ಬೆಂಗಳೂರು: ರಾಜ್ಯದ ಮಸೀದಿಗಳಲ್ಲಿ ಆಜಾನ್ ಕೂಗಲು ಧ್ವನಿವರ್ಧಕ ಬಳಸುವುದನ್ನು ನಿಲ್ಲಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ.
ಆಜಾನ್‌ನಲ್ಲಿ ಇತರ ಧಾರ್ಮಿಕ ಸಮುದಾಯಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ಪದಗಳಿವೆ ಎಂಬ ಅರ್ಜಿದಾರರ ವಾದವನ್ನು ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರ ವಿಭಾಗೀಯ ಪೀಠ ತಿರಸ್ಕರಿಸಿತು. ಇದನ್ನೂ ಓದಿ: ಉತ್ತರ ಪ್ರದೇಶ ಮಾದರಿಯಲ್ಲಿ ಕರ್ನಾಟಕದಲ್ಲೂ ಜಾರಿಯಾಗುತ್ತಾ ಮದರಸಾ ಶಿಕ್ಷಣ ಮಂಡಳಿ?
Advertisement
Advertisement
ಭಾರತದ ಸಂವಿಧಾನದ 25 ಮತ್ತು 26ನೇ ವಿಧಿಗಳು ಭಾರತೀಯ ನಾಗರಿಕತೆಯ ವಿಶಿಷ್ಟವಾದ ಧಾರ್ಮಿಕ ಸಹಿಷ್ಣುತೆಯ ತತ್ವಗಳನ್ನು ಒಳಗೊಂಡಿವೆ ಎಂದು ಪೀಠವು ಉಲ್ಲೇಖಿಸಿದೆ.
Advertisement
ಆಜಾನ್‌ನಲ್ಲಿ ಇತರ ಧಾರ್ಮಿಕ ಸಮುದಾಯಗಳ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಪದಗಳಿವೆ. ಆದ್ದರಿಂದ ಮಸೀದಿಗಳಲ್ಲಿ ಆಜಾನ್ ಕೂಗುವಾಗ ಧ್ವನಿವರ್ಧಕಗಳನ್ನು ಬಳಸದಂತೆ ನಿರ್ದೇಶನ ನೀಡಬೇಕು ಎಂದು ಆರ್.ಚಂದ್ರಶೇಖರ್ ಎಂಬವರು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಇದನ್ನೂ ಓದಿ: 10 ಮಹಾನಗರ ಪಾಲಿಕೆಗಳ ಮೇಯರ್, ಉಪಮೇಯರ್ ಮೀಸಲಾತಿ ಪ್ರಕಟ – ನಿಮ್ಮ ನಗರಕ್ಕೆ ಯಾರು?
Advertisement
ಸಂವಿಧಾನದ 25 (1)ನೇ ವಿಧಿಯು ಯಾವುದೇ ವ್ಯಕ್ತಿ ತಮ್ಮ ಸ್ವಂತ ಧರ್ಮವನ್ನು ಮುಕ್ತವಾಗಿ ಪ್ರತಿಪಾದಿಸಲು, ಆಚರಣೆ ಮತ್ತು ಪ್ರಚಾರ ಮಾಡಲು ಮೂಲಭೂತ ಹಕ್ಕನ್ನು ನೀಡುತ್ತದೆ ಎಂದು ನ್ಯಾಯಾಲಯವು ತೀರ್ಪಿನಲ್ಲಿ ಉಲ್ಲೇಖಿಸಿದೆ.
ಮೇಲೆ ಹೇಳಿದ ಹಕ್ಕು, ಸಂಪೂರ್ಣ ಹಕ್ಕಲ್ಲ. ಆದರೆ ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಆರೋಗ್ಯ ಮತ್ತು ಸಂವಿಧಾನದ ಇತರ ನಿಬಂಧನೆಗಳ ಆಧಾರದ ಮೇಲೆ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಎಂದು ನ್ಯಾಯಾಲಯವು ಹೇಳಿದೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಸಿ.ಟಿ ರವಿ ದಂಪತಿ
ನಿಸ್ಸಂದೇಹವಾಗಿ ಅರ್ಜಿದಾರರು ಮತ್ತು ಇತರ ನಂಬಿಕೆಗಳ ಭಕ್ತರು ತಮ್ಮ ಧರ್ಮವನ್ನು ಆಚರಿಸುವ ಹಕ್ಕನ್ನು ಹೊಂದಿದ್ದಾರೆ. ಆಜಾನ್ ಮುಸ್ಲಿಮರಿಗೆ ಪ್ರಾರ್ಥನೆ ಸಲ್ಲಿಸುವ ಕರೆಯಾಗಿದೆ. ರಿಟ್ ಅರ್ಜಿಯ ಪ್ಯಾರಾ 6 (ಬಿ) ನಲ್ಲಿ ಅರ್ಜಿದಾರರು ಸ್ವತಃ, ಆಜಾನ್ ಇಸ್ಲಾಂ ಧರ್ಮಕ್ಕೆ ಸೇರಿದ ವ್ಯಕ್ತಿಗಳ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ. ಆಜಾನ್‌ನಲ್ಲಿ ಇತರ ಸಮುದಾಯಗಳ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ಪದಗಳಿಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿದೆ.