ಡಿಕ್ಕಿ ಹೊಡೆದು ಆಟೋ ಮೇಲೆಯೇ ಬಿತ್ತು ಕಾರು – ಮೂವರು ಸ್ಥಳದಲ್ಲಿಯೇ ಸಾವು

Public TV
1 Min Read
car auto accident mandya

ಮಂಡ್ಯ: ಆಟೋ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಘಟನೆ ನಡೆದಿದೆ. ವೇಗವಾಗಿ ಬಂದ ಕಾರು, ಆಟೋಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಆಟೋದಲ್ಲಿದ್ದ ಮೂವರು ದುರ್ಮರಣ ಹೊಂದಿದ್ದಾರೆ. ಆಟೋ ಚಾಲಕ ಶ್ರೀನಿವಾಸ್, ರವಿ ಕುಮಾರ್ ಹಾಗೂ ಭಾಸ್ಕರ್ ಮೃತ ದುರ್ದೈವಿಗಳು. ಇದನ್ನೂ ಓದಿ:  14 ವರ್ಷದ ಬಾಲಕಿ ಮೇಲೆ 2 ತಿಂಗಳ ಕಾಲ ಪದೇ-ಪದೇ ಅತ್ಯಾಚಾರ ಮಾಡಿದ್ದ ಪಾಪಿ

car auto accident mandya 1

ಡಿಕ್ಕಿಯ ರಭಸಕ್ಕೆ ಆಟೋ ರಸ್ತೆ ಪಕ್ಕದ ಗುಂಡಿಗೆ ಬಿದ್ದಿದೆ. ಆಟೋ ಮೇಲೆಯೇ ಕಾರು ಬಿದ್ದಿದೆ. ಈ ವೇಳೆ ಆಟೋದಲ್ಲಿದ್ದ ಮೂವರು ಮೃತಪಟ್ಟಿದ್ದಾರೆ.

Police Jeep

ಮಳವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸುತ್ತಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *