ಬೆಂಗಳೂರು: ಯಾವುದೇ ರೋಗವನ್ನಾದರೂ ಜಯಿಸಬಲ್ಲ ಶಕ್ತಿ ಕಲಾವಿದನ ಕುಂಚಕ್ಕಿದೆ ಎನ್ನುತ್ತಾರೆ. ಅದೇ ರೀತಿ ಇಲ್ಲೊಬ್ಬ ಕಲಾವಿದರು (Artist) ಬಿಡಿಸಿದ್ದ ಚಿತ್ರದಿಂದಾಗಿ ಲಕ್ವ ಹೊಡೆದು ಮಲಗಿದ್ದ ವೃದ್ಧೆಯು ಓಡಾಡುವಷ್ಟರ ಮಟ್ಟಿಗೆ ಗುಣವಾಗಿದ್ದರು.
ಹೌದು.. ಕಳೆದ ಒಂದೆರಡ್ಮೂರು ವರ್ಷದಿಂದ ಬಾಲಾಜಿಯವರ ತಾಯಿಗೆ ಲಕ್ವ (Stroke) ಹೊಡೆದು ಸ್ವಾಧಿನವನ್ನು ಕಳೆದುಕೊಂಡು ಒಂದೇ ಕಡೆ ಮಲಗಿದ್ದರು. ಅವರು ಮಲಗಿದ್ದ ಜಾಗದಲ್ಲಿದ್ದ ಕಿಟಕಿಯಿತ್ತು. ಅಲ್ಲಿಂದ ಕಾಣುತ್ತಿದ್ದ ಗೋಡೆಯನ್ನು ಯಾವಾಗಲೂ ನೋಡುತ್ತಿದ್ದರು. ತಮ್ಮ ತಾಯಿ (Mother) ಬರೀ ಗೋಡೆಯನ್ನು ನೋಡುವುದು ಬೇಡ ಎಂದು ನಿರ್ಧರಿಸಿದ್ದ ಬಾಲಾಜಿ ಯಾರಾದರೂ ಕಲಾವಿದರ ಬಳಿ ಅಲ್ಲೊಂದು ಚಿತ್ರ ಬಿಡಿಸಬೇಕು ಎಂದು ನಿರ್ಧರಿಸಿದ್ದರು.
View this post on Instagram
ಆದರೆ ಅದು ಕೊವಿಡ್ (Covid) ಸಮಯವಾಗಿತ್ತು. ಕರ್ಫ್ಯೂ ಬೇರೆ ಇದ್ದಿದ್ದರಿಂದ ಯಾರೂ ಬರಲು ಮನಸ್ಸು ಮಾಡುತ್ತಿರಲಿಲ್ಲ. ಹೀಗೆ ಕಲಾವಿದರನ್ನು ಹುಡುಕುತ್ತಿದ್ದಾಗ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ (Social Media) ಸಿಕ್ಕ ಹೆಸರು ಬಾದಲ್ ನಂಜುಂಡಸ್ವಾಮಿ (Baadal Nanjundaswamy). ಇವರು ಮೈಸೂರಿನ ಹವ್ಯಾಸಿ ಕಲಾವಿದರು. ಇವರು ರಸ್ತೆ ಬೀದಿ, ಮನೆಯ ಗೋಡೆ ಎನ್ನದೇ ಎಲ್ಲೆಡೆ ಚಿತ್ರ ಬಿಡಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಬಾಲಾಜಿ ಅವರು ನಂಜುಂಡಸ್ವಾಮಿ ಅವರನ್ನು ತಮ್ಮ ಮನೆಯ ಬಳಿ ಇರುವ ಗೋಡೆಯ ಮೇಲೂ ಚಿತ್ರ ಬಿಡಿಸುವಂತೆ ಮನವಿ ಮಾಡಿಕೊಂಡರು. ಇದನ್ನೂ ಓದಿ: ಪಾದಯಾತ್ರೆ ವೇಳೆ ಡಿಕೆಶಿ ಕೈಹಿಡಿದು ಓಡಿದ ರಾಹುಲ್
ಬಾಲಜಿ ಅವರ ಮನವಿ ಮೇರೆಗೆ ಬಂದ ನಂಜುಂಡ ಸ್ವಾಮಿ ಅವರು ಮಾಸ್ಕ್‌ನ್ನು ಚಿತ್ರವನ್ನು ಬಿಡಿಸಿಕೊಟ್ಟಿದ್ದರು. ಇದನ್ನು ಖುಷಿಯಿಂದ ನೊಡುತ್ತಿದ್ದ ಆ ವೃದ್ಧೆಗೆ ಮುಂದೆ ಅದೇ ಚಿತ್ರ ಅವರ ಜೀವನಕ್ಕೆ ಸ್ಫೂರ್ತಿ ನೀಡಿತು. ಲಕ್ವದಿಂದಾಗಿ ಮಲಗಿದ್ದಲ್ಲೇ ಎಲ್ಲಾ ಆಗಿದ್ದ ಅವರು, ದಿನೇ ದಿನೇ ಚೇತರಿಸಿಕೊಂಡು ನಡೆದು ಓಡಾಡತೋಡಗಿದ್ದರು. ಹೀಗೆ ಒಂದು ವರ್ಷ ಬದುಕಿದ್ದ ಅವರು ಇಂದು ನಿಧನರಾದರು. ಇದನ್ನೂ ಓದಿ: ಸ್ಕೂಟರ್‌ಗೆ ಡಿಕ್ಕಿ ಹೊಡೆದು ದೇವಸ್ಥಾನದ ಕಾಂಪೌಂಡ್ ಏರಿದ ಕಾರ್