– ಮಾಮೂಲು ವಸೂಲಿಯಿಂದ ಬೇಸತ್ತು ಆತ್ಮಹತ್ಯೆಗೆ ಯತ್ನ
– ಇನ್ಸ್ಪೆಕ್ಟರ್ ಕಿರುಕುಳದಿಂದ ಬೇಸತ್ತಿದ್ದ ಎಎಸ್ಐ
ಹೈದರಾಬಾದ್: ವರ್ಗಾವಣೆಗೆ ಹೆದರಿ ಸಹಾಯಕ ಸಬ್ ಇನ್ಸ್ಪೆಕ್ಟರ್(ಎಎಸ್ಐ) ಬೃಹತ್ ಟ್ಯಾಂಕ್ ಹತ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಎಎಸ್ಐ ನರಸಿಂಹ ಆತ್ಮಹತ್ಯೆಗೆ ಯತ್ನಿಸಿದ್ದು, ಬದಂಗ್ಪೇಟೆ ನಿವಾಸಿಯಾಗಿದ್ದಾರೆ. ಪ್ರಸ್ತುತ ಬಾಲಾಪುರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವರ್ಗಾವಣೆ ಮಾಡಿರುವ ಸುದ್ದಿ ತಿಳಿಯುತ್ತಿದ್ದಂತೆ ಬೃಹತ್ ನೀರಿನ ಟ್ಯಾಂಕ್ ಮೇಲೆ ಏರಿ ಬೆಂಕಿ ಹಚ್ಚಿಕೊಂಡಿದ್ದಾರೆ. ಘಟನೆ ಕುರಿತು ತಿಳಿದ ಪೊಲೀಸರು ತಕ್ಷಣವೇ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿ, ನರಸಿಂಹ ಅವರನ್ನು ಅಪೊಲೊ ಡಿಆರ್ ಡಿಓ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಪರಿಸ್ಥಿತಿ ಗಂಭೀರವಾಗಿದೆ.
Advertisement
ರಾಚಕೊಂಡ ಪೊಲೀಸ್ ಆಯುಕ್ತರ ವ್ಯಾಪ್ತಿಯ ಬಾಲಾಪುರ ಪೊಲೀಸ್ ಠಾಣೆಯಲ್ಲಿ ನರಸಿಂಹ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಇದ್ದಕ್ಕಿದ್ದಂತೆ ಅವರನ್ನು ಸೈಬರಾಬಾದ್ ಕಮಿಷನರೇಟ್ ವ್ಯಾಪ್ತಿಯ ಮಂಡಲ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.
Advertisement
Advertisement
ವರ್ಗಾವಣೆಗೆ ಸಂಬಂಧಿಸಿದಂತೆ ನರಸಿಂಹ ಅವರ ಕುಟುಂಬ ಮೇಲಾಧಿಕಾರಿಯನ್ನು ಆರೋಪಿಸಿದ್ದು, ಇನ್ಸ್ಪೆಕ್ಟರ್ ಸೈದುಲು ಅವರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೈದುಲು ಹಾಗೂ ಇತರ ಹಿರಿಯ ಪೊಲೀಸ್ ಅಧಿಕಾರಿಗಳು ನನ್ನ ತಂದೆಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ನರಸಿಂಹ ಅವರ ಮಗ ಆರೋಪಿಸಿದ್ದಾರೆ. ಇದನ್ನೂ ಓದಿ: ವರ್ಗಾವಣೆ ಖಂಡಿಸಿ 40 ಕಿಮೀ ಓಡಿದ ಪೊಲೀಸ್
Advertisement
ಸೈದುಲು ಹಾಗೂ ಇತರ ಹಿರಿಯ ಅಧಿಕಾರಿಗಳು ಅವರ ಇಚ್ಛೆಗೆ ವಿರುದ್ಧವಾಗಿ ಮಾಮೂಲು ಸಂಗ್ರಹಿಸುವಂತೆ ಪೀಡಿಸುತ್ತಿದ್ದರು ಎಂದು ನರಸಿಂಹ ಅವರ ಮಗ ಆರೋಪಿಸಿದ್ದಾರೆ. ಆದರೆ ಇದಕ್ಕೆ ಪ್ರತಿಯಾಗಿ ಪೊಲೀಸರು ಹೇಳಿಕೆ ನೀಡಿದ್ದು, ನರಸಿಂಹ ಅವರು ಬೇಜಾವಾಬ್ದಾರಿಯಿಂದಾಗಿ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್ 15ರಂದು ಫಂಕ್ಷನ್ ಹಾಲ್ನಲ್ಲಿ ವಿಪರೀತ ಶಬ್ದ ಬರುತ್ತಿರುವ ಬಗ್ಗೆ ದೂರು ಬಂತು. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ, ನರಸಿಂಹ ಅವರು ಗಲಾಟೆ ಮಾಡುತ್ತಿದ್ದರು. ಅಲ್ಲದೆ ನರಸಿಂಹ ಗಸ್ತು ಸಿಬ್ಬಂದಿಯನ್ನು ನಿಂದಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರು ಮದ್ಯದ ಅಮಲಿನಲ್ಲಿದ್ದರು. ಈ ಘಟನೆ ನಂತರ ನರಸಿಂಹ ಅವರನ್ನು ವರ್ಗಾಯಿಸಲು ಹಿರಿಯ ಅಧಿಕಾರಿಗಳು ನಿರ್ಧರಿಸಿದರು ಎಂದು ಆರೋಪಿ ಪೊಲೀಸರು ವಿವರಿಸಿದರು.
ರಾಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಭಾಗವತ್ ಈ ಕುರಿತು ಮಾತನಾಡಿ, ಆರೋಪಿ ಪೊಲೀಸ್ ಸಿಬ್ಬಂದಿಯನ್ನು ಪ್ರಧಾನ ಕಚೇರಿಗೆ ಕರೆಸಿಕೊಳ್ಳುತ್ತೇನೆ. ನರಸಿಂಹ ಅವರ ಕುಟುಂಬದವರ ಜೊತೆ ನಾನು ಮಾತನಾಡಿದ್ದೇನೆ. ಚಿಕಿತ್ಸೆ ವೆಚ್ಚವನ್ನು ನಾವು ನೋಡಿಕೊಳ್ಳುತ್ತೇವೆ. ವರದಿ ಸಲ್ಲಿಸಿದ ನಂತರ ಆರೋಪಗಳ ಕುರಿತು ಪರಿಶೀಲಿಸಲಾಗುವುದು. ಮುಂದಿನ ಕ್ರಮ ಕೈಗೊಳ್ಳುವ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿದರು.