CinemaLatestLeading NewsMain PostNational

ಸುದೀಪ್ Vs ದೇವಗನ್ – ಈಗ ಭಾರತದ ತುತ್ತ ತುದಿಯಿಂದ ಬಂತು ಪ್ರತಿಕ್ರಿಯೆ

ಶ್ರೀನಗರ: ಹಿಂದಿ ರಾಷ್ಟ್ರಭಾಷೆಯನ್ನಾಗಿ ಬಳಸುವುದರ ಕುರಿತು ಬಾಲಿವುಡ್ ನಟ ಅಜಯ್ ದೇವಗನ್ ಹಾಗೂ ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಅವರ ನಡುವೆ ಟ್ವೀಟ್ ವಾರ್ ನಡೆಯುತ್ತಿರುವ ಬೆನ್ನಲ್ಲೇ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಹಾಗೂ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಹ ಪ್ರತಿಕ್ರಿಯಿಸಿದ್ದು, ಸುದೀಪ್ ಹೇಳಿಕೆಯನ್ನು ಬೆಂಬಲಿಸಿದ್ದಾರೆ.

FotoJet

ಈ ಕುರಿತು ಮಾತನಾಡಿರುವ ಅವರು, ಭಾಷೆಗಳಿಂದಲೇ ನಮ್ಮ ರಾಜ್ಯಗಳು ರೂಪುಗೊಂಡಿದ್ದು ಹಾಗಾಗಿ ಪ್ರಾದೇಶಿಕ ಭಾಷೆಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಸುದೀಪ್ ಹೇಳಿಕೆ ಸರಿಯಾಗಿದೆ, ಅದನ್ನು ಎಲ್ಲರೂ ಗೌರವಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಐದೈದು ಸರಣಿಯಲ್ಲಿ ಅವತಾರ್ : 13 ವರ್ಷಗಳ ಬಳಿಕ ತೆರೆಗೆ ಬಂದ ಬಾಕ್ಸ್ ಆಫೀಸ್ ಕಿಂಗ್

ರಾಷ್ಟ್ರಭಾಷೆಯನ್ನು ಹೊಂದಲು ಭಾರತ ವೈವಿಧ್ಯಮಯ ದೇಶವಾಗಿದೆ. ಭಾರತದ ಪರಿಕಲ್ಪನೆಯು ಪ್ರತಿಯೊಬ್ಬರಿಗೂ ಸ್ಥಳಾವಕಾಶ ನೀಡುತ್ತದೆ. ಭಾರತೀಯ ಕರೆನ್ಸಿ ನೋಟು ಎಲ್ಲ ಭಾಷೆಗಳಿಗೆ ಜಾಗ ನೀಡಿರುವುದು ನಾವು ಕೇವಲ ಒಂದು ಭಾಷೆ, ಸಂಸ್ಕೃತಿ ಮತ್ತು ಧರ್ಮಕ್ಕೆ ಸೀಮಿತವಲ್ಲ ಎಂಬುದು ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.

FotoJet

ಇದೇ ವೇಳೆ ಮಸೀದಿಗಳಲ್ಲಿ ಲೌಡ್‌ಸ್ಪೀಕರ್ ನಿಷೇಧ ಕುರಿತು ಮಾತನಾಡಿರುವ ಅವರು, ರಾಜಕೀಯ ಲಾಭಕ್ಕಾಗಿ ಮತ್ತು ಧರ್ಮದ ವಿರುದ್ಧ ದ್ವೇಷ ಹರಡುವ ಉದ್ದೇಶದಿಂದ ಈ ದೇಶದಲ್ಲಿ ಮುಸ್ಲಿಮರನ್ನು ಮಾತ್ರ ಗುರಿ ಮಾಡಲಾಗುತ್ತಿದೆ. ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಬಳಸಬೇಡಿ, ಹಲಾಲ್ ಮಾಂಸ ಮಾರಾಟ ಮಾಡಬೇಡಿ, ಹಿಜಬ್ ಧರಿಸಬೇಡಿ ಎಂದು ವಿವಾದ ಎಬ್ಬಿಸಲಾಗುತ್ತಿದೆ. ಭಾರತದಲ್ಲಿ ಕೇವಲ ಮುಸ್ಲಿಮರನ್ನೇ ಏಕೆ ಟಾರ್ಗೆಟ್ ಮಾಡಲಾಗುತ್ತಿದೆ? ಎಂದು ಪ್ರಶ್ನಿಸಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಇದನ್ನೂ ಓದಿ: ಅಜಯ್ ದೇವಗನ್ ವಿರುದ್ಧವೇ ನಿಂತ ಬಾಲಿವುಡ್ ಇಬ್ಬರೂ ಸ್ಟಾರ್ ನಟರು

