LatestMain PostNational

ಅಶ್ವಾರೋಹಣ ಸ್ಪರ್ಧೆಗೆ ಅಭ್ಯಾಸ ನಡೆಸುತ್ತಿದ್ದ ಬಿಎಸ್‌ಎಫ್ ಯೋಧನಿಗೆ ಕುದುರೆ ತುಳಿದು ಸಾವು

ಭೋಪಾಲ: ಅಶ್ವಾರೋಹಣ ಸ್ಪರ್ಧೆಗೆ (Equestrian Championship) ಅಭ್ಯಾಸ ನಡೆಸುತ್ತಿದ್ದ ವೇಳೆ ಬಿಎಸ್‌ಎಫ್ ಯೋಧನೊಬ್ಬ (BSF Jawan) ಕುದುರೆ (Horse)ತುಳಿತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಮಧ್ಯ ಪ್ರದೇಶದ (Madhya Pradesh) ಗ್ವಾಲಿಯರ್ (Gwalior) ಜಿಲ್ಲೆಯ ತೇಕನ್‌ಪುರ (Tekanpur) ಬಿಎಸ್‌ಎಫ್ ಅಕಾಡೆಮಿಯಲ್ಲಿ ನಡೆದಿದೆ.

ಮೃತಪಟ್ಟ ಬಿಎಸ್‌ಎಫ್ ಕಾನ್‌ಸ್ಟೆಬಲ್ ಜಿಡಿ ಥೋರಟ್ ಸುಧೀರ್ ಫಂಢರಿ ನಾಥ್ (33) ಮಹಾರಾಷ್ಟ್ರದ ಪುಣೆ ನಿವಾಸಿಯಾಗಿದ್ದು, ಬಿಎಸ್‌ಎಫ್‌ನ ಹಾರ್ಸ್ ವಿಂಗ್‌ನಲ್ಲಿ ನಿಯೋಜಿಸಲ್ಪಟ್ಟಿದ್ದರು. ಅಭ್ಯಾಸದ ವೇಳೆ ಅವರ ಹಣೆಗೆ ಕುದುರೆ ಒದ್ದಿದ್ದ ಪರಿಣಾಮ ನಾಥ್ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಅವರನ್ನು ಬಿಎಸ್‌ಎಫ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರು ಅಲ್ಲಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬಸ್ ನಿಲ್ದಾಣ ತೆರವು ಮಾಡಲ್ಲ, ಗುಂಬಜ್ ಮಾತ್ರ ತೆರವು ಮಾಡ್ತೇನೆ: ಪ್ರತಾಪ್ ಸಿಂಹ

ವರದಿಗಳ ಪ್ರಕಾರ ಯೋಧನ ಸಾವಿನ ಬಳಿಕವೂ ಸ್ಥಳೀಯ 3 ಠಾಣೆಗಳ ನಡುವೆ ವಾಗ್ವಾದ ಏರ್ಪಟ್ಟಿತ್ತು. ಪಿಂಚೋರ್, ಬಿಲೌವಾ ಹಾಗೂ ದಾಬ್ರಾ ಪೊಲೀಸ್ ಠಾಣೆಗಳು ನ್ಯಾಯವ್ಯಾಪ್ತಿಯನ್ನು ನಿರ್ಧರಿಸುವಲ್ಲಿ ಜಗಳ ಏರ್ಪಟ್ಟಿದ್ದರಿಂದ ಮೃತದೇಹದ ಮರಣೋತ್ತರ ಪರೀಕ್ಷೆ ವಿಳಂಬವಾಗಿತ್ತು. ಬಳಿಕ ತೇಕನ್‌ಪುರ ಠಾಣೆಯ ಇನ್‌ಚಾರ್ಜ್ ದೇವೇಂದ್ರ ಲೋಧಿ ಅವರಿಗೆ ಮರಣೋತ್ತರ ಪರೀಕ್ಷೆಯ ಜವಾಬ್ದಾರಿ ನೀಡಲಾಯಿತು. ಇದನ್ನೂ ಓದಿ: ನನ್ನನ್ನು ರಕ್ಷಿಸು, ಇಲ್ಲದಿದ್ರೆ ಆತ ಕೊಂದು ಬಿಡ್ತಾನೆ- ಸ್ನೇಹಿತನಿಗೆ ಮೊದಲೇ ತಿಳಿಸಿದ್ದ ಶ್ರದ್ಧಾ!

41ನೇ ಅಖಿಲ ಭಾರತ ಪೊಲೀಸ್ ಕುದುರೆ ಸವಾರಿ ಸ್ಪರ್ಧೆಯನ್ನು (ಈಕ್ವೆಸ್ಟ್ರಿಯನ್ ಚಾಂಪಿಯನ್‌ಶಿಪ್) ನವೆಂಬರ್ 14ರಿಂದ 26ರ ವರೆಗೆ ಜಿಲ್ಲೆಯ ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಅಕಾಡೆಮಿ ತೇಕನ್‌ಪುರದಲ್ಲಿ ಆಯೋಜಿಸಲಾಗಿದೆ. ಇದಕ್ಕಾಗಿ ಯೋಧ ಅಭ್ಯಾಸ ನಡೆಸುತ್ತಿದ್ದ ವೇಳೆ ದುರ್ಘಟನೆ ನಡೆದಿದೆ.

Live Tv

Leave a Reply

Your email address will not be published. Required fields are marked *

Back to top button