LatestMain PostNational

ಬಿಜೆಪಿ MLAಗೆ ಮಣ್ಣಿನ ಸ್ನಾನ ಮಾಡಿಸಿದ ಮಹಿಳೆಯರ ಗುಂಪು – ಕಾರಣ ಕೇಳಿ ನೆಟ್ಟಿಗರು ಶಾಕ್

Advertisements

ಲಕ್ನೋ: ಬಿಜೆಪಿ ಎಂಎಲ್‍ಎಗೆ ಮಹಿಳೆಯರ ಗುಂಪು ಮಣ್ಣಿನ ಸ್ನಾನ ಮಾಡಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಇದಕ್ಕೆ ಅಸಲಿ ಕಾರಣ ತಿಳಿದು ನೆಟ್ಟಿಗರು ಶಾಕ್ ಆಗಿದ್ದಾರೆ.

ಉತ್ತರ ಪ್ರದೇಶದ ಮಹಾರಾಜ್‍ಗಂಜ್‍ನಲ್ಲಿ ಮಹಿಳೆಯರ ಗುಂಪೊಂದು ಬಿಜೆಪಿ ಶಾಸಕ ಜಯಮಂಗಲ್ ಕನೋಜಿಯಾ ಅವರಿಗೆ ಮಣ್ಣನ್ನು ಕಲಸಿದ ನೀರಿನಿಂದ ಸ್ನಾನ ಮಾಡಿಸಿದ ವೀಡಿಯೋ ವೈರಲ್ ಆಗಿದೆ. ವೀಡಿಯೋ ನೋಡಿದ ನೆಟ್ಟಿಗರು ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಕೊನೆಗೆ ಇದು ಒಂದು ರೀತಿಯ ಆಚರಣೆ ಎಂದು ತಿಳಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 1 ಟಿಎಂಸಿ ನೀರು ತುಂಬಿದ್ರೆ KRS ಡ್ಯಾಂ ಸಂಪೂರ್ಣ ಭರ್ತಿ 

ಕಾರಣವೇನು?
ಬಿಸಿಲಿನ ತಾಪದ ನಡುವೆಯೂ ಮಳೆ ದೇವರನ್ನು ಒಲಿಸಿಕೊಳ್ಳುವ ಆಚರಣೆಯ ಭಾಗವಾಗಿ ಮಹಿಳೆಯರು ಬಿಜೆಪಿ ಶಾಸಕನಿಗೆ ಮಡೆ ಸ್ನಾನ(ಮಣ್ಣಿನ ಸ್ನಾನ) ಮಾಡಿಸಿದ್ದಾರೆ. ನಗರದ ಮುಖ್ಯಸ್ಥನಿಗೆ ಮಣ್ಣಿನ ಸ್ನಾನ ಮಾಡಿಸಿದರೆ ಇಂದ್ರ ದೇವನಿಗೆ ಸಂತೋಷವನ್ನು ನೀಡುತ್ತದೆ ಎಂಬುದು ನಂಬಿಕೆ. ಇದರಿಂದ ಮಳೆಯಾಗಿ ಭತ್ತದ ಇಳುವರಿ ಚೆನ್ನಾಗಿ ಆಗುತ್ತೆ ಎಂದು ಮಹಿಳೆಯರಲ್ಲಿ ಒಬ್ಬರಾದ ಮುನ್ನಿ ದೇವಿ ತಿಳಿಸಿದ್ದಾರೆ.

ಮಹಾರಾಜ್‍ಗಂಜ್‍ನ ಪಿಪಾರ್ಡೆಯುರಾ ಪ್ರದೇಶದ ಮಹಿಳೆಯರು ಶಾಸಕ ಜಯಮಂಗಲ್ ಕನೋಜಿಯಾ ಮತ್ತು ನಗರಪಾಲಿಕೆ ಅಧ್ಯಕ್ಷ ಕೃಷ್ಣ ಗೋಪಾಲ್ ಜೈಸ್ವಾಲ್‍ಗೆ ಹಾಡುಗಳನ್ನು ಆಡುತ್ತ ಮಡೆ ಸ್ನಾನ ಮಾಡಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಅವರಿಬ್ಬರು ಸಂತೋಷದಿಂದ ಭಾಗಿಯಾಗಿದ್ದಾರೆ.

ಈ ಕುರಿತು ಕನೋಜಿಯಾ ಅವರು ಮಾತನಾಡಿದ್ದು, ನಾನು ನನ್ನ ವಾರ್ಡ್‍ನಲ್ಲಿ ತಿರುಗಾಡುತ್ತಿದ್ದಾಗ ಹಲವಾರು ಮಹಿಳೆಯರು ಮತ್ತು ಮಕ್ಕಳು ನನಗೆ ಮಣ್ಣಿನಲ್ಲಿ ಸ್ನಾನ ಮಾಡಿಸಿದರು. ಇಂದ್ರದೇವನನ್ನು ಮೆಚ್ಚಿಸಲು ಇದು ಹಳೆಯ ಸಂಪ್ರದಾಯ ಮತ್ತು ನಂಬಿಕೆಯಾಗಿದೆ. ಅವರ ಪ್ರಾರ್ಥನೆಗಳು ನೆರವೆರಲಿ. ಶೀಘ್ರದಲ್ಲೇ ಮಳೆಯಾಗಲಿ ಎಂದು ನಾನು ಬಯಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಚಾಟ್ಸ್ ಪ್ರಿಯರು ಮಾಡಿ ಸವಿಯಿರಿ ‘ಮಸಾಲಾ ಕಾರ್ನ್ ಚಾಟ್’

Live Tv

Leave a Reply

Your email address will not be published.

Back to top button