ಚಿಕ್ಕಬಳ್ಳಾಪುರ: ತಾಲೂಕಿನ ಪೇರೇಸಂದ್ರ ಗ್ರಾಮದ ಎಎಸ್‌ಐ (ASI) ನಾರಾಯಣಸ್ವಾಮಿ ಮನೆಯಲ್ಲಿ ದರೋಡೆ ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ (Chikkaballapur) ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ (Arrest) ಯಶಸ್ವಿಯಾಗಿದ್ದಾರೆ.
ಉತ್ತರ ಪ್ರದೇಶದ ಅರೀಫ್(35) ಹಾಗೂ ಜಮಷೀದ್ ಖಾನ್(27) ಸೇರಿದಂತೆ ಆಂಧ್ರಪ್ರದೇಶದ ಪಟಾಣ್ ಯಾರಿಸ್ ಖಾನ್(30) ಬಂಧಿತರು. ನ. 8ರಂದು ಬಾಗೇಪಲ್ಲಿ ಎಎಸ್‌ಐ ನಾರಾಯಣಸ್ವಾಮಿ ಮನೆ ಮೇಲೆ ದಾಳಿ ಮಾಡಿ ಮನೆಯಲ್ಲಿದ್ದ ಮಹಿಳೆಯರಿಗೆ ಚಾಕು ತೋರಿಸಿ ಬೆದರಿಸಿ, ಮನೆಯಲ್ಲಿದ್ದ ನಗನಾಣ್ಯ ಲೂಟಿ ಮಾಡಿದ್ದರು. ಅಡ್ಡ ಬಂದಿದ್ದ ಮನೆ ಮಾಲೀಕ ನಾರಾಯಣಸ್ವಾಮಿ ಮೇಲೆ ಹಲ್ಲೆ ನಡೆಸಿದ್ದರು. ಜೊತೆಗ ನಾರಾಯಣಸ್ವಾಮಿ ಪುತ್ರ ಶರತ್ ಕಾಲಿಗೆ ಗುಂಡೇಟು ಹಾರಿಸಿದ್ದರು.
Advertisement
Advertisement
ಈ ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು ಸದ್ಯ ಮೂವರನ್ನ ಬಂಧಿಸಿದ್ದು, ಬಂಧಿತರಿಂದ ಮೂರು ನಾಡ ಪಿಸ್ತೂಲ್‌ಗಳು, ಖಾಲಿ ಮ್ಯಾಗ್ಜಿನ್ ಹೊಂದಿರುವ ಒಂದು ಪಿಸ್ತೂಲ್, 3 ಲಕ್ಷದ 41000 ನಗದು, ಕೃತ್ಯಕ್ಕೆ ಬಳಿಸಿದ ಕಾರು, 71 ಗ್ರಾಂ ತೂಕದ ಮಾಂಗಲ್ಯ ಸರ, 21 ಬೆಳ್ಳಿಯ ಪೂಜಾ ಸಾಮಾಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಬಸ್ ನಿಲ್ದಾಣ ತೆರವು ಮಾಡಲ್ಲ, ಗುಂಬಜ್ ಮಾತ್ರ ತೆರವು ಮಾಡ್ತೇನೆ: ಪ್ರತಾಪ್ ಸಿಂಹ
Advertisement
Advertisement
ಪ್ರಮುಖ ಆರೋಪಿಗಳು ಉತ್ತರ ಪ್ರದೇಶಕ್ಕೆ ಎಸ್ಕೇಪ್ ಆಗಿದ್ದು, ಪೊಲೀಸರು ಉತ್ತರ ಪ್ರದೇಶದಲ್ಲಿ ಆರೋಪಿಗಳನ್ನು ಅರೆಸ್ಟ್ ಮಾಡುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಇನ್ನೂ ಘಟನೆಯಲ್ಲಿ ಗಾಯಾಗೊಂಡಿದ್ದ ಎಎಸ್‌ಐ ನಾರಾಯಣಸ್ವಾಮಿ ಹಾಗೂ ಆತನ ಪುತ್ರ ಶರತ್ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಇದನ್ನೂ ಓದಿ: ಅಶ್ವಾರೋಹಣ ಸ್ಪರ್ಧೆಗೆ ಅಭ್ಯಾಸ ನಡೆಸುತ್ತಿದ್ದ ಬಿಎಸ್‌ಎಫ್ ಯೋಧನಿಗೆ ಕುದುರೆ ತುಳಿದು ಸಾವು