ಅಪ್ಪು (Appu) ಮಹಾ ಕನಸನ್ನು ನನಸಾಗಿಸುತ್ತಿದ್ದಾರೆ ಪತ್ನಿ ಅಶ್ವಿನಿ. ಅಂದು ಪಾರ್ವತಮ್ಮ ಮಾಡಿದ ಕಾಯಕವನ್ನು ಮುಂದವರೆಸಿಕೊಂಡು ಹೋಗುತ್ತಿದ್ದಾರೆ. ರಾಜ್ ಹೇಗೆ ಪತ್ನಿ ಯನ್ನು ಬೆಂಬಲಿಸಿದ್ದರೊ ಅದೇ ರೀತಿ ಅಶ್ವಿನಿ(Ashwini Puneeth Rajkumar) ಹಿಂದೆ ಪುನೀತ್ ಇದ್ದರು. ಮೂವರು ದೇವರ ಆಶೀರ್ವಾದದಿಂದ ಇಂದು ಅಶ್ವಿನಿ ಹೊಸ ಸಾಹಸ ಮಾಡುತ್ತಿದ್ದಾರೆ.
ಅಪ್ಪು ಜೊತೆಗಿರದ ಜೀವ ಎಂದೆಂದಿಗೂ ಜೀವಂತ. ಹೀಗೊಂದು ಮಾತನ್ನು ಎಲ್ಲರೂ ಹೇಳುತ್ತಿದ್ದಾರೆ. ಆದರೆ ಕಣ್ಣ ಮುಂದೆ ಇಲ್ಲದ ಜೀವವನ್ನು ನೆನೆಸಿಕೊಂಡು ಸಂಕಟ ಪಡುತ್ತಾರೆ. ಒಂದೊಂದು ದಿನವನ್ನು ಒಂದೊಂದು ವರ್ಷದಂತೆ ಕಳೆಯುತ್ತಿದ್ದಾರೆ. ಇನ್ನು ಅಶ್ವಿನಿ ಹಾಗೂ ಮಕ್ಕಳ ಸ್ಥಿತಿ ಏನಾಗಿರಬೇಡ? ಎಲ್ಲವೂ ದೈವೆಚ್ಛೆ. ಹೀಗಂತ ಅಂದುಕೊಂಡು ಅಪ್ಪು ಕನಸನ್ನು ನನಸು ಮಾಡುವತ್ತ ಹೊಸ ಹೆಜ್ಜೆ ಇಟ್ಟಿದ್ದಾರೆ ಅಶ್ವಿನಿ. ಮಹಿಳೆಯರ ಶಕ್ತಿಯನ್ನು ಕರುನಾಡಿಗೆ ತೋರಿಸಲು ಸಜ್ಜಾಗಿದ್ದಾರೆ.
ಪಾರ್ವತಮ್ಮ ರಾಜ್‌ಕುಮಾರ್ (Parvatamma Rajkumar) ಕನ್ನಡದ ಧೀಮಂತ ನಿರ್ಮಾಪಕಿ. ಅವರಿಗೆ ಬೆಂಬಲವಾಗಿ ನಿಂತಿದ್ದರು ಅಣ್ಣಾವ್ರು. ಒಬ್ಬ ಹೆಣ್ಣು ಮಗಳು ನಿರ್ಮಾಪಕಿಯಾಗಲು ಹೇಗೆ ಸಾಧ್ಯ? ಆಡಿಕೊಂಡವರು ಇದ್ದರು. ಅದಕ್ಕೆಲ್ಲ ಸೊಪ್ಪು ಹಾಕದೆ, ಎದೆಗುಂದದೆ ಮುಂದಿಟ್ಟ ಹೆಜ್ಜೆ ಹಿಂದಿಡದ ಕಾರಣಕ್ಕೆ ಪಾರ್ವತಮ್ಮ ಹೆಡ್ಡಾಫೀಸ್ ಎಂದು ಕರೆಸಿಕೊಂಡರು. ಮಹಿಳೆಯರಿಗಾಗಿ ಅವರು ಶಕ್ತಿಧಾಮವನ್ನು ಸ್ಥಾಪಿಸಿದ್ದು ಗೊತ್ತು. ಹಾಗೆಯೇ ಬಣ್ಣದ ಲೋಕದಲ್ಲಿ ಅನೇಕ ಹೊಸ ನಟಿಯರಿಗೆ ಅವಕಾಶ ಕೊಟ್ಟು ಗಾಢ್ ಮದರ್ ಎಂದು ಕರೆಸಿಕೊಡರು. ಇದನ್ನೂ ಓದಿ:ತಮಿಳಿಗೆ ಹಾರಿದ ‘ಸೀತಾರಾಮಂ’ ನಟಿ- ಶಿವಕಾರ್ತಿಕೇಯನ್‌ಗೆ ಮೃಣಾಲ್ ನಾಯಕಿ