ಬಾರಾಮುಲ್ಲಾದ ಶಾಲೆಯೊಂದರಲ್ಲಿ ಹಿಜಾಬ್ ವಿವಾದ ತಲೆಎತ್ತಿದೆ. ಈಗ ಈ ಜನರು (ಬಿಜೆಪಿ) ಕರ್ನಾಟಕದಂತೆ ಜಮ್ಮು-ಕಾಶ್ಮೀರದಲ್ಲಿಯೂ ರಾಜಕೀಯ ಲಾಭಕ್ಕಾಗಿ ಸಮಸ್ಯೆಯನ್ನು ಹುಟ್ಟುಹಾಕುತ್ತಿರುವುದಾಗಿ ಒಮರ್ ಅಬ್ದುಲ್ಲಾ ಆರೋಪಿಸಿದ್ದಾರೆ.

ಹಿಜಬ್ ಇಸ್ಲಾಂನ ಮೂಲಭೂತ ಹಕ್ಕು. ಇನ್ನೊಬ್ಬರ ಧಾರ್ಮಿಕ ವಿಚಾರದಲ್ಲಿ ಯಾರೂ ಕೂಡಾ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಒಂದು ವೇಳೆ ಇದು ದೇಶದಲ್ಲಿ ಕಾರ್ಯಗತಗೊಂಡಲ್ಲಿ, ಆಗ ನಮ್ಮ ನಿರ್ಧಾರವೂ ಕೂಡ ವಿಭಿನ್ನವಾಗಿರಲಿದೆ. ರಂಜಾನ್ ತಿಂಗಳಲ್ಲಿ ಅನಾವಶ್ಯಕವಾಗಿ ಪವರ್ ಕಟ್ ಮಾಡುವ ಮೂಲಕ ಉದ್ದೇಶಪೂರ್ವಕವಾಗಿ ಕಾಶ್ಮೀರದ ಜನರನ್ನು ಕೆರಳಿಸುತ್ತಿರುವುದಾಗಿ ಒಮರ್ ದೂರಿದ್ದಾರೆ. ಇದನ್ನೂ ಓದಿ: ರಾಷ್ಟ್ರ ಭಾಷೆ ಹಿಂದಿ: ಅಜಯ್ ದೇವಗನ್ ಪ್ರಶ್ನೆಗೆ ಕಿಚ್ಚ ಸುದೀಪ್ ಖಡಕ್ ಉತ್ತರ

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮುಸ್ಲಿಮರ ಮನೆಗಳನ್ನು ಬುಲ್ಡೋಜರ್ ನಿಂದ ತೆರವುಗೊಳಿಸುತ್ತಿರುವ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತವು ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಆದರೆ ಪ್ರಜಾಪ್ರಭುತ್ವವು ಕೇವಲ ಪದಗಳಲ್ಲಿ ಇರಬಾರದು ಅದು ಕಾರ್ಯದಲ್ಲಿಯೂ ಇರಬೇಕು. ಅಸಹಿಷ್ಣುತೆಯ ವಾತಾವರಣವನ್ನು ನಿಯಂತ್ರಿಸುವ ಈ ಕ್ರಮವು ಈ ದೇಶಕ್ಕೆ ಒಳ್ಳೆಯದಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Back to top button