ಉಡುಪಿ: ಅಯೋಧ್ಯೆ (Ayodhya) ಬಾಲರಾಮ ಪ್ರತಿಷ್ಠಾಪನೆಯ ಮಂಡಲೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಉಡುಪಿಯ (Udupi) ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ 48 ದಿನಗಳ ಕಾಲದ ಮಂಡಲ ಉತ್ಸವದ ನೇತೃತ್ವ ವಹಿಸಿದ್ದಾರೆ. ಪ್ರತಿದಿನ ಅಭಿಷೇಕ ಹೋಮ ಹವನ ನಡೆಯುತ್ತಿದೆ. ಫೆಬ್ರವರಿ 7ರ ನಂತರ ಬಾಲರಾಮನಿಗೆ ತೊಟ್ಟಿಲು ಸೇವೆ (Cradle Service) ನಡೆಯಲಿದೆ.
Advertisement
ಅಯೋಧ್ಯೆ ಶ್ರೀರಾಮಮಂದಿರದಲ್ಲಿ (Ram Mandir) ಪೇಜಾವರ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಮಂಡಲೋತ್ಸವ ನಡೆಯುತ್ತಿದೆ. ಪ್ರತಿದಿನ ಅಭಿಷೇಕ, ಹೋಮ ಹವನ, ಪಲ್ಲಕ್ಕಿ ಸೇವೆಗಳನ್ನು ಬಾಲರಾಮನಿಗೆ ಸಮರ್ಪಿಸಲಾಗುತ್ತಿದೆ. ಈ ನಡುವೆ ಅಯೋಧ್ಯೆಯ ಶ್ರೀರಾಮನ ತೊಟ್ಟಿಲು ಸೇವೆಗೆ ಕಾಷ್ಠಶಿಲ್ಪದಲ್ಲಿ ನಿರ್ಮಿಸಲಾದ ತೊಟ್ಟಿಲನ್ನು ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ (Raghupathi Bhat) ಸಮರ್ಪಿಸಲಿದ್ದಾರೆ. ಇದನ್ನೂ ಓದಿ: ಲೋಕಸಭೆಗೆ ಅಲ್ಲ, ರಾಜ್ಯಸಭೆಗೆ ದೆಹಲಿಯಲ್ಲಿ ವಿ.ಸೋಮಣ್ಣ ಲಾಬಿ!
Advertisement
Advertisement
ರಾಜಸ್ಥಾನದ (Rajasthan) ಉದಯಪುರದಲ್ಲಿ ಬೀಟೆ ಮರದಿಂದ ನಿರ್ಮಿಸಲಾದ ಕೆತ್ತನೆಗಳುಳ್ಳ ತೊಟ್ಟಿಲನ್ನು ಫೆಬ್ರವರಿ 7ರಂದು ಸಂಜೆ ನಡೆಯುವ ಉತ್ಸವದಲ್ಲಿ ಅರ್ಪಣೆ ಮಾಡುವುದಾಗಿ ರಘುಪತಿ ಭಟ್ ‘ಪಬ್ಲಿಕ್ ಟಿವಿ’ಗೆ ಮಾಹಿತಿ ನೀಡಿದ್ದಾರೆ. ನೂತನ ತೊಟ್ಟಿಲಿನಲ್ಲಿ ಬಾಲರಾಮ ದೇವರಿಗೆ ಪೇಜಾವರ ಸ್ವಾಮೀಜಿ ತೊಟ್ಟಿಲು ಸೇವೆ ನಡೆಸಲಿದ್ದಾರೆ. ಇದನ್ನೂ ಓದಿ: ಅಂಧ ಭಕ್ತರು ಹೆಚ್ಚಿರುವ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಿ ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳುವ ಹುನ್ನಾರ: ಹರಿಪ್ರಸಾದ್ ವಾಗ್ದಾಳಿ
Advertisement