ಹೈದರಾಬಾದ್: ಎಸ್‍ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ -2 ಚಿತ್ರ ಟ್ರೇಲರ್ ಮೂಲಕವೇ ಈಗಾಗಲೇ ದಾಖಲೆ ನಿರ್ಮಿಸಿದೆ. ಇದೀಗ ಈ ಚಿತ್ರ ಮತ್ತೊಂದು ದಾಖಲೆ ಮುರಿಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
250 ಕೋಟಿ ರೂ. ಬಜೆಟ್‍ನಲ್ಲಿ ನಿರ್ಮಾಣವಾದ ಬಾಹುಬಲಿ- 1 ಚಿತ್ರ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಂಡು 600 ಕೋಟಿ ರೂ. ಗಳಿಸುವ ಮೂಲಕ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ವಿಶೇಷ ಅಂದ್ರೆ ಇದರಲ್ಲಿ ಚಿತ್ರದ ನಿರ್ಮಾಪಕರಿಗಿಂತ ವಿತರಕರೇ ಹೆಚ್ಚಿನ ದುಡ್ಡು ಮಾಡಿದ್ರು. ನಾರ್ತ್ ಅಮೆರಿಕದಲ್ಲಿ ಬಾಹುಬಲಿ-1 ಚಿತ್ರದ ವಿತರಕರು 4 ಮಿಲಿಯನ್ ಡಾಲರ್( ಅಂದಾಜು 26 ಕೋಟಿ ರೂ.)ಗೆ ಚಿತ್ರದ ರೈಟ್ಸ್ ಖರೀದಿಸಿದ್ದರು. ಆದ್ರೆ ಇದರಿಂದ ಅವರು ಗಳಿಸಿದ್ದು ಬರೋಬ್ಬರಿ 9 ಮಿಲಿಯನ್ ಡಾಲರ್(ಅಂದಾಜು 58 ಕೋಟಿ ರೂ.)
Advertisement
ಇದೀಗ ಬಾಹುಬಲಿ-2 ಚಿತ್ರದ ನಾರ್ತ್ ಅಮೆರಿಕದ ರೈಟ್ಸ್ ಬೇರೊಬ್ಬ ವಿತರಕರ ಪಾಲಾಗಿದೆ. ಗ್ರೇಟ್ ಇಂಡಿಯನ್ ಫಿಲ್ಮ್ಸ್‍ನವರು 7 ಮಿಲಿಯನ್ ಡಾಲರ್(45 ಕೋಟಿ ರೂ.) ಕೊಟ್ಟು ಬಾಹುಬಲಿ-2 ಸಿನಿಮಾದ ರೈಟ್ಸ್ ಖರೀದಿಸಿದ್ದಾರೆ. ಇದರಿಂದ ಬರೋಬ್ಬರಿ 15 ಮಿಲಿಯನ್‍ಡಾಲರ್ (98 ಕೋಟಿ ರೂ.) ಗಳಿಸೋ ನಿರೀಕ್ಷೆಯಲ್ಲಿದ್ದು, ಹಿಂದಿನ ದಾಖಲೆಗಳನ್ನ ಮುರಿಯುವ ಎಲ್ಲಾ ಲಕ್ಷಣಗಳಿವೆ.
Advertisement
ಈ ಹಿಂದೆ ಅಮೆರಿಕದಲ್ಲಿ ದಾಖಲೆಯ ಹಣ ಗಳಿಸಿದ ಭಾರತೀಯ ಚಿತ್ರವೆಂದರೆ ಆಮೀರ್ ಖಾನ್ ಅಭಿನಯದ ದಂಗಲ್ ಸಿನಿಮಾ. ದಂದಲ್ ಚಿತ್ರ ಬರೋಬ್ಬರಿ 80.4 ಕೋಟಿ ರೂ. (12.3 ಮಿಲಿಯನ್ ಡಾಲರ್) ಗಳಿಸಿತ್ತು.
Advertisement
ಅರ್ಕಾ ಮೀಡಿಯಾ ವಕ್ರ್ಸ್‍ನ ಶೋಭು ಯರ್ಲಗಡ್ಡ ಹಾಗೂ ಪ್ರಸಾದ್ ದೇವಿನೇನಿ ಬೇರೆ ಬೇರೆ ಪ್ರದೇಶಗಳಿಗೆ ಹೊಸ ವಿತರಕರ ವ್ಯವಸ್ಥೆ ಮಾಡಿದ್ದಾರೆ. ಬಾಹುಬಲಿ-2ರ ಹಿಂದಿ ಆವೃತ್ತಿಯನ್ನ ಕರಣ್ ಜೋಹಾರ್ ಅವರ ಧರ್ಮ ಪ್ರೊಡಕ್ಷನ್ಸ್ ಹಾಗೂ ಅನಿಲ್ ಥಡಾನಿ ಅವರ ಎಎ ಫಿಲ್ಮ್ಸ್ ವಿರತಣೆ ಮಾಡಲಿದೆ. ರಾಜಮೌಳಿ ಹಾಗೂ ಬಾಹುಬಲಿ ಚಿತ್ರತಂಡ ಕಟ್ಟಪ್ಪನ ಖಡ್ಗವನ್ನ ಕರಣ್ ಜೋಹಾರ್‍ಗೆ ಗಿಫ್ಟ್ ಕೂಡ ಮಾಡಿದ್ದಾರೆ.
