ದಾವಣಗೆರೆ: ಬಿಜೆಪಿ (BJP) ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ (B.Y Vijayendra) ಬದಲಾವಣೆಯಾಗುವ ಲಕ್ಷಣ ಇದೆ. ಈ ಬಗ್ಗೆ ಭಯ ಇರುವ ಕಾರಣಕ್ಕೆ ಲಿಂಗಾಯತರ ಸಮಾವೇಶ (Lingayat Samavesha) ಮಾಡುತ್ತಿದ್ದಾರೆ. ಇದೆಲ್ಲ ಯಡಿಯೂರಪ್ಪ ಮತ್ತು ಅವರ ಮಕ್ಕಳ ಹಳೆಯ ಆಟಗಳು ಎಂದು ಶಾಸಕ ಬಿ.ಪಿ ಹರೀಶ್ (B.P. Harish) ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಯಡಿಯೂರಪ್ಪ ಅವರನ್ನ ಸಿಎಂ ಕುರ್ಚಿಯಿಂದ ಕೆಳಗೆ ಇಳಿಸುವಾಗ ಲಿಂಗಾಯತ ಸ್ವಾಮೀಜಿಗಳನ್ನ ಇಟ್ಟುಕೊಂಡು ಆಟ ಆಡುತ್ತಿದ್ದರು. ಈಗ ಸಹ ಲಿಂಗಾಯತರ ಸಮಾವೇಶ ಮಾಡುತ್ತಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಬದಲಾವಣೆ ಆಗಲೇ ಬೇಕು. ಜೊತೆಗೆ ಪಕ್ಷ ವಿರೋಧಿಗಳು ಹಾಗೂ ಮ್ಯಾಚ್ ಫಿಕ್ಸರ್‍ಗಳಿಗೆ ಪಾಠ ಕಲಿಸಬೇಕು ಎಂದು ಪರೋಕ್ಷವಾಗಿ ಮಾಜಿ ಸಚಿವ ರೇಣುಕಾಚಾರ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಚಾಮರಾಜನಗರ| ಊರೊಳಗೆ ನುಗ್ಗಿದ ಚಿರತೆಗೆ ಕರು ಬಲಿ – ಜನರಲ್ಲಿ ಆತಂಕ
Advertisement
Advertisement
ಯಡಿಯೂರಪ್ಪ ಮತ್ತು ವಿಜಯೇಂದ್ರ ಬಗ್ಗೆ ಪಕ್ಷದ ವರಿಷ್ಠರಿಗೆ ಹಾಗೂ ಸಂಸದರಿಗೆ ದೂರು ನೀಡಿದ್ದೇವೆ. ಅವರು ಸಹ ಇವರ ಬಗ್ಗೆ ನಮ್ಮ ಮುಂದೆ ಗುಣಗಾನ ಮಾಡಿದ್ದಾರೆ. ವಿಜಯೇಂದ್ರ ಜೊತೆ ಓಡಾಡುವ ಪಕ್ಷ ವಿರೋಧಿಗಳಿಗೆ ತಕ್ಕ ಪಾಠ ಆಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.
Advertisement
Advertisement
ವಿಜಯೇಂದ್ರ ವಿರುದ್ಧ ನನ್ನ ಹೋರಾಟ ನಿರಂತರವಾಗಿರುತ್ತದೆ. ಯತ್ನಾಳ್ ಜೊತೆ ಇರಲಿ ಬಿಡಲಿ, ನನ್ನ ಹೋರಾಟ ಮಾತ್ರ ನಿರಂತರವಾಗಿ ನಡೆಯುತ್ತದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಮ್ಯಾರಥಾನ್‌ನಲ್ಲಿ ಕುಸಿದು ಬಿದ್ದ ವ್ಯಕ್ತಿ – ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಶಾಸಕ ಸತೀಶ್ ಸೈಲ್