ಗುವಾಹಟಿ: ಅಸ್ಸಾಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉದ್ಯಮಿ ರತನ್ ಟಾಟಾ, ಅತ್ಯಾಧುನಿಕ 7 ಕ್ಯಾನ್ಸರ್ ಆಸ್ಪತ್ರೆಗಳನ್ನು ಉದ್ಫಾಟಿಸಿದ್ದಾರೆ.
Advertisement
ಆಸ್ಪತ್ರೆ ಉದ್ಫಾಟನೆಯ ಬಳಿಕ ಮಾತನಾಡಿದ ಮೋದಿ, ಇದೀಗ ಅಸ್ಸಾಂನಲ್ಲಿ 7 ಆಸ್ಪತ್ರೆಗಳನ್ನು ಉದ್ಫಾಟಿಸಿದ್ದೇವೆ. ಇನ್ನೂ ಕೆಲ ತಿಂಗಳಲ್ಲಿ ಮತ್ತೆ 3 ನೂತನ ಆಸ್ಪತ್ರೆಗಳು ನಿಮ್ಮ ಸೇವೆಗೆ ಸಿದ್ಧಗೊಳ್ಳಲಿದೆ. ಈ ಹಿಂದೆ ಒಂದು ಆಸ್ಪತ್ರೆ ತೆರೆಯಲು ಸಾಕಷ್ಟು ವರ್ಷಗಳು ಆಗುತ್ತಿತ್ತು. ಆದರೆ ಇದೀಗ ಬದಲಾವಣೆಯಾಗಿದೆ. ಸರ್ಕಾರ ಜನರ ಆರೋಗ್ಯದ ಕಡೆಗೆ ಗಮನ ಹರಿಸುತ್ತಿದೆ ಎಂದರು. ಇದನ್ನೂ ಓದಿ: ಜೂನ್ ಆರಂಭದಲ್ಲಿ 5ಜಿ ಸ್ಪೆಕ್ಟ್ರಂ ಹರಾಜು: ಅಶ್ವಿನಿ ವೈಷ್ಣವ್
Advertisement
Advertisement
ದೇಶದಲ್ಲಿ ಕ್ಯಾನರ್ ಟೆಸ್ಟಿಂಗ್ ಆಸ್ಪತ್ರೆಗಳನ್ನು ಇನ್ನಷ್ಟು ಸ್ಥಾಪಿಸಲು ಸರ್ಕಾರ ಬದ್ಧವಾಗಿದೆ. ದೇಶದ ಜನರ ಆರೋಗ್ಯದ ಬಗ್ಗೆ ನಾನು ದೇವರಲ್ಲಿ ಬೇಡಿಕೊಳ್ಳುತ್ತೇನೆ. ನಮ್ಮ ಸರ್ಕಾರ ಕೂಡ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸುತ್ತಿದ್ದು, ಯೋಗ, ಫಿಟ್ನೆಸ್ ಮತ್ತು ಸ್ವಚ್ಛತೆಯ ಬಗ್ಗೆ ಮಹತ್ವ ನೀಡುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸುದೀಪ್ Vs ದೇವಗನ್ – ಈಗ ಭಾರತದ ತುತ್ತ ತುದಿಯಿಂದ ಬಂತು ಪ್ರತಿಕ್ರಿಯೆ
Advertisement
ರತನ್ ಟಾಟಾ ಮಾತನಾಡಿ, ನನ್ನ ಕೊನೆಯ ವರ್ಷಗಳನ್ನು ಆರೋಗ್ಯಕ್ಕಾಗಿ ಮೀಸಲಿಡುತ್ತಿದ್ದೇನೆ. ಕೇಂದ್ರ ಸರ್ಕಾರದ ಈ ಕೆಲಸ ಕಾರ್ಯಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಅಸ್ಸಾ ಸಿಎಂ ಹಿಮಂತ ಬಿಸ್ವಾ ಶರ್ಮಾ ಮಾತನಾಡಿ, ಟಾಟಾ ಗ್ರೂಪ್ಸ್ ಮತ್ತು ಸರ್ಕಾರದ ನೆರವಿನಿಂದ ರಾಜ್ಯದಲ್ಲಿ ಏಷ್ಯಾದ ದೊಡ್ಡ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆ ಉದ್ಫಾಟನೆಗೊಂಡಿದೆ. ನಾನು ಕೆಂದ್ರ ಸರ್ಕಾರ ಮತ್ತು ರತನ್ ಟಾಟಾ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ನುಡಿದರು.
Cancer hospitals in Assam will augment healthcare capacities in Northeast as well as South Asia. https://t.co/7STceLzUAO
— Narendra Modi (@narendramodi) April 28, 2022
ಆಸ್ಸಾಂನಲ್ಲಿ ಸ್ಥಾಪಿಸಲಾಗಿರುವ ಕ್ಯಾನ್ಸರ್ ಆಸ್ಪತ್ರೆ ಸರ್ಕಾರ ಮತ್ತು ಟಾಟಾ ಗ್ರೂಪ್ಸ್ ಸಹಭಾಗಿತ್ವದಲ್ಲಿ ಆರಂಭವಾಗಿದೆ. ಈಗಾಗಲೇ ದೇಶದಾದ್ಯಂತ 17 ಕ್ಯಾನ್ಸರ್ ಕೇರ್ ಆಸ್ಪತ್ರೆಗಳು ಕಾರ್ಯಚರಿಸುತ್ತಿದೆ. ಇದೀಗ ಅಸ್ಸಾಂನಲ್ಲಿ 7 ಆಸ್ಪತ್ರೆಗಳು ಉದ್ಫಾಟನೆಗೊಂಡಿದ್ದು, ಇನ್ನೂ 7 ಆಸ್ಪತ್ರೆಗಳ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಧುಬ್ರಿ, ನಲ್ಬರಿ, ಗೋಲ್ಪಾರಾ, ನಾಗಾಂವ್, ಶಿವಸಾಗರ್, ತಿನ್ಸುಕಿಯಾ ಮತ್ತು ಗೋಲಾಘಾಟ್‍ನಲ್ಲಿ ಕ್ಯಾನ್ಸರ್ ಕೇರ್ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿ ಆರಂಭಿಸಲಾಗಿದೆ.