CrimeLatestMain PostNational

14 ವರ್ಷದ ಬಾಲಕಿ ಮೇಲೆ 2 ತಿಂಗಳ ಕಾಲ ಪದೇ-ಪದೇ ಅತ್ಯಾಚಾರ ಮಾಡಿದ್ದ ಪಾಪಿ

Advertisements

ಗುರುಗ್ರಾಮ: 14 ವರ್ಷದ ಬಾಲಕಿ ಮೇಲೆ ನೆರೆ ಮನೆಯ ವ್ಯಕ್ತಿಯೊಬ್ಬ ಎರಡು ತಿಂಗಳ ಕಾಲ ಪದೇ-ಪದೇ ಅತ್ಯಾಚಾರವೆಸಗಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.

ಆರೋಪಿಯು ನಾಲ್ಕು ದಿನಗಳ ಹಿಂದೆ ಬಾಲಕಿಯನ್ನು ಅಪಹರಿಸಿದ್ದಾನೆ. ನಂತರ ಬಾಲಕಿಯ ಕುಟುಂಬಸ್ಥರು ಆಕೆಯನ್ನು ಹುಡುಕುತ್ತಿದ್ದು, ಬುಧವಾರ ತಡರಾತ್ರಿ ದೆಹಲಿ-ಜೈಪುರ ಹೆದ್ದಾರಿಯ ಬಿಲಾಸ್‍ಪುರ ಚೌಕ್ ಬಳಿ ಪತ್ತೆ ಮಾಡಿದ್ದಾರೆ. ಬಾಲಕಿ ತನ್ನ ಕುಟುಂಬ ಸದಸ್ಯರಿಗೆ ತನಗಾದ ಸಮಸ್ಯೆಗಳ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದಾಳೆ. ಈ ಹಿನ್ನೆಲೆ ಬಾಲಕಿ ತಂದೆ ಪೊಲೀಸರಿಗೆ ದೂರು ಕೊಟ್ಟಿದ್ದು, ಇದರ ಆಧಾರದ ಮೇರೆಗೆ ಬಿಲಾಸ್‍ಪುರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: ಉತ್ತರ ಕೊರಿಯಾದೊಂದಿಗಿನ ಸಂಬಂಧವನ್ನು ಕಡಿತಗೊಳಿಸಿದ ಉಕ್ರೇನ್ 

ನಡೆದಿದ್ದೇನು?
ಆರೋಪಿಯು ಬಿಲಾಸ್‍ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹಳ್ಳಿಯೊಂದರಲ್ಲಿ ಬಾಲಕಿ ನೆರೆಮನೆಯಲ್ಲಿ ವಾಸಿಸುತ್ತಿದ್ದನು. ಬಾಲಕಿಯು 8ನೇ ತರಗತಿ ಓದುತ್ತಿದ್ದಳು. ಆಕೆಗೆ ಮದುವೆ ಮಾಡಿಕೊಳ್ಳುವುದಾಗಿ ಆಮಿಷವೊಡ್ಡಿ ಎರಡು ತಿಂಗಳ ಕಾಲ ಪದೇ ಪದೇ ಅತ್ಯಾಚಾರವೆಸಗಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಜುಲೈ 8 ರಂದು ಆರೋಪಿಗಳು ನನ್ನನ್ನು ಅಪಹರಿಸಿದ್ದರು. ಈ ವೇಳೆ ಅವರು ನನ್ನ ಮೇಲೆ ಅತ್ಯಾಚಾರ ಎಸಗಿದ್ದು, ನನ್ನ ಕುಟುಂಬ ಸದಸ್ಯರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಬಾಲಕಿ ತಿಳಿಸಿದ್ದಾಳೆ. ಇದನ್ನೂ ಓದಿ:  ಬಿಜೆಪಿ MLAಗೆ ಮಣ್ಣಿನ ಸ್ನಾನ ಮಾಡಿಸಿದ ಮಹಿಳೆಯರ ಗುಂಪು – ಕಾರಣ ಕೇಳಿ ನೆಟ್ಟಿಗರು ಶಾಕ್ 

ಬಿಲಾಸ್‍ಪುರ ಪೊಲೀಸ್ ಠಾಣೆಯ ಠಾಣಾಧಿಕಾರಿ(ಎಸ್‍ಎಚ್‍ಒ) ಅಜಯ್ ಕುಮಾರ್ ಈ ಕುರಿತು ಮಾತನಾಡಿದ್ದು, ಐಪಿಸಿ ಸೆಕ್ಷನ್ 363(ಅಪಹರಣಕ್ಕೆ ಶಿಕ್ಷೆ), 366 ಎ(ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ಕೃತ್ಯ) ಮತ್ತು 506(ಅಪರಾಧದ ಬೆದರಿಕೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(POCSO) ಕಾಯ್ದೆಯ ಸೆಕ್ಷನ್ 6 ರ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಆರೋಪಿಗಳಿಗಾಗಿ ತೀವ್ರ ತನಿಖೆ ನಡೆಯುತ್ತಿದೆ ಎಂದು ವಿವರಿಸಿದ್ದಾರೆ.

Live Tv

Leave a Reply

Your email address will not be published.

Back to top button