ರೆಡ್ ಅಂಡ್ ವೈಟ್ ಸೆವೆನ್ ರಾಜ್ ನಿರ್ಮಾಣದ ‘ಅಥಿ ಐ ಲವ್ ಯು’ (Athi I Love You) ಚಿತ್ರದ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದೆ ಚಿತ್ರ ತಂಡ. ಚಾಮುಂಡೇಶ್ವರಿ ಸ್ಟುಡಿಯೋ ನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮಾ ಹರೀಶ್ ಹಾಗೂ ಕರ್ನಾಟಕದ ಖ್ಯಾತ ಸಾಹಸ ನಿರ್ದೇಶಕರಾದ ಥ್ರಿಲ್ಲರ್ ಮಂಜು ಅವರು ಚಿತ್ರದ ಫಸ್ಟ್ ಲುಕ್ (First Look)ಪೋಸ್ಟರ್ ಅನಾವರಣಗೊಳಿಸಿದರು.
Advertisement
ವೇದಿಕೆಯಲ್ಲಿ ನಿರ್ಮಾಪಕರಾದ ರೆಡ್ ಅಂಡ್ ವೈಟ್ ಸೆವೆನ್ ರಾಜ್, ಶಿಲ್ಪಾ ಶ್ರೀನಿವಾಸ್ ನಿರ್ಮಾಪಕ ರಾಜು ಕಲ್ಕುಣಿ, ಸಿವಿಜಿ ಪಬ್ಲಿಕೇಶನ್ ಚಂದ್ರು ಹಾಗೂ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ದು ಸದ್ದಿಲ್ಲದೆ ಕುಂಬಳಕಾಯಿಯನ್ನು ಒಡೆದು ಮುಗಿಸಿರುವುದಾಗಿಯೂ ನಿರ್ಮಾಪಕ ರೆಡ್ ಅಂಡ್ ವೈಟ್ ಸೆವೆನ್ ರಾಜ್ ಅವರು ಹೇಳಿಕೊಂಡರು. ಇದನ್ನೂ ಓದಿ:Exclusive: ಅರ್ಜುನ್ ಸರ್ಜಾ ನಿರ್ದೇಶನದ ಚಿತ್ರದಲ್ಲಿ ಉಪ್ಪಿ ಅಣ್ಣನ ಮಗ ನಟಿಸುತ್ತಾರಾ? ನಿರಂಜನ್ ಸ್ಪಷ್ಟನೆ
Advertisement
Advertisement
ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಬಹುತೇಕ ಮುಗಿಯುವ ಹಂತದಲ್ಲಿದ್ದು ಜೂನ್ ತಿಂಗಳಲ್ಲಿ ಚಿತ್ರ ಸೆನ್ಸರ್ ಬಾಗಿಲಿಗೆ ತೆರಳುವ ಸಾಧ್ಯತೆ ಇದೆ ಎಂದು ನಿರ್ದೇಶಕ ಮತ್ತು ನಟ ಲೋಕೇಂದ್ರ ಸೂರ್ಯ (Lokendra Surya) ಹೇಳಿದರು.
Advertisement
ಚಿತ್ರದ ನಟಿ ಶ್ರಾವ್ಯ (Shravya) ಮತ್ತೊಂದು ಚಿತ್ರದ ಶೂಟಿಂಗ್ನಲ್ಲಿ ತೊಡಗಿದ್ದ ಕಾರಣ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲವೆಂದು ತಿಳಿಸಿದರು. ಜೂನ್ ತಿಂಗಳಲ್ಲಿ ಅಥಿ ಐ ಲವ್ ಯು ಚಿತ್ರದ ಟ್ರೈಲರ್ ಕೂಡ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ.