ಗುವಾಹಟಿ: ಅಸ್ಸಾಂನಲ್ಲಿ (Assam) ತರಕಾರಿ ಬೆಲೆ ಹೆಚ್ಚಳಕ್ಕೆ ಬಾಂಗ್ಲಾ ಮೂಲದ ಮಿಯಾ ಮುಸ್ಲಿಮರೇ (Miya Muslims) ಕಾರಣ ಎಂದು ಸಿಎಂ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಆರೋಪಿಸಿದ್ದಾರೆ.
ಗುವಾಹಟಿಯಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಲು (Vegetables Price Hike) ಕಾರಣವೇನು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಈಗ ತರಕಾರಿ ಬೆಲೆ ಹೆಚ್ಚಿಸಿದವರು ಯಾರು? ಮಿಯಾ ವ್ಯಾಪಾರಿಗಳೇ ಹೆಚ್ಚಿನ ದರಕ್ಕೆ ತರಕಾರಿ ಮಾರುತ್ತಿದ್ದಾರೆ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ದೆಹಲಿ ಪ್ರವಾಹಕ್ಕೆ ಬಿಜೆಪಿಯೇ ಕಾರಣ – AAP ಆರೋಪ
Advertisement
देश में एक ऐसी मंडिली है जिसके घर अगर भैंस दूध ना दे या मुर्ग़ी अण्डा ना दे तो उसका इल्ज़ाम भी मियाँ जी पर ही लगा देंगे। शायद अपने “निजी” नाकामियों का ठीकरा भी मियाँ भाई के सर ही फोड़ते होंगे।आज कल मोदी जी की विदेशी मुसलमानों से गहरी यारी चल रही है, उन्हीं से कुछ टमाटर, पालक, आलू… https://t.co/1MtjCnrmDT
— Asaduddin Owaisi (@asadowaisi) July 14, 2023
Advertisement
ಗುವಾಹಟಿಯಲ್ಲಿ ತರಕಾರಿ ವ್ಯಾಪಾರಿಗಳೆಲ್ಲಾ ಮಿಯಾ ಮುಸ್ಲಿಮರೇ ಆಗಿದ್ದಾರೆ. ಇಂದು ಹೆಚ್ಚಿನ ತರಕಾರಿ ಮಾರಾಟಗಾರರು, ರಿಕ್ಷಾ ಚಾಲಕರು, ಬಸ್ ಚಾಲಕರು, ಓಲಾ-ಉಬರ್ ಚಾಲಕರು ಮಿಯಾ ಮುಸ್ಲಿಮರು. ಸ್ಥಳೀಯ ಅಸ್ಸಾಮಿ ಯುವಕರು ಅವರೊಂದಿಗೆ ಸ್ಪರ್ಧಿಸಿ ಈ ಉದ್ಯೋಗಗಳನ್ನು ಕಸಿದುಕೊಳ್ಳಬೇಕು. ಅವರಿಂದಲೇ ತರಕಾರಿ ಬೆಲೆ ಹೆಚ್ಚಳವಾಗಿದೆ ಅಂತಾ ಆಪಾದಿಸಿದ್ದಾರೆ.
Advertisement
ಮಿಯಾ ವ್ಯಾಪಾರಿಗಳು ತರಕಾರಿಗಳಿಗೆ ಹೆಚ್ಚಿನ ಬೆಲೆಯನ್ನು ವಿಧಿಸುತ್ತಿದ್ದಾರೆ. ಆದರೆ ಹಳ್ಳಿಗಳಲ್ಲಿ ತರಕಾರಿಗಳ ಬೆಲೆ ಕಡಿಮೆಯಾಗಿದೆ. ಒಂದು ವೇಳೆ ಅಸ್ಸಾಂ ಜನ ಇಂದು ತರಕಾರಿ ಮಾರಾಟ ಮಾಡುತ್ತಿದ್ದರೆ ಎಂದಿಗೂ ಹೆಚ್ಚು ಬೆಲೆ ವಿಧಿಸುತ್ತಿರಲಿಲ್ಲ ಎಂದರು.
Advertisement
ಓವೈಸಿ ಕಿಡಿ:
ಎಮ್ಮೆ ಹಾಲು ಕೊಡದಿದ್ದರೆ, ಕೋಳಿ ಮೊಟ್ಟೆ ಇಡದಿದ್ದರೆ ಮಿಯಾ ಮುಸ್ಲಿಮರನ್ನು ದೂಷಿಸುವ ಜನರ ಗುಂಪು ಈ ದೇಶದಲ್ಲಿದೆ. ಅವರು ತಮ್ಮ ಎಲ್ಲಾ ವೈಯಕ್ತಿಕ ವೈಫಲ್ಯಗಳಿಗೆ ಮಿಯಾ ಮುಸ್ಲಿಮರನ್ನು ದೂಷಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಮೋದಿ ಅವರು ವಿದೇಶಿ ಮುಸ್ಲಿಮರೊಂದಿಗೆ ಆಳವಾದ ಸ್ನೇಹವನ್ನು ಹೊಂದಿದ್ದಾರೆ. ಅವರಿಂದ ಸ್ವಲ್ಪ ಟೊಮೆಟೋ, ಪಾಲಕ್ ಮತ್ತು ಆಲೂಗಡ್ಡೆಗಳನ್ನು ಪಡೆದುಕೊಳ್ಳಿ ಎಂದ ಎಐಎಂಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (AIMIM chief Asauddin Owaisi) ಕಿಡಿಕಾರಿದ್ದಾರೆ.
Web Stories