Advertisement
ಇನ್ನು ಭಾರತದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಹೊಸ ವಿತರಕರು ಈಗಾಗಲೇ ದಾಖಲೆ ಮೊತ್ತದ ಹಣ ನೀಡಿ ರೈಟ್ಸ್ ಪಡೆದಿದ್ದಾರೆ. ಕೇರಳ ವಿತರಕರಾದ ಗ್ಲೋಬಲ್ ಯುನೈಟೆಡ್ ಮೀಡಿಯಾ ಬಾಹುಬಲಿ- 1 ಚಿತ್ರಕ್ಕೆ ನೀಡಿದ ಹಣಕ್ಕಿಂತ ಡಬಲ್ ಹಣ ಪಾವತಿಸಿದ್ದಾರೆ ಎನ್ನಲಾಗಿದೆ. ಬಾಹುಬಲಿ -2 ಚಿತ್ರದ ಮೇಲೆ ನಮಗೆ ಬಹಳ ನಂಬಿಕೆಯಿದೆ. ಚಿತ್ರತಂಡದೊಂದಿಗೂ ನಮಗೆ ಒಳ್ಳೇ ಬಾಂಧವ್ಯವಿದೆ. ಹೌದು, ನಾವು ದಾಖಲೆ ಮೊತ್ತದ ಹಣ ಕೊಟ್ಟಿದ್ದೇವೆ. ಆದ್ರೆ ಭಾಗ-1 ರಂತೆ ಬಾಹುಬಲಿ-2 ಚಿತ್ರ ಕೂಡ ಬಾಕ್ಸ್ ಆಫೀಸ್ ಧೂಳೆಬ್ಬಿಸಲಿದೆ ಅನ್ನೋ ನಂಬಿಕೆಯಿದೆ ಅಂತ ಗ್ಲೋಬಲ್ ಯುನೈಟೆಡ್ ಮೀಡಿಯಾದ ಪ್ರೇಮ್ ಮೆನನ್ ಹೇಳಿದ್ದಾರೆ.
ಇನ್ನು ಬಾಹುಬಲಿ-2 ಚಿತ್ರದ ಸ್ಯಾಟಲೈಟ್ ರೈಟ್ಸ್ ಬರೋಬ್ಬರಿ 78 ಕೋಟಿ ರೂ.ಗೆ ಮಾರಾಟವಾಗಿದೆ. ಹಿಂದಿ ಆವೃತ್ತಿ ಸೋನಿ ವಾಹಿನಿಗೆ(50 ಕೋಟಿ ರೂ.) ಹಾಗೂ ತೆಲುಗು, ತಮಿಳು, ಮಲಯಾಳಂ ಆವೃತ್ತಿ ಸನ್ ನೆಟವರ್ಕ್ ವಾಹಿನಿಗೆ (28 ಕೋಟಿ ರೂ.) ಮಾರಾಟವಾಗಿದೆ. ಇನ್ನು ಚಿತ್ರದ ಡಿಜಿಟಲ್ ರೈಟ್ಸ್ ನಿರ್ಮಾಪಕರ ಬಳಿ ಇದ್ದು ಅಮೇಜಾನ್ ಹಾಗೂ ನೆಟ್‍ಫ್ಲಿಕ್ಸ್ ಜೊತೆಗೆ ಮಾತುಕತೆ ನಡೆಯುತ್ತಿದೆ.
ಬಾಹುಬಲಿ 1 ಹಾಗೂ ಭಾಗ-2 ಚಿತ್ರಗಳಿಗೂ 450 ಕೋಟಿ ರೂ. ಬಜೆಟ್. ಬಾಹುಬಲಿ-2 ಚಿತ್ರಕ್ಕೆ ನಿರ್ಮಾಪಕರಿಗೆ 400 ರಿಂದ 500 ಕೋಟಿ ರೂ. ಬರೋ ನಿರೀಕ್ಷೆಯಿದೆ. ಬಾಹುಬಲಿ-2 ಚಿತ್ರದ ಬಿಡುಗಡೆಗೂ ಮೊದಲೇ ನಾವು ಲಾಭ ಗಳಿಸಿದ್ದೇವೆ. ಈ ಚಿತ್ರ ಮತ್ತೊಂದು ಬ್ಲಾಕ್‍ಬಸ್ಟರ್ ಆಗುತ್ತದೆ ಹಾಗೂ ರೈಟ್ಸ್ ಪಡೆದವರೂ ಕೂಡ ಲಾಭ ಮಾಡಲಿದ್ದಾರೆ ಅನ್ನೋ ಎಲ್ಲಾ ನಂಬಿಕೆಯಿದೆ ಅಂತಾರೆ ಚಿತ್ರದ ನಿರ್ಮಾಪಕ ಯರ್ಲಗಡ್ಡ.
ಬಾಹುಬಲಿ-2 ಚಿತ್ರ ಏಪ್ರಿಲ್ 28ರಂದು ಭಾರತದಲ್ಲಿ 6500 ಸ್ಕ್ರೀನ್‍ಗಳಲ್ಲಿ ಹಾಗೂ ನಾರ್ತ್ ಅಮೆರಿಕದಲ್ಲಿ 750 ಸ್ಕ್ರೀನ್‍ಗಳಲ್ಲಿ, ಜೊತೆಗೆ ಇನ್ನುಳಿದ 1000 ಥಿಯೇಟರ್‍ಗಳಲ್ಲಿ ಬಿಡುಗಡೆಯಾಗಲಿದೆ.
ತೆಲುಗು ಟ್ರೇಲರ್
ಹಿಂದಿ ಟ್ರೇಲರ್
ಮಲೆಯಾಳಂ ಟ್ರೇಲರ್
ತಮಿಳು ಟ್ರೇಲರ್
ಪ್ರೋಮೋ ಟ್ರೇಲರ್ ವಿಡಿಯೋ