಾತ್ರವಾಗಿತ್ತು. ಇದನ್ನು ಓದಿ: ಭಾರತೀಯ ಚಿತ್ರರಂಗದಲ್ಲಿ ಒಂದೇ ದಿನ 10 ದಾಖಲೆಗಳನ್ನು ಬರೆದ ಬಾಹುಬಲಿ-2: ಇಲ್ಲಿದೆ ಪೂರ್ಣ ಪಟ್ಟಿ
ಎಸ್.ರಾಜಮೌಳಿ ನಿರ್ದೇಶನದ ಸರಣಿ ಬಾಹುಬಲಿ ಚಲನಚಿತ್ರ 150 ಕೋಟಿ ರೂ. ಬಜೆಟ್‍ನಲ್ಲಿ ನಿರ್ಮಾಣಗೊಂಡಿತ್ತು. `ಬಾಹುಬಲಿ ದಿ ಬಿಗಿನಿಂಗ್’ 2015 ರಲ್ಲಿ ಬಿಡುಗಡೆಗೊಂಡಿತ್ತು. ಪ್ರಭಾಸ್, ಅನುಷ್ಕಾ ಶೆಟ್ಟಿ, ರಾಣಾ ದಗ್ಗುಬಾಟಿ, ರಮ್ಯಕೃಷ್ಣ, ಸತ್ಯರಾಜ್ ಅಭಿನಯಿಸಿದ್ದರು. ಬಾಹುಬಲಿ ಭಾಗ 2 ಚಿತ್ರಕ್ಕೆ ನಿರ್ಮಾಣಕ್ಕೆ 150 ಕೋಟಿ ರೂ. ವೆಚ್ಚವಾಗಿದ್ದು, ಬಾಕ್ಸ್ ಆಫೀಸ್ ನಲ್ಲಿ 1725 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಇದನ್ನು ಓದಿ: ಟಿವಿ ಟಿಆರ್‍ಪಿಯಲ್ಲೂ ಹೊಸ ದಾಖಲೆ ಬರೆದ ಬಾಹುಬಲಿ































