ನವದೆಹಲಿ: ಭಾರತ ತನ್ನ 75 ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಆಚರಿಸಲು ಸಿದ್ಧವಾಗಿದೆ. ಈ ವಿಶೇಷ ಸಂದರ್ಭವನ್ನು ಗುರುತಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ದೇಶಾದ್ಯಂತ 75 ಶಾಲೆಗಳ 750 ವಿದ್ಯಾರ್ಥಿನಿಯರು ಸೇರಿ ನಿರ್ಮಿಸಿರುವ ಉಪಗ್ರಹವನ್ನು ಉಡಾವಣೆ ಮಾಡಲಿದೆ.
ಇಸ್ರೋ ತನ್ನ SSLV-D1/EOS-02 ಕಾರ್ಯಾಚರಣೆಯನ್ನು ಆಗಸ್ಟ್ 7 ರಂದು ಭಾನುವಾರ ಬೆಳಗ್ಗೆ 9:18 ಕ್ಕೆ ಪ್ರಾರಂಭಿಸಲಿದೆ. ಆಜಾದಿಸ್ಯಾಟ್(AzadiSAT) ಹೆಸರಿನ ಉಪಗ್ರಹ ಇಸ್ರೋವಿನ ಸಣ್ಣ ಉಪಗ್ರಹ ಉಡಾವಣಾ ವಾಹನದ(ಎಸ್‌ಎಸ್‌ಎಲ್‌ವಿ) ಮೂಲಕ ನಭಕ್ಕೆ ಚಿಮ್ಮಲಿದೆ.
The launch of the SSLV-D1/EOS-02 Mission is scheduled for Sunday, August 7, 2022, at 9:18 am (IST) from Satish Dhawan Space Centre (SDSC), Sriharikota. ISRO invites citizens to the Launch View Gallery at SDSC to witness the launch. Registration is open at https://t.co/J9jd8yDs4a pic.twitter.com/rq37VfSfXu
— ISRO (@isro) August 1, 2022
ಏನಿದರ ವಿಶೇಷತೆ?
6 ತಿಂಗಳ ಅವಧಿಯ ಈ ಯೋಜನೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಒಂದು ಭಾಗವಾಗಿದೆ. ಈ ಉಪಗ್ರಹ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ(SDSC) ಉಡಾವಣೆಯಾಗಲಿದೆ. 8 ಕೆಜಿ ತೂಕದ ಉಪಗ್ರಹ ಹಲವು ಪ್ರಯೋಗಗಳನ್ನು ಹೊಂದಿದೆ. ತನ್ನದೇ ಆದ ಸೌರ ಫಲಕಗಳ ಚಿತ್ರಗಳನ್ನು ಕ್ಲಿಕ್ ಮಾಡಲು ಸೆಲ್ಫಿ ಕ್ಯಾಮೆರಾಗಳು ಮತ್ತು ದೀರ್ಘ ಶ್ರೇಣಿಯ ಸಂವಹನ ಟ್ರಾನ್ಸ್ಪಾಂಡರ್‌ಗಳನ್ನು ಹೊಂದಿದೆ. ಇದನ್ನೂ ಓದಿ: ನಾಳೆ ಉಡುಪಿ, ದ. ಕನ್ನಡ, ಉ.ಕನ್ನಡ ಕೊಡಗು, ಚಿಕ್ಕಮಗಳೂರಿಗೆ ರೆಡ್ ಅಲರ್ಟ್ ಜಾರಿ: ಎಷ್ಟು ಮಳೆಯಾಗಬಹುದು?
ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಹಾಗೂ ಗಣಿತ ವಿಷಯಗಳಲ್ಲಿ ವಿದ್ಯಾರ್ಥಿನಿಯರಿಗೆ ಆಸಕ್ತಿಯನ್ನು ಹೆಚ್ಚಿಸಲು ಹಾಗೂ ಕಲಿಕೆಗೆ ಉತ್ತೇಜನ ನೀಡಲು ಈ ಯೋಜನೆಯನ್ನು ಮಾಡಲಾಗಿದೆ. ಮಾತ್ರವಲ್ಲದೇ ಕೇವಲ ಮಹಿಳೆಯರೇ ಸೇರಿ ತಯಾರಿಸಿರುವ ಮೊದಲ ಉಪಗ್ರಹವೂ ಇದಾಗಿದೆ.
ಭೂಮಿ ಹಾಗೂ ಪರಿಸರದ ಅಧ್ಯಯನಗಳು, ಅರಣ್ಯ, ಜಲವಿಜ್ಞಾನ, ಕೃಷಿ, ಮಣ್ಣು ಹಾಗೂ ಕರಾವಳಿ ಭಾಗಗಳ ಉಷ್ಣ ವೈಪರೀತ್ಯಗಳ ಬಗ್ಗೆ ಇದು ಮಾಹಿತಿಯನ್ನು ಒದಗಿಸಲಿದೆ ಎನ್ನಲಾಗಿದೆ. ಇದನ್ನೂ ಓದಿ: ಅಮಿತ್ ಶಾಗೆ ರಾಜಾಹುಲಿ ನೀಡಿದ ಫಸ್ಟ್ ರಿಪೋರ್ಟ್ ರಿವೀಲ್ – ಸಿದ್ದರಾಮೋತ್ಸವ ಎಫೆಕ್ಟ್!