ದುಬೈ: ಆಲ್‌ರೌಂಡರ್ ರವೀಂದ್ರ ಜಡೇಜಾ ಜವಾಬ್ದಾರಿಯುತ ಬ್ಯಾಟಿಂಗ್ ಹಾಗೂ ಪಾಂಡ್ಯ ಆಲ್ ರೌಂಡರ್ ಆಟದಿಂದ ಟೀಂ ಇಂಡಿಯಾ ಪಾಕಿಸ್ತಾನದ ವಿರುದ್ಧ ಗೆದ್ದು ಬೀಗಿದೆ.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲೇ ಭಾರತದ ಬೌಲರ್‌ಗಳಿಂದ ಒತ್ತಡಕ್ಕೆ ಸಿಲುಕಿದ ಪಾಕಿಸ್ತಾನ 19.5 ಓವರ್‌ಗಳಲ್ಲಿ 10 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು. ಈ ಮೂಲಕ ಭಾರತದ ಗೆಲುವಿಗೆ 148 ರನ್‌ಗಳ ಗುರಿ ನೀಡಿತು. ಅಲ್ಪಮೊತ್ತದ ಗುರಿ ಬೆನ್ನತ್ತಿದ ಭಾರತ ನಿಗದಿತ 19.4 ಓವರ್‌ಗಳಲ್ಲಿ 148 ರನ್‌ಗಳನ್ನು ಪೇರಿಸುವ ಮೂಲಕ ಎದುರಾಳಿ ಪಾಕಿಸ್ತಾನ ಆಟಗಾರರಿಗೆ ಮಣ್ಣುಮುಕ್ಕಿಸಿತು.
Advertisement
ಟಾಸ್ ಗೆದ್ದು ನಂತರ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ಅರಂಭದಲ್ಲೇ ಆಘಾತ ಎದುರಾಗಿತ್ತು. ಮೊದಲ ಎರಡು ಎಸೆತಗಳಲ್ಲೇ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಡಕೌಟ್ ಆದರು. 2ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದು ಅಬ್ಬರಿಸಿದ ವಿರಾಟ್ ಕೊಹ್ಲಿ ಪಾಕ್ ಬೌಲರ್‌ಗಳನ್ನು ಬೆಂಡೆತ್ತಿದರು.
Advertisement
Advertisement
ಉತ್ತಮ ಫಾರ್ಮ್‌ನಲ್ಲಿದ್ದ ವಿರಾಟ್ ಕೊಹ್ಲಿ ಪಾಕ್ ಬೌಲರ್‌ಗಳ ಬೆವರಿಳಿಸಿದರು. ಕೊಹ್ಲಿಗೆ ಜೊತೆಯಾಗಿ ಸಾಥ್ ನೀಡುತ್ತಿದ್ದ ನಾಯಕ ರೋಹಿತ್ ಶರ್ಮಾ 18 ಎಸೆತಗಳಲ್ಲಿ 1 ಸಿಕ್ಸರ್‌ನೊಂದಿಗೆ 12 ರನ್ ಗಳಿಸಿದರು. ಇದೇ ವೇಳೆ ತಮ್ಮ 18ನೇ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಬರದಲ್ಲಿ ಬೌಂಡರಿ ಕ್ಯಾಚ್ ನೀಡಿ ಪೆವಿಲಿಯನ್‌ಗೆ ಮರಳಿದರು. ನಂತರವೂ ತಮ್ಮ ದಾಳಿ ಮುಂದುವರಿಸಿದ ಕೊಹ್ಲಿ 34 ಎಸೆತಗಳಲ್ಲಿ 35 ರನ್ ( 1 ಸಿಕ್ಸರ್, 3 ಬೌಂಡರಿ) ಸಿಡಿಸಿ, ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ಭರವಸೆಯ ಆಟಗಾರ ಸೂರ್ಯಕುಮಾರ್ ಯಾದವ್ 18 ಎಸೆತಗಳಲ್ಲಿ 18 ರನ್‌ಗಳಿಸಿ ಔಟಾದರು.
