ಟಾಲಿವುಡ್ ಪ್ರಭಾಸ್ (Prabhas) ಫ್ಯಾನ್ಯ್‌ಗೆ ಮತ್ತೆ ಆತಂಕ ಹುಟ್ಟಿಸಿದ್ದಾರೆ ಖ್ಯಾತ ಜ್ಯೋತಿಷಿ ವೇಣುಸ್ವಾಮಿ. ‘ಸಲಾರ್’ (Salaar) ಹಿಟ್ ಆಗಿದೆ. 700 ಕೋಟಿ ಗಳಿಸಿದೆ. ಹೀಗಿರುವಾಗ ಮತ್ಯಾಕೆ ಡಾರ್ಲಿಂಗ್ ಬದುಕಿನಲ್ಲಿ ಸಮಸ್ಯೆ ಬರಲಿವೆ ಎಂದಿದ್ದಾರೆ ವೇಣು ಸ್ವಾಮಿ? ಇನ್ಯಾವ ಅವಘಡ ಪ್ರಭಾಸ್ ಜೀವನದಲ್ಲಿ ಬರಲಿದೆ? ಫ್ಯಾನ್ಸ್ ಕೆಂಡ ಕಾರಿದ್ದೇಕೆ? ಇಲ್ಲಿದೆ ಮಾಹಿತಿ.
ನಟ ಪ್ರಭಾಸ್ (Prabhas) ಜೂಮ್‌ನಲ್ಲಿದ್ದಾರೆ. ಈಗಾಗಲೇ ಅವರು ಯುರೋಪ್‌ಗೆ ಹೋಗಿದ್ದಾರೆ. ಅದಕ್ಕೆ ಕಾರಣ ಶಸ್ತ್ರ ಚಿಕಿತ್ಸೆ. ಹಿಂದೊಮ್ಮೆ ಮಂಡಿ ನೋವಿನ ಆಪರೇಶನ್ ಯುರೋಪ್‌ನಲ್ಲಿಯೇ ಮಾಡಿಸಿಕೊಂಡಿದ್ದರು. ಈಗ ಮತ್ತೆ ಅದೇ ದೇಶಕ್ಕೆ ಹೋಗಿದ್ದಾರೆ. ಆರೋಗ್ಯದಲ್ಲಿ ಮತ್ಯಾಕೆ ಹೀಗೆ? ಉತ್ತರ ಗೊತ್ತಿಲ್ಲ. ಆದರೆ ಇದೇ ಸಮಯದಲ್ಲಿ ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಭವಿಷ್ಯ ನುಡಿದಿದ್ದಾರೆ. ಅದನ್ನು ಕೇಳಿ ಪ್ರಭಾಸ್ ಭಕ್ತಗಣ ಸಿಟ್ಟಾಗಿದ್ದಾರೆ. ಇದೆಲ್ಲ ಸುಳ್ಳು ಸುದ್ದಿ ಎನ್ನುತ್ತಿದ್ದಾರೆ. ಆದರೆ ವೇಣುಸ್ವಾಮಿ ಮಾತ್ರ ನಾನು ಹೇಳಿರುವುದು ಎಲ್ಲವೂ ನಿಜ ಎಂದಿದ್ದಾರೆ. ಹಾಗಿದ್ದರೆ ಅವರು ಹೇಳಿದ್ದೇನು? ಇದನ್ನೂ ಓದಿ:ಸುದೀಪ್ ಗಾಗಿ ರಕ್ಷಿತ್ ಶೆಟ್ಟಿ ಸಿನಿಮಾ: ಕಿಚ್ಚ ಹೇಳಿದ್ದೇನು?
‘ಸಲಾರ್’ (Salaar Film) ಸಿನಿಮಾವನ್ನು ಬರೀ ಅವರ ಅಭಿಮಾನಿಗಳು ಮಾತ್ರ ನೋಡುತ್ತಾರೆ ಎಂದು ಹೇಳಿದ್ದೆ. ಅದು ನಿಜವಾಗಿದೆ. ಈಗ ಇನ್ನೊಂದು ಸತ್ಯ ಇದೆ. ಅದೇ ಪ್ರಭಾಸ್ ಆರೋಗ್ಯ. ಅವರ ಆರೋಗ್ಯದಲ್ಲಿ ಏರುಪೇರಾಗಲಿದೆ. ಜೊತೆಗೆ ವೈಯಕ್ತಿಕ ಬದುಕಿನಲ್ಲಿ ಅನೇಕ ಅಡೆತಡೆ ಬರಲಿವೆ. ಇದು ಸತ್ಯವಾಗಲಿದೆ ಎಂದಿದ್ದಾರೆ. ಇದನ್ನೂ ಓದಿ:ಸಿಂಗಲ್ ಆಗಿರೋ ತ್ರಿಶಾಗೆ ರೋಸ್ ಕೊಟ್ಟಿದ್ಯಾರು?
ಮೂರು ವರ್ಷಗಳ ಹಿಂದೆಯೇ ವೇಣುಸ್ವಾಮಿ ಇದೇ ರೀತಿ ಪ್ರಭಾಸ್ ಹಿಂದೆ ಬಿದ್ದಿದ್ದರು. ಮೂರು ಸಿನಿಮಾ ಸೋಲಲಿದೆ. ಸಲಾರ್ ಗೆದ್ದರೂ ಅದನ್ನು ಅಭಿಮಾನಿಗಳು ಮಾತ್ರ ನೋಡುತ್ತಾರೆ ಎಂದಿದ್ದರು. ನಂತರ ಪ್ರಭಾಸ್ ಮದುವೆ ಆಗಲ್ಲ. ಅವರಿಗೆ ಆ ಯೋಗ ಇಲ್ಲ ಎಂದಿದ್ದರು. ಅದಕ್ಕೂ ಫ್ಯಾನ್ಸ್ ಕಿಡಿಕಾರಿದ್ದರು. ಈಗ ‘ಸಲಾರ್’ ಗೆದ್ದಿದೆ. ‘ಕಲ್ಕಿ’ ಸಿನಿಮಾ ಬರಲಿದೆ. ಹಾಗಿದ್ದರೆ ಪ್ರಭಾಸ್ ವೈಯಕ್ತಿಕ ಬದುಕಿನಲ್ಲಿ ಏನಾಗಲಿದೆ? ಅದು ಆರೋಗ್ಯದ ವಿಷಯವಾ ಅಥವಾ ಮದುವೆ ಲೆಕ್ಕಾಚಾರನಾ ಅಥವಾ ಅದನ್ನು ಮೀರಿದ್ದಾ? ಸಮಯವೇ ಎಲ್ಲದಕ್ಕೂ ಉತ್ತರ ಕೊಡಲಿದೆ.