LatestMain PostNationalTechTelecom

ಜೂನ್‌ ಆರಂಭದಲ್ಲಿ 5ಜಿ ಸ್ಪೆಕ್ಟ್ರಂ ಹರಾಜು: ಅಶ್ವಿನಿ ವೈಷ್ಣವ್‌

ನವದೆಹಲಿ: ಜೂನ್ ಆರಂಭದಲ್ಲಿ ಸರ್ಕಾರವು 5ಜಿ ಸ್ಪೆಕ್ಟ್ರಂ (ತರಂಗಾಂತರ) ಹರಾಜನ್ನು ನಡೆಸುವ ಸಾಧ್ಯತೆಯಿದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಹೇಳಿದ್ದಾರೆ.

ಟೆಲಿಕಾಂ ಇಲಾಖೆ ನಿರೀಕ್ಷಿತ ಟೈಮ್‌ಲೈನ್‌ಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಸ್ಪೆಕ್ಟ್ರಂ ಬೆಲೆಯ ಬಗ್ಗೆ ಉದ್ಯಮದ ಕಳವಳಗಳನ್ನು ಪರಿಹರಿಸಲು ಪ್ರಕ್ರಿಯೆ ನಡೆಯುತ್ತಿದೆ ಎಂದು ಸಚಿವರು ಹೇಳಿದರು. ಇದನ್ನೂ ಓದಿ: ಕೆಲವರ ಹಿತಾಸಕ್ತಿಗೆ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ ವಿಳಂಬ – ಕೇಂದ್ರಕ್ಕೆ ಜಿಯೋ ಪತ್ರ

ಭಾರತೀಯ ದೂರ ಸಂರ್ಪಕ ಪ್ರಾಧಿಕಾರ(ಟ್ರಾಯ್‌) ಮೆಗಾ ಹರಾಜು ಯೋಜನೆಯನ್ನು ರೂಪಿಸಿದ್ದು, ಎಲ್ಲ ಬ್ಯಾಂಡ್‌ಗಳ ಸ್ಪೆಕ್ಟ್ರಂಗಳ ಮೂಲ ಬೆಲೆ 7.5 ಲಕ್ಷ ಕೋಟಿ ರೂ. ನಿಗದಿ ಪಡಿಸಿದೆ. ಇದು 30 ವರ್ಷ ಅವಧಿಗೆ ಇರಲಿದೆ ಎಂದು ತಿಳಿಸಿದರು.

ಜಾಗತಿಕ ಮಾನದಂಡಗಳಿಗಿಂತ ಸ್ಪೆಕ್ಟ್ರಂ ಬೆಲೆ ದುಬಾರಿಯಾಗಿದೆ ಎಂದು ಟೆಲಿಕಾಂ ಕಂಪನಿಗಳು ಹೇಳಿದ ಹಿನ್ನೆಲೆಯಲ್ಲಿ ಟ್ರಾಯ್‌ ಸ್ಪೆಕ್ಟ್ರಂ ಬೆಲೆಯನ್ನು ಕಳೆದ ಬೆಲೆಗೆ ಹೋಲಿಸಿದರೆ ಶೇ.39 ರಷ್ಟು ಕಡಿಮೆ ಮಾಡಿದೆ.

Leave a Reply

Your email address will not be published.

Back to top button