ರಾಜ್‌ಕುಮಾರ್ ಸಿನಿಮಾಗಳಿಗೆ ನಾಯಕಿಯರನ್ನು ಆಯ್ಕೆ ಮಾಡುತ್ತಿದ್ದರು ಪಾರ್ವತಮ್ಮ. ಜಯಮಾಲಾ, ಮಂಜುಳಾ, ಆರತಿ. ಇವರನ್ನು ರಾಜ್ ಚಿತ್ರಗಳಿಗೆ ಆಯ್ಕೆ ಮಾಡಿ ಅವರಿಗೆಲ್ಲ ಸ್ಟಾರ್ ಪಟ್ಟ ನೀಡಿದರು. ಶಿವಣ್ಣನಿಗಾಗಿ ಸುಧಾರಾಣಿ, ಆಶಾರಾಣಿ, ಅನು ಪ್ರಭಾಕರ್ ಸೇರಿದಂತೆ ಹಲವು ನಟಿಯರು ಪಾರ್ವತಮ್ಮನವರ ಆಶೀರ್ವಾದ ಪಡೆದರು. ರಾಘಣ್ಣನ ನಂಜುಂಡಿ ಕಲ್ಯಾಣ್‌ಕ್ಕೆ ಮಾಲಾಶ್ರೀ. ಅಪ್ಪು ಚಿತ್ರಗಳಿಗೆ ರಕ್ಷಿತಾ, ರಮ್ಯಾ ಬಂದು ಈಗಲೂ ಹೆಸರು ಉಳಿಸಿಕೊಂಡಿರು. ಈ ನಟಿಯರಿಗೆ ಸ್ತ್ರಿ ಶಕ್ತಿಯಾಗಿದ್ದು ಪಾರ್ವತಮ್ಮ.
ಇದೀಗ ಅಶ್ವಿನಿ ಇನ್ನೊಂದು ರೂಪದಲ್ಲಿ ಮಹಿಳೆಯರಿಗೆ ಬಲ ನೀಡಲು ತಯಾರಾಗಿದ್ದಾರೆ. ಪಿಆರ್‌ಕೆ ಬ್ಯಾನರ್‌ನಲ್ಲಿ ಮಹಿಳೆಯರಿಗೆ ಹೆಚ್ಚು ಒತ್ತು ನೀಡಲು ನಿರ್ಧರಿಸಿದ್ದಾರೆ. ಮಹಿಳಾ ನಿರ್ದೇಶಕಿರು, ಕತೆಗಾರರು, ಸಂಭಾಷಣೆಕಾರರು, ನಟಿಯರು. ಹೀಗೆ ಎಷ್ಟು ಸಾಧ್ಯವೋ ಅಷ್ಟು ಕಡೆ ಮಹಿಳೆಯರಿಗೆ ಮೊದಲ ಆದ್ಯತೆ ನೀಡುತ್ತೇನೆ ಎಂದು ಘೋಷಿಸಿದ್ದಾರೆ. ಅಪ್ಪು ಕೂಡ ಪತ್ನಿಯನ್ನು ಅನುಮೋದಿಸುತ್ತಿದ್ದರು. ಈಗದನ್ನು ಇನ್ನಷ್ಟು ಪ್ರಬುದ್ಧವಾಗಿ ಮಾಡುತ್ತಿದ್ಧಾರೆ ಅಶ್ವಿನಿ. ಮೂವರು ದೇವರು ಹಾರೈಸುತ್ತಿದ್ದಾರೆ. ಅಶ್ವಿನಿ ಅವರ ನಿಷ್ಕಲ್ಮಶ ಮನಸ್ಸಿಗೆ ಕನ್ನಡಿಗರು ಕೈ ಹಿಡಿಯದಿರುತ್ತಾರಾ ಹೇಳಿ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]