Advertisement
ನಂತರ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ಉತ್ತಮ ಜೊತೆಯಾಟವಾಡಿದರು. ಇಬ್ಬರ ಜೊತೆಯಾಟದಿಂದ ಭಾರತ 28 ಎಸೆತಗಳಲ್ಲಿ 52 ರನ್ ಗಳಿಸಿತು. ಜವಾಬ್ದಾರಿಯುತ ಆಟವಾಡಿದ ಜಡೇಜಾ 29 ಎಸೆತಗಳಲ್ಲಿ 35 ರನ್‌ಗಳಿಸಿದರು. ಕೊನೆಯ ಓವರ್ ವರೆಗೂ ಟೀಂ ಇಂಡಿಯಾ ಗೆಲುವಿಗಾಗಿ ಸೆಣಸಾಡಿದರು. ಕೊನೆಯ 6 ಎಸೆಗಳಲ್ಲಿ 7 ರನ್‌ಗಳಿಸುವುದರಲ್ಲಿದ್ದ ಟೀಂ ಇಂಡಿಯಾಕ್ಕೆ ಸಿಕ್ಸರ್ ಸಿಡಿಸುವ ಬರದಲ್ಲಿ ಔಟಾದರು. ಜಡೇಜಾ ಅವರಿಗೆ ಜೊತೆಯಾಗಿ ನಿಂತ ಹಾರ್ದಿಕ್ ಪಾಂಡ್ಯ ಕೇವಲ 17 ಎಸೆತಗಳಲ್ಲಿ 33 ರನ್ ಸಿಡಿಸಿದರು. ಕೊನೆಯಲ್ಲಿ ವಿನ್ನಿಂಗ್ ಶಾಟ್ ಬಾರಿಸುವ ಮೂಲಕ ಗೆಲುವು ತಂದುಕೊಟ್ಟರು.
ಶತಕ ಪೂರೈಸಿದ ಕೊಹ್ಲಿ ಸಾಧನೆ: ಇಂದು ತಮ್ಮ ಟಿ20 ಅಂತಾರಾಷ್ಟ್ರೀಯ ಮಾದರಿ ಕ್ರಿಕೆಟ್‌ನಲ್ಲಿ 100ನೇ ಪಂದ್ಯ ಪೂರೈಸಿದ ಕೊಹ್ಲಿ ಏಕದಿನ, ಟೆಸ್ಟ್ ಹಾಗೂ ಟಿ 20 ಪಂದ್ಯಗಳಲ್ಲಿ ನೂರು ಪಂದ್ಯಗಳನ್ನು ಪೂರೈಸಿದ ಮೊದಲ ಭಾರತೀಯ ಎಂದು ಖ್ಯಾತಿ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಕೊಹ್ಲಿಯ ಈ ಸಾಧನೆಗೂ ಮುನ್ನವೇ ವಿಶ್ ಮಾಡಿದ ದೋಸ್ತಿ ABD
ಪಾಂಡ್ಯ ಪರಾಕ್ರಮ, ಭುವಿ ಮ್ಯಾಜಿಕ್: ಪಾಕ್ ಬ್ಯಾಟರ್‌ಗಳ ವಿರುದ್ಧ ಮಾರಕ ಬೌಲಿಂಗ್ ದಾಳಿ ನಡೆಸಿದ ಹಾರ್ದಿಕ್ ಪಾಂಡ್ಯ ಹಾಗೂ ಭುವನೇಶ್ವರ್ ಕುಮಾರ್ ಪ್ರಮುಖ ವಿಕೆಟ್‌ಗಳನ್ನ ಉರುಳಿಸಿ ಟೀಂ ಇಂಡಿಯಾ ಗೆಲುವಿಕೆ ಕಾರಣರಾದರು. 4 ಓವರ್‌ಗಳಲ್ಲಿ 26 ರನ್ ನೀಡಿದ ಭುವನೇಶ್ವರ್ ಕುಮಾರ್ 4 ವಿಕೆಟ್‌ಗಳನ್ನು ಕಬಳಿಸಿದರೆ, 4 ಓವರ್‌ಗಳಲ್ಲಿ 25 ರನ್ ನೀಡಿದ ಪಾಂಡ್ಯ 3 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಅರ್ಶ್‌ದೀಪ್ ಸಿಂಗ್ 2, ಅವೇಶ್ ಖಾನ್ 1 ವಿಕೆಟ್ ಕಬಳಿಸಿದರು.
