ಜೈಪುರ: ಆಡಳಿತಾರೂಢ ಬಿಜೆಪಿಗೆ ಈ ಬಾರಿಯ ವಿಧಾನಸಭಾ ಚುನಾವಣೆ ತೀವ್ರ ಮುಜುಗರಕ್ಕೆ ಉಂಟುಮಾಡುವತ್ತಾ ಫಲಿತಾಂಶ ಸಾಗುತ್ತಿದ್ದು, ಕಾಂಗ್ರೆಸ್ ಮತ್ತೆ ರಾಜಸ್ಥಾನದಲ್ಲಿ ಅಧಿಕಾರಕ್ಕೆ ಏರಿದೆ.
ಬಿಜೆಪಿಯ ಮಹಾರಾಣಿ ವಸುಂಧರಾ ರಾಜೇ ರಾಜ್ಯವನ್ನು ಉಳಿಸಿಕೊಳ್ಳಲು ವಿಫಲರಾಗಿದ್ದಾರೆ ಎನ್ನುವ ಚುನಾವಣೋತ್ತರ ಸಮೀಕ್ಷೆಗಳು ಸರಿ ಎಂದು ಇಂದಿನ ಫಲಿತಾಂಶಗಳು ತೋರಿಸುತ್ತಿವೆ. ಆಡಳಿತಾರೂಢ ಬಿಜೆಪಿ ಸರ್ಕಾರದ ವೈಫಲ್ಯ ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆಲುವಾಗಿ ಪರಿವರ್ತನೆಯಾಗುತ್ತಿದೆ.
Advertisement
Advertisement
ಬಿಜೆಪಿ ಎಡವಿದ್ದೆಲ್ಲಿ?
– ಮುಖ್ಯಮಂತ್ರಿ ವಸುಂಧರಾ ರಾಜೇ ರವರ ಸರ್ವಾಧಿಕಾರಿ ಮನೋವೃತ್ತಿಯನ್ನು ವಿರೋಧಿಸಿ, ಹಲವಾರು ಬಿಜೆಪಿ ಮುಖಂಡರೇ ಚುನಾವಣೆಗೂ ಮುನ್ನವೇ ಬಂಡಾಯ ಎದ್ದಿದ್ದರು. ಟಿಕೆಟ್ ಸಿಗದ ಕಾರಣ 21 ಶಾಸಕರು ಮುಖ್ಯಮಂತ್ರಿ ವಿರುದ್ಧವೇ ಪ್ರಚಾರ ಕೈಗೊಂಡಿದ್ದರು. ರಾಜ್ಯದಲ್ಲಿ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆಯಿತ್ತು. ಅದನ್ನು ಕಾಂಗ್ರೆಸ್ ಸರಿಯಾಗಿಯೇ ಬಳಸಿಕೊಂಡಿತ್ತು.
Advertisement
– ಸಚಿನ್ ಪೈಲಟ್ ಕಾಂಗ್ರೆಸ್ ಯುವನಾಯಕರಾಗಿ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ರೈತರ ಸಮಸ್ಯೆಗಳನ್ನು ಪರಿಹರಿಸಲು ವಸುಂಧರಾ ರಾಜೆ ಸರ್ಕಾರ ವಿಫಲವಾಗಿದ್ದು.
Advertisement
– ವಸುಂಧರಾ ಧೋರಣೆಯಿಂದ ಬೇಸತ್ತ ಬಿಜೆಪಿಯ ರಾಷ್ಟ್ರೀಯ ಮುಖಂಡರು ಕೂಡ ಪ್ರಚಾರಕ್ಕೆ ರಾಜ್ಯದತ್ತ ಹೆಚ್ಚಾಗಿ ಬಂದಿರಲಿಲ್ಲ. ಗುರ್ಜರ ಸಮುದಾಯದ ಸಚಿನ್ ಪೈಲಟ್ ಹಾಗೂ ಮಾಲಿ ಸಮುದಾಯದ ಅಶೋಕ್ ಗೆಹ್ಲೋಟ್ ಒಟ್ಟಾಗಿದ್ದು ಕಾಂಗ್ರೆಸ್ ಗೆಲುವಿಗೆ ಸಹಕಾರಿ ಆಗಿದೆ.
– ರಾಜಸ್ಥಾನದಲ್ಲಿ ಒಂದು ಬಾರಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಮತ್ತೊಂದು ಬಾರಿ ಬಿಜೆಪಿ ಅಧಿಕಾರಕ್ಕೆ ಏರುತ್ತದೆ. ಹೀಗಾಗಿ ಈ ಬಾರಿಯೂ ಮತದಾರ ಕಾಂಗ್ರೆಸ್ ಬೆಂಬಲಿಸಿದ್ದಾನೆ.
2013ರಲ್ಲಿ ಏನಾಗಿತ್ತು?
2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 163 ಸ್ಥಾನಗಳನ್ನು ಪಡೆದುಕೊಂಡಿತ್ತು. ಕಾಂಗ್ರೆಸ್ 21 ಸ್ಥಾನ ಗೆದಿದ್ದರೆ, ಇತರೆ 16 ಸ್ಥಾನಗಳನ್ನು ಗೆದ್ದಿದ್ದರು. ರಾಜಸ್ಥಾನ ಒಟ್ಟು ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 200 ಸ್ಥಾನಗಳಿದ್ದು, ಬಹುಮತಕ್ಕೆ 100 ಸ್ಥಾನಗಳು ಬೇಕಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv