– ಸಿಎಂಗೆ ಶೃಂಗಾರ ಸಿರಿ, ಬರಗಾಲದಲ್ಲಿ ಜನರಿಗೆ ಸಂಕಟದ ಕಹಿ
ಬೆಂಗಳೂರು: ಸಿಎಂ ಕಾವೇರಿ ನಿವಾಸದ ನವೀಕರಣಕ್ಕೆ ಕೋಟಿ ಕೋಟಿ ರೂ. ಹಣ ವೆಚ್ಚ ಮಾಡುತ್ತಿರುವುದನ್ನು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B.Y Vijayendra) ತೀವ್ರವಾಗಿ ಟೀಕಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಮುಖ್ಯಮಂತ್ರಿಗಳಿಗೆ ಶೃಂಗಾರ ಸಿರಿ ಬರಗಾಲದಲ್ಲಿ ಜನರಿಗೆ ಸಂಕಟದ ಕಹಿ ಎಂದು ತಿವಿದಿದ್ದಾರೆ.
Advertisement
ರಾಜ್ಯದಲ್ಲಿ ಜನ ಜಾನುವಾರುಗಳಿಗೆ ನೀರು, ಮೇವಿಗೆ ಹಾಹಾಕಾರ ಉಂಟಾಗಿದೆ. ನಾಡಿನೆಲ್ಲೆಡೆ ತೀವ್ರ ಬರ ಎದುರಿಸುತ್ತಿರುವ ಹೊತ್ತಲ್ಲಿ ತಮ್ಮ ಮನೆಯ ಶೃಂಗಾರಕ್ಕೆ ಬರೋಬ್ಬರಿ 9 ಕೋಟಿ ರೂ. ದುಂದು ವೆಚ್ಚ ಮಾಡುವ ಜರೂರು ಮುಖ್ಯಮಂತ್ರಿಗಳಿಗಿತ್ತೆ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಾನು ರಾಜಕಾರಣಿಯಾಗಿ ಹುಟ್ಟಿಲ್ಲ, ರಾಜಕಾರಣಿಯಾಗಿ ಸಾಯಲ್ಲ: ಅನಂತ್ ಕುಮಾರ್ ಹೆಗಡೆ
Advertisement
Advertisement
ಹೀನಾಯ ಆರ್ಥಿಕ ಪರಿಸ್ಥಿತಿಯ ಕಾರಣಕ್ಕೆ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತ ನೀರಾಗಿದೆ. ಸಂಕಷ್ಟದ ಕಾಲದ ಪರಿಹಾರ ಕಾರ್ಯವೂ ಸ್ಥಗಿತಗೊಂಡಿದೆ. ಇಂಥಹ ಪರಿಸ್ಥಿತಿಯಲ್ಲೂ ಮನೆ ಶೃಂಗಾರದ ಆದ್ಯತೆ ಮೇಲೆ 9 ಕೋಟಿ ರೂ. ನುಂಗಿದರೆ `ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು’ ಎಂಬ ಗಾದೆ ಮಾತು ನೆನಪಿಗೆ ಬರುತ್ತದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮೈತ್ರಿ ಟಿಕೆಟ್ ಸ್ಪರ್ಧೆ- ಭಾನುವಾರ ಬೆಂಗಳೂರು ನಿವಾಸದಲ್ಲಿ ಸುಮಲತಾ ಸಭೆ
Advertisement