ನವದೆಹಲಿ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ 1800 ಕೋಟಿ ರೂ.ಯನ್ನು ಬಿಜೆಪಿ ಹೈಕಮಾಂಡ್‍ಗೆ ನೀಡಿದ್ದಾರೆ. ಅದನ್ನ ಡೈರಿಯಲ್ಲಿ ಬರೆದಿಟ್ಟಿದ್ದಾರೆ ಎನ್ನುವುದು ಕಾಂಗ್ರೆಸ್ ಸೃಷ್ಟಿಸಿರುವ ನಕಲಿ ದಾಖಲೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಕಿಡಿಕಾರಿದ್ದಾರೆ.
ಈ ಸಂಬಂಧ ಜೇಟ್ಲಿ ಅವರು ತಮ್ಮ ಬ್ಲಾಗ್‍ನಲ್ಲಿ ಬರೆದು, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್ಸಿನ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಶುಕ್ರವಾರ ಬಿಎಸ್‍ವೈ ವಿರುದ್ಧ ಮಾಡಿದ ಆರೋಪಕ್ಕೆ ಆಧಾರ ಕ್ಯಾರವಾನ್ ವರದಿಯಾಗಿದೆ. ಇದು ಕಾಂಗ್ರೆಸ್ ನಾಯಕರೇ ಬೇಕು ಅಂತ ಸೃಷ್ಟಿಸಿರುವ ನಕಲಿ ದಾಖಲೆ. ಕಾಂಗ್ರೆಸ್ ಅವರೇ ತಯಾರಿಸಿರುವ ನಕಲಿ ಮತ್ತು ಸುಳ್ಳು ದಾಖಲೆಗಳ ಪೋಟೋಕಾಪಿಯನ್ನೇ ಯಡಿಯೂರಪ್ಪ ಅವರ ಡೈರಿ ಎಂದು ವಿವಾದ ಸೃಷ್ಟಿಸಿದ್ದಾರೆ. ಕಾಂಗ್ರೆಸ್ ದಿನಕ್ಕೊಂದು ಹೊಸ ಕಥೆಯನ್ನು ಕಟ್ಟುತ್ತ, ಚುನಾವಣಾ ಸಂದರ್ಭದಲ್ಲಿ ಜನರ ತಲೆ ಕೆಡಿಸುವ ಕೆಲಸ ಮಾಡುತ್ತಿದೆ. ಆದರೆ ಮತದಾರರು ರಾಜಕಾರಣಿಗಳಿಗಿಂತ ಬುದ್ಧಿವಂತರು. ಅವರು ಸುಳ್ಳು ಹೇಳಿಕೆಗಳನ್ನು ನಂಬುವುದಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಪುಲ್ವಾಮಾದಂತಹ ದಾಳಿ ನಡೆಯುತ್ತಲೇ ಇರುತ್ತೆ, ಪಾಕ್ ಮೇಲೆ ವಿಮಾನ ದಾಳಿ ನಡೆಸಿದ್ದು ಸರಿಯಲ್ಲ: ಸ್ಯಾಮ್ ಪಿತ್ರೋಡಾ
Advertisement
Advertisement
ಈ ಹಿಂದೆ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಬಾಲಕೋಟ್‍ನಲ್ಲಿ ಭಾರತೀಯ ವಾಯುಪಡೆ ನಡೆಸಿದ ಉಗ್ರರ ಮೇಲಿನ ದಾಳಿಯನ್ನು ಪ್ರಶ್ನಿಸಿದ್ದರು. ಈ ವಿವಾದಾತ್ಮಕ ಹೇಳಿಕೆಗಳಿಂದ ಕಾಂಗ್ರೆಸ್ಸಿಗೆ ಆಗಿರುವ ಅವಮಾನ, ಮುಜುಗರವನ್ನು ಮುಚ್ಚಿ ಹಾಕಲು, ಶುಕ್ರವಾರ ಕಾಂಗ್ರೆಸ್ ಬಿಎಸ್‍ವೈ ವಿರುದ್ಧ ನಕಲಿ ಡೈರಿ ಸೃಷ್ಟಿಸಿ ಅದನ್ನು ಬಳಸಿಕೊಂಡಿದೆ ಅಂತ ವ್ಯಂಗ್ಯವಾಡಿದರು. ಇದನ್ನೂ ಓದಿ:ದಾಳಿ ನಡೆಯದೇ ಇದ್ದರೂ ಬಿಎಸ್‍ವೈ ಡೈರಿ ಐಟಿಗೆ ಸಿಕ್ಕಿದ್ದು ಹೇಗೆ?
Advertisement
Advertisement
ವಾಯುದಾಳಿಯಲ್ಲಿ 300ಕ್ಕೂ ಹೆಚ್ಚು ಉಗ್ರರನ್ನು ಭಾರತೀಯ ವಾಯುಸೇನೆ ನೆಲಸಮ ಮಾಡಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳಲ್ಲೇ ಪ್ರಸಾರವಾಗಿದೆ. ಆದ್ರೆ ಈ ಬಗ್ಗೆ ಪ್ರತಿಪಕ್ಷಗಳು ಮಾತ್ರ ನಂಬಲು ತಯಾರಿಲ್ಲ ಎಂದು ಬರಹದಲ್ಲಿ ಕಿಡಿಕಾರಿದರು.