ಟಾಸ್ ಸೋತು ಮೊದಲು ಕ್ರೀಸ್‌ಗಿಳಿದ ಪಾಕ್ ತಂಡಕ್ಕೇ ಆರಂಭದಲ್ಲಿ ಆಘಾತ ಎದುರಾಯಿತು. ಟೀಂ ಇಂಡಿಯಾ ಬೌಲರ್‌ಗಳ ಮಾರಕ ದಾಳಿಗೆ ತುತ್ತಾಗಿ 15 ರನ್ ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಭುನೇಶ್ವರ್ ಅವರ 3ನೇ ಓವರ್‌ನಲ್ಲೇ ಆರಂಭಿಕ ಬ್ಯಾಟರ್ ಬಾಬರ್ ಆಜಂ 10 ರನ್ ಗಳಿಸಿ ಪೆವಿಲಿಯನ್ ಸೇರಿದರು. ಈ ವೇಳೆ ಮತ್ತೊಬ್ಬ ಆರಂಭಿಕನಾಗಿದ್ದ ಮೊಹಮ್ಮದ್ ರಿಝ್ವಾನ್ ಸ್ಥಿರವಾಗಿ ನಿಂತರು. 42 ಎಸೆತಗಳನ್ನು ಎದುರಿದ ರಿಝ್ವಾನ್ 4 ಬೌಂಡರಿ, 1 ಸಿಕ್ಸರ್ ಸಿಡಿಸುವ ಮೂಲಕ 43 ರನ್‌ಗಳಿಸಿದರು. ಇದನ್ನೂ ಓದಿ: ಇಂಡಿಯಾ, ಪಾಕ್ ಹೈವೋಲ್ಟೇಜ್ ಕ್ರಿಕೆಟ್- ಭಾರತ ಗೆಲುವಿಗೆ ಮುಸ್ಲಿಮರಿಂದ ವಿಶೇಷ ಪೂಜೆ
ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಬಂದ ಇಫ್ತಿಕರ್ ಅಹಮದ್ ರಿಝ್ವಾನ್‌ಗೆ ಜೊತೆಯಾಗಿ ಉತ್ತಮ ಸಾಥ್ ನೀಡಿದರು. ಇಫ್ತಿಕರ್ 22 ಎಸೆತಗಳಲ್ಲಿ 28 ರನ್ (2 ಬೌಂಡರಿ, 1 ಸಿಕ್ಸರ್) ಸಿಡಿಸಿದರು. ಇವರಿಬ್ಬರ ಜವಾಬ್ದಾರಿಯುತ ಆಟದಿಂದ ಪಾಕಿಸ್ತಾನ ತಂಡ 140 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಆಟಗಾರರು ಸ್ಥಿರವಾಗಿ ನಿಲ್ಲದೇ ಇದ್ದುದರಿಂದ ಪಾಕ್ ಭಾರತದ ಎದುರು ಮಂಡಿಯೂರಿತು. ಇದನ್ನೂ ಓದಿ: AsiaCup 2022: ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಲಂಕಾ – ಆಫ್ಘನ್‌ಗೆ 8 ವಿಕೆಟ್‌ಗಳ ಸುಲಭ ಜಯ
ನಂತರದ ಕ್ರಮಾಂಕದಲ್ಲಿ ಬಂದ ಫಖ್ರ್ ಜಮಾನ್ 10 ರನ್, ಶಾದಾಬ್ ಖಾನ್ 10, ಆಸಿಫ್ ಅಲಿ 9, ಮೊಹಮ್ಮದ್ ನವಾಜ್ 1, ನಸೀಂ ಶಾ 0, ಶಾನವಾಜ್ ದಹಾನಿ 16, ಹಾರಿಸ್ ರೌಫ್ 13 ರನ್‌ಗಳಿಸಿ ಅಜೇಯರಾಗುಳಿದರು.