CricketLatestLeading NewsMain PostSports

ಜಡೇಜಾ ಅನುಪಸ್ಥಿತಿಯಲ್ಲಿ ಪಂತ್, ಹೂಡಾ, ಅಕ್ಷರ್ ಪಟೇಲ್ ನಡುವೆ ಪ್ಲೇಯಿಂಗ್ 11 ಪೈಪೋಟಿ

ದುಬೈ: ಏಷ್ಯಾ ಕಪ್‍ನ ಸೂಪರ್ ಫೋರ್ ಹಂತದ ಎರಡನೇ ಪಂದ್ಯ ಇಂದು ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆಯಲಿದೆ. ಭಾರತದ ಆಲ್‍ರೌಂಡರ್ ರವೀಂದ್ರ ಜಡೇಜಾ ಗಾಯಳುವಾಗಿ ತಂಡದಿಂದ ಹೊರಗುಳಿದಿದ್ದಾರೆ. ಇವರ ಸ್ಥಾನದಲ್ಲಿ ಆಡಲು ರಿಷಭ್ ಪಂತ್, ದೀಪಕ್ ಹೂಡಾ ಮತ್ತು ಅಕ್ಷರ್ ಪಟೇಲ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ಸೂಪರ್ ಫೋರ್ ಹಂತದ ಪಂದ್ಯ ಮಹತ್ವ ಪಡೆದುಕೊಂಡಿದ್ದು, ಈಗಾಗಲೇ ಎರಡು ತಂಡಗಳು ಗೆಲ್ಲಲೇ ಬೇಕೆಂಬ ಹುಮ್ಮಸ್ಸಿನಲ್ಲಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದೆ. ಎರಡು ತಂಡದಲ್ಲೂ ಕೂಡ ಗಾಯದ ಸಮಸ್ಯೆ ಕಾಡುತ್ತಿದೆ. ಭಾರತದ ಪರ ಜಡೇಜಾ ಗಾಯದಿಂದಾಗಿ ಟೂರ್ನಿಯಿಂದಲೇ ಹೊರನಡೆದಿದ್ದಾರೆ. ಇದು ಟೀಂ ಇಂಡಿಯಾಗೆ ಹೊಡೆತ ನೀಡಿದೆ. ಇದನ್ನೂ ಓದಿ: ಮುಂದಿನ ಐಪಿಎಲ್‌ಗೂ ಧೋನಿ ಚೆನ್ನೈ ತಂಡ ನಾಯಕ

ಈ ನಡುವೆ ಜಡೇಜಾ ಸ್ಥಾನ ತುಂಬಲು ಆಲ್‍ರೌಂಡರ್ ಮತ್ತು ಬ್ಯಾಟ್ಸ್‌ಮ್ಯಾನ್‌ಗಳ ನಡುವೆ ಪೈಪೋಟಿ ಏರ್ಪಟ್ಟಿದ್ದು, ಜಡೇಜಾರಂತೆ ಸ್ಪಿನ್ ಆಲ್‍ರೌಂಡರ್‌ಗಳಾಗಿ ಅಕ್ಷರ್ ಪಟೇಲ್ ಮತ್ತು ಅಶ್ವಿನ್ ತಂಡದಲ್ಲಿದ್ದಾರೆ. ಜೊತೆಗೆ ದೀಪಕ್ ಹೂಡಾ ಕೂಡ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವುದರಿಂದಾಗಿ ಪ್ಲೇಯಿಂಗ್ 11ನಲ್ಲಿ ಆಡಲು ಈ ಮೂವರ ನಡುವೆ ಪೈಪೋಟಿ ಜೋರಾಗಿದೆ. ಇವರೊಂದಿಗೆ ಪಂತ್ ಕೂಡ ಸೆಣಸಾಡಬೇಕಾದ ಸ್ಥಿತಿ ಇದ್ದು, ನಾಯಕ ಹಾಗೂ ಕೋಚ್‍ಗೆ ತಂಡದ ಆಯ್ಕೆ ತಲೆನೋವು ಶುರುವಾಗಿದೆ. ಇದನ್ನೂ ಓದಿ: T20 ವಿಶ್ವಕಪ್‍ನಿಂದಲೂ ಜಡೇಜಾ ಔಟ್?

ಜಡೇಜಾ ಗಾಯದಿಂದಾಗಿ ಹೊರ ನಡೆದಾಗ ಅವರ ಸ್ಥಾನಕ್ಕೆ ಬಂದ ಅಕ್ಷರ್ ಪಟೇಲ್ ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಳ್ಳುವ ಮುಂಚೂಣಿ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಪಂದ್ಯ ಆರಂಭಕ್ಕೂ ಮುನ್ನ ಯಾರಿಗೆ ನಾಯಕ ಹಾಗೂ ಕೋಚ್ ಅವಕಾಶ ಕಲ್ಪಿಸಿಕೊಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Live Tv

Leave a Reply

Your email address will not be published.

Back to top button