
ರಾಯಚೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ದಂಪತಿ ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದರು.
ರಾಯರ ಮೂಲ ವೃಂದಾವನಕ್ಕೆ ಇಂದು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಯಿಂದ ಆಶೀರ್ವಚನ ಪಡೆದರು. ಮಂತ್ರಾಕ್ಷತೆ ನೀಡಿ ದಂಪತಿಗೆ ಶ್ರೀಗಳು ಆಶೀರ್ವದಿಸಿದರು. ಇದನ್ನೂ ಓದಿ: ದೇಶದ ಅತಿ ದೊಡ್ಡ ಆಸ್ಪತ್ರೆ ಉದ್ಘಾಟಿಸಿದ ಮೋದಿ
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಟಿ ರವಿ, ಭಾರತ ವಿಶ್ವ ಗುರು ಆಗಬೇಕು ಅದೇ ನಮ್ಮ ಗುರಿ. ನಮ್ಮ ರಾಷ್ಟ್ರ, ವಿಶ್ವ ಗುರು ಆಗಬೇಕು. ಸ್ವಾವಲಂಬಿ ಆದಾಗ ಮಾತ್ರ ರಾಷ್ಟ್ರ ಗುರು ಆಗಲು ಸಾಧ್ಯ ಹೀಗಾಗಿ ಇದಕ್ಕೆ ಶಕ್ತಿ ಕೊಡಲಿ ಅಂತ ರಾಯರ ಬಳಿ ಪ್ರಾರ್ಥಿಸಿದ್ದೇನೆ ಎಂದರು. ಇದನ್ನೂ ಓದಿ: ಅಂದು ಸಂತೋಷ್ ಕುಮಾರ್ ಆತ್ಮಹತ್ಯೆ ವಿಷಯ ಕೇಳಿ ಆಶ್ಚರ್ಯ ಆಗಿತ್ತು: ಕೆ.ಎಸ್ ಈಶ್ವರಪ್ಪ
Live Tv