ಬೆಂಗಳೂರು: ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಅವರ ಎರಡನೇ ಪತ್ನಿ ಕೀರ್ತಿಗೌಡ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಪತ್ನಿ ನಾಗರತ್ನ ಇಲ್ಲಿವರೆಗೂ ಪತ್ತೆಯಾಗಿಲ್ಲ.
ಗಿರಿನಗರ ಪೊಲೀಸರು, ನಾಗರತ್ನ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ಇನ್ನೊಂದು ಮಾಹಿತಿ ಪ್ರಕಾರ ರಾತ್ರಿಯೇ ನಾಗರತ್ನ ಎಲ್ಲಿದ್ದಾರೆ ಅನ್ನೋ ಖಚಿತ ಮಾಹಿತಿ ಇದ್ದು, ಯಾವುದೇ ಕ್ಷಣದಲ್ಲೀ ವಶಕ್ಕೆ ಪಡೆಯುವ ಸಾಧ್ಯತೆ ಕೂಡ ಇದೆ. ಇತ್ತ ನಾಗರತ್ನ ಪರ ವಕೀಲರು ಇಂದು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದು, ಅಲ್ಲಿವರೆಗೆ ನಾಗರತ್ನರನ್ನು ಪೊಲೀಸರಿಗೆ ಸಿಗದಂತೆ ಎಚ್ಚರಿಕೆ ವಹಿಸಿದ್ದಾರೆ ಅನ್ನೋದು ಮತ್ತೊಂದು ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ನಾಪತ್ತೆಯಾಗಿದ್ದು ಯಾಕೆ?:
ನಾಗರತ್ನ ಅವರು ತನ್ನ ಮೇಲೆ ಕೀರ್ತಿ ಗೌಡ ಹಲ್ಲೆ ಮಾಡಿದ್ದಾಳೆ ಅಂತ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ವಿಜಿಯ ಮನೆಯ ಸಿಸಿಟಿವಿ ದೊರೆತಿದ್ದು, ಮೇಜರ್ ಟ್ವಿಸ್ಟ್ ಸಿಕ್ಕಿತ್ತು.
Advertisement
ವಿಡಿಯೋದಲ್ಲಿ ದುನಿಯಾ ವಿಜಿ ಅವರು ಜೈಲಿಗೆ ಸೇರಿದ ದಿನದಂದು ಮನೆಯವರೆಲ್ಲರೂ ಸೇರಿ ಕುಳಿತು ಮಾತನಾಡುತ್ತಿದ್ದ ಸಂದರ್ಭದಲ್ಲಿ ನಾಗರತ್ನ ಅವರು ತನ್ನ ಚಪ್ಪಲಿಯೊಂದಿಗೆ ಏಕಾಏಕಿ ಮನೆಗೆ ನುಗ್ಗಿ ಕೀರ್ತಿ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಕೀರ್ತಿ ಗೌಡ ಅವರು ಪೊಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Advertisement
ಸಿಸಿಟಿವಿ ಆಧರಿಸಿದ ಪೊಲೀಸರು ನಾಗರತ್ನ ಹಾಗೂ ಅವರ ಮಕ್ಕಳನ್ನು ಬಂಧಿಸಲು ಮನೆಗೆ ತೆರಳಿದ್ದರು. ಆದ್ರೆ ಅದಾಗಲೇ ನಾಗರತ್ನ ಅವರು ಬಾಗಿಲು ಹಾಕಿಕೊಂಡು ಮನೆಯೊಳಗಿದ್ದು, ಪೊಲೀಸರು ಅವರನ್ನು ಹೊರಗೆ ಬರುವಂತೆ ಮಾಡಲು ಹರಸಾಹಸ ಪಟ್ಟರು ವಿಫಲವಾಯಿತು. ಕೊನೆಗೆ ವಕೀಲರ ಮುಖಾಂತರ ಇಬ್ಬರು ಮಕ್ಕಳು ಪೊಲೀಸ್ ಠಾಣೆಗೆ ಹಾಜರಾಗಿದ್ದರು, ಆದ್ರೆ ಮಕ್ಕಳ ಭವಿಷ್ಯ ದೃಷ್ಟಿಯಿಂದ ವಿಜಿ ಅವರ ಮೇಲಿನ ಕೇಸನ್ನು ಹಿಂಪಡೆದಿದ್ದಾರೆ.
ಸದ್ಯ ನಾಗರತ್ನ ಮೇಲೆ ಹೆಚ್ಚುವರಿಯಾಗಿ ಐಪಿಸಿ ಸೆಕ್ಷನ್ 326 ಸೇರಿಸಲಾಗಿದೆ. 326 ಸೆಕ್ಷನ್ ರಕ್ತಗಾಯವಾಗುವಂತೆ ಹಲ್ಲೆ ನಡೆಸುವುದಾಗಿದೆ. ಇದು ನಾನ್ ಬೇಲಬಲ್ ಸೆಕ್ಷನ್ ಆಗಿದ್ದು, ಅಷ್ಟು ಸುಲಭವಾಗಿ ಬೇಲ್ ಸಿಗೋದಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=5y-xIKjMyBI
https://www.youtube.com/watch?v=_3zrCvoaIR4