ಸುಳಿವು ಕೊಟ್ಟು ಆ ಪದ ನಾನು ಹೇಳಲ್ಲ – ನಾಚಿ ನೀರಾದ ದ್ರಾವಿಡ್, ಬಿದ್ದುಬಿದ್ದು ನಕ್ಕ ಪತ್ರಕರ್ತರು

Public TV
1 Min Read
RAHUL DRAVID 1

ದುಬೈ: ಟೀಂ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಶಿಸ್ತಿನ ಸಿಪಾಯಿ, ಅವರು ಆಟಗಾರರಾಗಿದ್ದಾಗ ಇದ್ದಂತಹ ಬದ್ಧತೆ, ಶಿಸ್ತು ಪ್ರಸ್ತುತ ಕೋಚ್ ಆಗಿ ಕಾರ್ಯನಿರ್ವಹಿಸುವಾಗಲು ಮುಂದುವರಿಸುತ್ತಿದ್ದಾರೆ. ಜೊತೆಗೆ ಆಟಗಾರರಿಗೂ ಈ ಪಾಠ ಮುಂದುವರಿಸಿದ್ದಾರೆ. ಈ ಎಲ್ಲದರ ನಡುವೆ ದ್ರಾವಿಡ್ ಇಂದು ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೂ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಹಾಸ್ಯ ಚಟಾಕಿಯೊಂದನ್ನು ಹಾರಿಸಿ ಆ ಒಂದು ಪದವನ್ನು ನಾನು ಬಳಕೆ ಮಾಡುವುದಿಲ್ಲವೆಂದು ಪತ್ರಕರ್ತರಿಗೆ ಕುತೂಹಲ ಮೂಡಿಸಿದ್ದಾರೆ.

RAHUL DRAVID

ಹೌದು ಸದಾ ಗಂಭೀರ ವ್ಯಕ್ತಿತ್ವದ ದ್ರಾವಿಡ್ ಜೊತೆ ಭಾರತ ಹಾಗೂ ಪಾಕಿಸ್ತಾನ ತಂಡಗಳ ಬೌಲಿಂಗ್ ಕುರಿತಾಗಿ ಪತ್ರಕರ್ತರು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ದ್ರಾವಿಡ್ ಪಾಕಿಸ್ತಾನ ತಂಡದ ಬೌಲಿಂಗ್ ಉತ್ತಮವಾಗಿದೆ. ಭಾರತ ತಂಡ ಕೂಡ ಕಮ್ಮಿ ಏನಿಲ್ಲ. ಎರಡು ತಂಡಗಳು ಕೂಡ ಬಲಿಷ್ಠ ಬೌಲಿಂಗ್ ಶಕ್ತಿಯನ್ನು ಹೊಂದಿದೆ. ಇದನ್ನು ಗಮನಿಸಿದಾಗ ನನಗೆ ಒಂದು ಪದ ನೆನಪಿಗೆ ಬರುತ್ತದೆ ಎಂದು ಆ ಪದ ಬಳಕೆ ಮಾಡಲಾಗದೆ ನಗಲಾರಂಭಿಸಿದರು. ಇದನ್ನೂ ಓದಿ: ಜಡೇಜಾ ಅನುಪಸ್ಥಿತಿಯಲ್ಲಿ ಪಂತ್, ಹೂಡಾ, ಅಕ್ಷರ್ ಪಟೇಲ್ ನಡುವೆ ಪ್ಲೇಯಿಂಗ್ 11 ಪೈಪೋಟಿ

ಇದನ್ನು ಗಮನಿಸಿದ ಪತ್ರಕರ್ತರು ಯಾವ ಪದ ಎಂದು ಮರು ಪ್ರಶ್ನೆ ಹಾಕಿದರು. ಈ ವೇಳೆ ದ್ರಾವಿಡ್ ಆ ಪದ ನನ್ನ ಬಾಯಲ್ಲಿ ಬರುತ್ತಿದೆ. ಆದರೆ ಇಲ್ಲಿ ಅದನ್ನು ಉಚ್ಚರಿಸಲು ನಾನು ಬಯಸುತ್ತಿಲ್ಲವೆಂದರು. ಆದರೂ ಬಿಡದ ಪರ್ತಕರ್ತರು ಏನದು ಎಂದರು ಈ ವೇಳೆ ಆ ಪದ ಎಸ್ (ಸೆಕ್ಸಿ) ಪದದಿಂದ ಆರಂಭವಾಗುತ್ತದೆ ಎಂದರು. ಇದನ್ನು ಅರ್ಥಮಾಡಿಕೊಂಡ ಪರ್ತಕರ್ತರು ಒಂದು ಕ್ಷಣ ನಗಲಾರಂಭಿಸಿದರು. ಬಳಿಕ ಸೆಕ್ಸಿ ಪದ ಬಳಕೆ ಮಾಡದೇ ಹೇಳಬೇಕೆಂದಿದ್ದ ಮಾತನ್ನು ದ್ರಾವಿಡ್ ಮುಂದುವರಿಸಿದರು. ಇದನ್ನೂ ಓದಿ: ಮುಂದಿನ ಐಪಿಎಲ್‌ಗೂ ಧೋನಿ ಚೆನ್ನೈ ತಂಡ ನಾಯಕ

Live Tv
[brid partner=56869869 player=32851 video=960834 autoplay=true]

Share This Article