ಬೆಂಗಳೂರು: ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ (Student) ಚಾಕೋಲೆಟ್ ಕೊಟ್ಟು ಲವ್ ಪ್ರಪೋಸ್ (Propose) ಮಾಡಿದ ಅಸಿಸ್ಟೆಂಟ್ ಪ್ರೊಫೆಸರ್‌ನನ್ನು (Assistant Professor) ನೆಲಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಘಟನೆ ಬಳಿಕ ಪ್ರೋಫೆಸರ್ ಅಬ್ದುಲ್ ವಿರುದ್ಧ ನೆಲಮಂಗಲದ ಖಾಸಗಿ ಕಾಲೇಜು ಆಡಳಿತ ಮಂಡಳಿ ನೆಲಮಂಗಲ (Nelamangala) ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಪ್ರೊಫೆಸರ್ ವಿರುದ್ಧ ಕ್ರೈಂ ನಂಬರ್ 79, ಬಿಎನ್‌ಎಸ್ ಆಕ್ಟ್ 74, 75, 329 (3) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬೆನ್ನಲ್ಲೇ ತನಿಖೆಗಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಲಿ ಖಮೇನಿ ನಮ್ಮೊಂದಿಗೆ ಇಲ್ಲ, ಇರಾನ್‌ನಲ್ಲಿ ಈಗ ನಾಯಕರೇ ಇಲ್ಲ: ಟ್ರಂಪ್

ಘಟನೆ ಏನು?
ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಅಬ್ದುಲ್, ಕ್ಲಾಸ್ ನಡೆಯುತ್ತಿದ್ದ ವೇಳೆ ವೇದಿಕೆಯಲ್ಲಿ ನಿಂತು ಮೈಕ್‌ನಲ್ಲೇ ವಿದ್ಯಾರ್ಥಿನಿಯೊಬ್ಬಳಿಗೆ ಪ್ರಪೋಸ್ ಮಾಡಿದ್ದಾನೆ. ಇದರಿಂದ ವಿದ್ಯಾರ್ಥಿನಿ ಕೋಪಗೊಂಡು ಪ್ರಶ್ನೆ ಮಾಡಿದ್ದಾಳೆ. ಆದರೆ ಯುವತಿಯೇ ನನ್ನ ಚೇಂಬರ್ ಬಳಿ ಬಂದು ಪ್ರೊಪೋಸ್ ಮಾಡಿದ್ದಳು. ನನ್ನ ಬಳಿ ಸಿಸಿಟಿವಿ ಸಾಕ್ಷ್ಯ ಇದೆ ಅಂತ ಎಲ್ಲರ ಮುಂದೆ ಆರೋಪ ಮಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಯುವತಿ ಪ್ರಿನ್ಸಿಪಾಲ್‌ಗೆ ಕಂಪ್ಲೆಂಟ್ ಮಾಡುತ್ತೇನೆ ಎಂದು ವಿರೋಧ ವ್ಯಕ್ತಪಡಿಸಿದ್ದಾಳೆ. ಇದನ್ನೂ ಓದಿ: ಮೂಡಿಗೆರೆ ಲವ್ ಜಿಹಾದ್ ಆರೋಪ ಪ್ರಕರಣ – 1 ತಿಂಗಳು ಉಪವಾಸ, ಮನೆಯಲ್ಲೇ ನಮಾಜ್ ಮಾಡುತ್ತಿದ್ದ ಅಪ್ರಾಪ್ತೆ
ಇನ್ನೂ ಈ ಪ್ರೊಫೆಸರ್ ಅಬ್ದುಲ್ ಈ ರೀತಿ ಮಾಡಿರುವುದು ಇದೆ ಮೊದಲಲ್ಲ. ಹೆಂಡತಿಯಿಂದ ದೂರವಾಗಿದ್ದ ಅಬ್ದುಲ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಈ ಹಿಂದೆ ಬೌರಿಂಗ್ ಆಸ್ಪತ್ರೆ, ತುಮಕೂರಿನ ಆಸ್ಪತ್ರೆಯಲ್ಲಿಯೂ ಕೂಡ ಇದೇ ರೀತಿ ಕೃತ್ಯ ಎಸಗಿದ್ದಾನೆ ಎಂಬ ಆರೋಪಗಳು ಈತನ ಮೇಲಿದೆ. ಇದರಿಂದ ಬುದ್ಧಿವಾದ ಹೇಳಿ ತುಮಕೂರು ಕಾಲೇಜಿನಿಂದ ಹೊರಹಾಕಿದ್ದಾರೆ. ಆದರೆ ಈಗ ನೆಲಮಂಗಲದ ಕಾಲೇಜಿನಲ್ಲೂ ಅದೇ ಬುದ್ಧಿ ಪ್ರದರ್ಶಿಸಿದ್ದಾನೆ. ಹೀಗಾಗಿ ರೊಚ್ಚಿಗೆದ್ದ ಯುವತಿ ಹಾಗೂ ವಿದ್ಯಾರ್ಥಿಗಳು ಚಪ್ಪಲಿಯಿಂದ ಹಲ್ಲೆ ಮಾಡಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದನ್ನೂ ಓದಿ: ಕ್ಲಾಸ್ ರೂಮಲ್ಲೇ ಚಾಕೊಲೇಟ್ ಕೊಟ್ಟು ವಿದ್ಯಾರ್ಥಿನಿಗೆ ಪ್ರಪೋಸ್ – ಚಪ್ಪಲಿ ಏಟು ತಿಂದ ಪ್ರೊಫೆಸರ್

